Friday, September 27, 2024
Friday, September 27, 2024

Yugadhi Festival ಆರ್ ಎಸ್ಎಸ್ ಯುಗಾದಿ ಉತ್ಸವದಲ್ಲಿ ಹಾಜರಿದ್ದ ಬಿವೈಆರ್ & ಈಶ್ವರಪ್ಪ

Date:

Yugadhi Festival ಆರ್​​​.ಎಸ್.ಎಸ್​​​. ಯುಗಾದಿ ಉತ್ಸವದಲ್ಲಿ ಬಿಜೆಪಿ ಬಂಡಾಯ ನಾಯಕ ಕೆ.ಎಸ್​​.ಈಶ್ವರಪ್ಪ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ, ಬಿಜೆಪಿಯಿಂದ ಅಂತರ‌ಕಾಯ್ದುಕೊಂಡಿರುವ ಈಶ್ಬರಪ್ಪನವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿದ್ದಾರೆ.

ಕೆ.ಎಸ್. ಈಶ್ವರಪ್ಪ ಇಂದು ಆರ್​ಎಸ್​ಎಸ್​ನ ಯುಗಾದಿ ಉತ್ಸವದಲ್ಲಿ ಪಾಲ್ಗೊಂಡು ಬೇವು-ಬೆಲ್ಲ ಸ್ವೀಕರಿಸಿ, ತೆರಳಿದ್ದಾರೆ. ಇಲ್ಲಿ ಮತ್ತೊಂದು ವಿಷಯವೆಂದರೆ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಕೂಡ ಇದೇ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆದರೆ, ಈಚೆ ಬದಿ ಈಶ್ವರಪ್ಪ ಕೂತಿದ್ದರೆ, ಆಚೆ ಬದಿಯಲ್ಲಿ ಬಿ.ವೈ. ರಾಘವೇಂದ್ರ ಕೂತಿದ್ದು ನಾನೊಂದು ತೀರ – ನೀನೊಂದು ತೀರ ಎಂಬುವಂತಾಗಿತ್ತು. ಇದು ಆರ್​ಎಸ್​ಎಸ್​ನ ಪ್ರಮುಖರು ಸೇರಿದಂತೆ, ಎಲ್ಲ ಕಾರ್ಯಕರ್ತರಿಗೂ ಕಸಿವಿಸಿ ಉಂಟು ಮಾಡಿತು. ಆರ್.ಎಸ್.ಎಸ್. ಮುಖಂಡರು ಅದನ್ನು ಎಲ್ಲಿಯೂ ತೋರಿಸಿಕೊಳ್ಳದೇ ಉತ್ಸವ ಮುಗಿಸಿ ಹೊರಟರು.

ಈಶ್ವರಪ್ಪ ಆರ್​ಎಸ್​ಎಸ್​ನ ಕಟ್ಟಾಳುವಾಗಿದ್ದರೂ ಕೂಡ, ಸಮವಸ್ತ್ರ, ಖಾಕಿ ಪ್ಯಾಂಟ್ ಧರಿಸದೇ ಕೇವಲ ಕಪ್ಪು ಟೋಪಿ ಧರಿಸಿ, ಬಿಳಿ ಜುಬ್ಬ ಪೈಜಾಮದಲ್ಲಿ ಇಂದು ಆಗಮಿಸಿದ್ದು ವಿಶೇಷವಾಗಿತ್ತು. ಬಿ.ವೈ. ರಾಘವೇಂದ್ರ ಆರ್​ಎಸ್​ಎಸ್​ನ ಸಮವಸ್ತ್ರದಲ್ಲಿಯೇ ಆಗಮಿಸಿದ್ದು, ಅಲ್ಲಿ ನೆರೆದಿದ್ದ ಆರ್​ಎಸ್​ಎಸ್​ನ ಕಾರ್ಯಕರ್ತರು, ರಾಘವೇಂದ್ರ ಅವರ ಜೊತೆ ಸೆಲ್ಫಿ ಹಾಗೂ ಫೋಟೋಗೆ ಮುಗಿ ಬಿದ್ದಿದ್ದರು.

ಈ ವೇಳೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಎಲ್ಲ ಹಿಂದೂಗಳು ಒಂದಾಗಬೇಕೆಂಬ ಸ್ಫೂರ್ತಿ ನೀಡುವ ಯುಗಾದಿ ಹಬ್ಬ ಇದಾಗಿದೆ. ಆರ್​ಎಸ್​​ಎಸ್​​ನ ಯುಗಾದಿ ಉತ್ಸವ ಆಚರಣೆಯಲ್ಲಿ ನಾನು ಒಬ್ಬ ಸ್ವಯಂ ಸೇವಕನಾಗಿ ಸಂತೋಷದಿಂದ ಬಂದಿದ್ದೇನೆ ಎಂದು ಹೇಳಿದರು. ಇದೇ ವೇಳೆ, ಯುಗಾದಿ ಉತ್ಸವದಂದು ಒಟ್ಟಾಗುವ ಬಗ್ಗೆ ಪ್ರಶ್ನೆಗೆ ಉತ್ತರಿಸದೇ ಹೊರಟುಬಿಟ್ಟರು.

Yugadhi Festival ನಂತರ ಮಾತನಾಡಿದ ಬಿ.ವೈರಾಘವೇಂದ್ರ, ಈ ಉತ್ಸವದಲ್ಲಿ ನಾನು ಒಬ್ಬ ಎಂಪಿಯಾಗಲಿ, ಪುರಸಭೆ ಸದಸ್ಯನಾಗಲಿ, ಬಿಜೆಪಿ ಅಭ್ಯರ್ಥಿಯಾಗಿ ಭಾಗಿಯಾಗಿಲ್ಲ. ಆರ್​ಎಸ್​ಎಸ್​ನ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ವರ್ಷದಲ್ಲಿ ನಡೆಯುವ 6 ಉತ್ಸವಗಳಲ್ಲಿ ಯುಗಾದಿ ಉತ್ಸವವೂ ಕೂಡ ಒಂದಾಗಿದ್ದು, ಯುಗಾದಿ ಉತ್ಸವದ ಜೊತೆಗೆ ಆರ್​ಎಸ್​ಎಸ್​ನ ಸಂಸ್ಥಾಪಕರಾದ ಹೆಡ್ಗೆವಾರ್ ಅವರ ಜನ್ಮ ದಿನವೂ ಕೂಡ ಇಂದಾಗಿದೆ. ಈ ಹಿನ್ನೆಲೆಯಲ್ಲಿಯೂ ಕೂಡ ಇಂದಿನ ಉತ್ಸವ ಮಹತ್ವದ್ದಾಗಿದೆ. ನಮ್ಮ ಹಿಂದೂಗಳ ಯುಗಾದಿ ಹಬ್ಬ ಹೊಸ ವರ್ಷ ಕೂಡ ಆಗಿದೆ. ನಾನಿಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...