Actor Shivarajkumar ಯುಗಾದಿ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ ಶಿವಣ್ಣ ಮಿಂದೆದ್ದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಮನೆಯಲ್ಲಿ ಊಟ ಮಾಡಿ ಶಿವಣ್ಣ ದಂಪತಿಗಳು ಯುಗಾದಿ ಹಬ್ಬ ಆಚರಿಸಿದರು.
ಕಾರ್ಯಕರ್ತ ಗಿರೀಶ್ ಮನೆಯಲ್ಲಿ ಊಟ ಮಾಡಿದ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವಣ್ಣ ಹಬ್ಬ ಆಚರಿಸಿದರು. ದಂಪತಿಗಳು ಹೋಳಿಗೆ ಊಟ ಸವಿದಿದ್ದಾರೆ. ಹೋಳಿಗೆ, ಚಿತ್ರಾನ್ನ, ಎಳ್ಳುಬೆಲ್ಲ, ಬೊಂಡಾ, ಪಾಯಸ ಸವಿದಿದ್ದಾರೆ.
ನಂತರ ಮಾತನಾಡಿದ ನಟ ಶಿವರಾಜ್ ಕುಮಾರ್, ನಾಡಿನ ಜನರಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ. ಜೀವನದಲ್ಲಿ ಬೇವು ಬೆಲ್ಲ. ಎರಡು ಸಮಾನ ಆಗಿರಬೇಕು. ಜನರ ನಡುವೆ ಯುಗಾದಿ ಹಬ್ಬದ ಆಚರಣೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.
ಪತ್ನಿ ಚುನಾವಣೆ ಸ್ಪರ್ಧೆ ಮಾಡಿದ್ದಾರೆ. ಅವರು ನಿಮ್ಮ ಧ್ವನಿ ಆಗಿ ಕೆಲಸ ಮಾಡುತ್ತಾರೆ ಎಂದ ಶಿವಣ್ಣ ಜೋಗಿ ಚಿತ್ರದ ಹಾಡು ಹಾಡನ್ನೂ ಹಾಡಿದರು. ಬೊಂಬೆ ಹೇಳುತೈತಿ.. ನೀನೇ ರಾಜಕುಮಾರ್ ಹಾಡು ಹೇಳಿ ಜನರನ್ನ ರಂಜಿಸಿದರು.
Actor Shivarajkumar ಮನೆಯಲ್ಲಿ ಹಬ್ಬ ಆಚರಿಸೋದು ಇದ್ದೇ ಇರುತ್ತದೆ. ಜನರ ಜೊತೆ ಬಂದು ಹಬ್ಬ ಆಚರಿಸುತ್ತಿರುವುದು ತುಂಬಾ ಖುಷಿ ಆಗ್ತಿದೆ. ಎಲ್ಲಾ ಕಡೆ ಕಾಂಗ್ರೆಸ್ ಅಭ್ಯರ್ಥಿಗೆಗ ಪಾಸಿಟಿವ್ ತರಾ ಇದೆ. ಈ ಸಲ ಗೀತಾ ಶಿವರಾಜ್ ಕುಮಾರ್ ಬರಬೇಕು ಅಂತಾ ಹೆಣ್ಣುಮಕ್ಕಳು ಬಯಸುತ್ತಿದ್ದಾರೆ. ಲಾಸ್ಟ್ ಟೈಮ್ ಗೂ ಈ ಸಲಕ್ಕೂ ತುಂಬಾ ವ್ಯತ್ಯಾಸವಿದೆ ಎಂದರು.
100 ಕ್ಕೆ 100 ರಷ್ಟು ನಾವು ಗೆಲ್ತೇವೆ. ಈ ಸಲ 100 ರಷ್ಟು ಬದಲಾವಣೆ ಆಗುತ್ತೆ. ನಿಮ್ಮ ಜೊತೆಯಲ್ಲಿ ಇದ್ದೇವೆ. ಜನರ ಜೊತೆ ಹಬ್ಬ ಆಚರಿಸೋದು ಖುಷಿ ಆಗ್ತಿದೆ ಎಂದರು.
