Klive Special Article “ಚೈತ್ರ”ಎಂಬ ಪದ ಕೇಳಿದ ಕೂಡಲೇ ಸಮೃದ್ಧ ಹಸಿರು,ಚಿಗುರು,ಕೋಗಿಲೆಯ ಕುಹೂಕುಹೂ ಇಂಪಾದ ಗಾನ ,ಮಾವು, ಬೇವು ಮಲ್ಲಿಗೆಯ ಘಮ ಘಮ…ಅಬ್ಬಾ !ನಿಸರ್ಗ ಸೌಂದರ್ಯದ ಗುಟ್ಟೇ ನಮ್ಮೆದುರು ಮೈದಳೆದು ನಿಲ್ಲುತ್ತದೆ.ಮನದಂಗಳದಲ್ಲಿ
ಹೊಸತರಂಗಗಳು ಪಲ್ಲವಿ-ಪಂಕ್ತಿಗಳಾಗಿ ಹಾದು ಹೋಗುತ್ತವೆ.ಯುಗಾದಿ ಹಿಂದೂಗಳಿಗೆ ಹೊಸವರ್ಷದ
ಆರಂಭದ ಮೊದಲನೆಯ ದಿನ. ನಾವು ಹೊಸ ವರ್ಷವನ್ನು ಹೊಸ ಸಂವತ್ಸರವೆಂದು ಕರೆಯುತ್ತೇವೆ.
ಮತ್ತು ಹೊಸ ಸಂವತ್ಸರದ ಪ್ರಾರಂಭದ ದಿನ ,ಹೊಸ ಸಂಕಲ್ಪಗಳನ್ನು ಮಾಡಿ ಮುನ್ನಡಿಯಿಡುವ ದಿನವೂ ಹೌದು.ಹಿಂದಿನ ವರ್ಷದ ಸಾಧನೆಯನ್ನು ಅವಲೋಕಿಸಿ, ಈ ಸಂವತ್ಸರದಲ್ಲಿ ನಮ್ಮ ಪಾಲಿಗೆ ಬೇಕಾದ ನೀತಿ-ನಿಯಮಗಳನ್ನು ಹಾಕಿಕೊಳ್ಳುವ ಶುಭಗಳಿಗೆ.ವೇದ
ಮಂತ್ರದಲ್ಲಿವರ್ಷವನ್ನುರಥಕ್ಕೂ ,ಆಯನಗಳನ್ನು(ಉತ್ತರಾಯಣ,ದಕ್ಷಿಣಾಯನ)ಅದರ ಚಕ್ರಗಳಿಗೂ ಹೋಲಿಕೆ ಮಾಡಿದ್ದಾರೆ.ಆದ್ದರಿಂದವರ್ಷವನ್ನುಯುಗಎಂದೂ,ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.
ಯುಗಾದಿಯು ಚಾಂದ್ರಮಾನ ಪದ್ಧತಿಯ ಹೊಸವರ್ಷದ ಪ್ರಾರಂಭದ ದಿನ.ಯುಗಾದಿ ಹಬ್ಬಕ್ಕೆ ಮತ್ತು ದೀಪಾವಳಿ ಹಬ್ಬಕ್ಕೆ ಒಂದು ನಾಣ್ಣುಡಿ ಇದೆ..
“ಉಂಡದ್ದೇ ಉಗಾದಿ,ಮಿಂದದ್ದೇ ದೀಪಾವಳಿ”ಎಂದು.ಯುಗಾದಿಯಲ್ಲಿ ಊಟದ ವೈವಿಧ್ಯತೆಯೇ ಒಂದು ಸೊಗಸು.
ಕ್ರೋಧ ಎಂದರೆ ಸಿಟ್ಟು ಎಂದರ್ಥ. ಸಿಟ್ಟುಮಾಡುವಂತೆ ಪ್ರೇರೇಪಿಸುವವನೂ ಪರಮಾತ್ಮನೇ,ಸಿಟ್ಟನ್ನು ದಮನ
ಮಾಡುವವನೂ ಆ ಪರಮಾತ್ಮನೇ.
ನಾವೆಲ್ಲರೂ ಅವನು ಆಡಿಸಿದ ಹಾಗೆ ಆಡುವ ಸೂತ್ರದ ಬೊಂಬೆಗಳು ಮಾತ್ರ.
ಯುಗಾದಿ ಹಬ್ಬವನ್ನು ಬೇವುಬೆಲ್ಲದ ಹಬ್ಬವೆಂತಲೂ ಕರೆಯುತ್ತೇವೆ.ಬೇವು ಬೆಲ್ಲ ಜೀವನದಲ್ಲಿ ಬರುವ ಕಷ್ಟಸುಖಗಳ ಸಂಕೇತ ವಾಗಿದೆ.ಯುಗಾದಿ ಎಂದಾಕ್ಷಣ
Yugadhi Festival ಬಾಲ್ಯದಲ್ಲಿ ನಾವು ಸೇವಿಸುತ್ತಿದ್ದ ಬೇವು-ಬೆಲ್ಲದ ನೆನಪಾ
ಗುತ್ತದೆ.ಆಗ ನಮ್ಮ ಹಿರಿಯರು ದೇವರಪೂಜೆ ಮಾಡಿದ ಮೇಲೆ ಬೇವುಬೆಲ್ಲದ ಮಿಶ್ರಣವನ್ನು ಕೊಡುತ್ತಿದ್ದರು. ಬೆಲ್ಲದ ಸಿಹಿ ಬೇಕೆನಿಸುತ್ತಿತ್ತು.ಬೇವಿನ ಕಹಿ ನಿಜವಾಗಿಯೂ ಬೇಡವೆನಿಸುತ್ತಿತ್ತು.ಬಾಲ್ಯದಲ್ಲಿ ಬೇವುಬೆಲ್ಲದ ಸಂಕೇತ ಏನೆಂಬುದು ಗೊತ್ತಿರಲಿಲ್ಲ.ಬೇವು ಬೆಲ್ಲವನ್ನು ಸ್ವೀಕರಿಸುವ ಸಂಕೇತವೆಂದರೆ ಜೀವನದಲ್ಲಿ ಬರುವ ಕಷ್ಟಸುಖಗಳನ್ನು ಸಮರಸವಾಗಿ ಕಾಣಬೇಕು ಎಂದು ಸೂಚಿಸುತ್ತದೆ.ಬದುಕು ಬೇವುಬೆಲ್ಲದಂತೆ ಸುಖವೂ ಇರುತ್ತದೆ,ದು:ಖವೂ ಇರುತ್ತದೆ.ಸುಖ ಬಂದಾಗ ಹಿಗ್ಗದೆ,ದು:ಖ ಬಂದಾಗ ಕುಗ್ಗದೆ ಬಾಳನ್ನು ನಡೆಸಬೇಕುಎಂಬ ಸಂದೇಶವನ್ನು ಬೇವುಬೆಲ್ಲ ಕೊಡುತ್ತದೆ.
ಪರಮಾತ್ಮನೇ ಈ ಸಂವತ್ಸರದಲ್ಲಿ ಕ್ರೋಧಿ ನಾಮಕನಾಗಿ
ಬರುತ್ತಿದ್ದಾನೆ.ಈ ಭಗವಂತನು ಎಲ್ಲೆಡೆ ಸುಖ,ಶಾಂತಿ
ನೆಮ್ಮದಿಗಳನ್ನು ನೆಲೆಸುವಂತೆ ಮಾಡಲಿ.ನಮ್ಮೊಳಗಿನ ದುಷ್ಟ ಶಕ್ತಿಗಳನ್ನು ನಿಯಂತ್ರಿಸಿ,ನಾಶಮಾಡಿ ಜ್ಞಾನದ
ಬೆಳಕನ್ನು ಎಲ್ಲರಿಗೂ ಕರುಣಿಸುವಂತೆ ಪ್ರಾರ್ಥಿಸೋಣ.
ಶೋಭನಕೃತ್ ಸಂವತ್ಸರಕೆ ಶುಭ ವಿದಾಯ ಹೇಳೋಣ
ಮತ್ತು ನೂತನ ಸಂವತ್ಸರ ಕ್ರೋಧಿನಾಮಸಂವತ್ಸರವನ್ನು ಸಂತಸದಿಂದ ಸ್ವಾಗತಿಸೋಣ.
ನೂತನ ಸಂವತ್ಸರ ಎಲ್ಲರಿಗೂ ಸನ್ಮಂಗಳವನ್ನು ತರಲಿ ಎಂದು ಪ್ರಾರ್ಥಿಸೋಣ.
ಎನ್.ಜಯಭೀಮ್ ಜೊಯ್ಸ್