JCI Shivamogga ಮಕ್ಕಳು ವಿದ್ಯಾಭ್ಯಾಸದಲ್ಲಿ ಪರಿಣತಿ ಹೊಂದುವ ಜತೆಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಸಂವಹನ ಕೌಶಲ್ಯ ಕಲಿಯಬೇಕು ಎಂದು ಪ್ರವರ್ತನಾ ಸಂಸ್ಥೆ ಸಂಸ್ಥಾಪಕಿ ಪ್ರತಿಭಾ ಅರುಣ್ ಅಭಿಪ್ರಾಯ ಪಟ್ಟರು.
ಶಿವಮೊಗ್ಗ ನಗರದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಸಪ್ತಗಿರಿ ಟ್ರೈನಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪರಿಣಾಮಕಾರಿ ಭಾಷಣ ಕಲೆ ವಿಷಯ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಎಲ್ಲ ವಸ್ತುಗಳಿಗೂ ತನ್ನದೆ ಆದ ಬೆಲೆ ಇರುತ್ತದೆ. ವಜ್ರಕ್ಕೂ ಕೂಡ, ಭೂಮಿಯಲ್ಲಿದ್ದಾಗಲೂ ಅದಕ್ಕೆ ಅದರದೇ ಆದ ಬೆಲೆ ಇದೆ. ನಿಖರವಾದ ಬೆಲೆ ಸಿಗಬೇಕು ಎಂದರೆ ಆಭರಣಕ್ಕೆ ತಕ್ಕಂತೆ ವಜ್ರವನ್ನು ಮಾಡಿದಾಗ ಮಾತ್ರ ಸರಿಯಾದ ಬೆಲೆ ಸಿಗುತ್ತದೆ. ಎಲ್ಲಾ ಮನುಷ್ಯರಿಗೆ ತಮ್ಮದೇ ಆದ ಬೆಲೆ ಇರುತ್ತದೆ. ಆದರೆ ಜೆಸಿ ಅಂತಹ ಸಂಸ್ಥೆಯಲ್ಲಿ ಸೇರಿ ಜೆಸಿ ಸಂಸ್ಥೆಯಲ್ಲಿ ತರಬೇತಿ ಪಡೆದಾಗ ಬೆಲೆ ಅರಿವಾಗುತ್ತದೆ. ಅವನಿಗೆ ಸಮಾಜದಲ್ಲಿ ಒಂದು ಬೆಲೆ ಸಿಗುತ್ತದೆ. ಆದ್ದರಿಂದ ಎಲ್ಲರೂ ಇಂತಹ ಜೆಸಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಡಾ. ಲಲಿತಾ ಭರತ್ ಮಾತನಾಡಿ, ವಿದ್ಯಾಭ್ಯಾಸದ ಜತೆಗೆ ಸಾಮಾನ್ಯ ಜ್ಞಾನ, ಭಾಷಣ ಕಲೆ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಇಂತಹ ಶಿಬಿರಗಳಿಂದ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿ ಆಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೆಸಿಐ ತರಬೇತುದಾರ ಮಮತಾ ಶಿವಣ್ಣ ಮಾತನಾಡಿ, ಸಂವಹನ ಕೌಶಲ್ಯವು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆಯಬೇಕು ಎಂದರು.
JCI Shivamogga ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಗೊಳ್ಳಲು ಶಿಕ್ಷಣದ ಜತೆಯಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಕಾರ್ಯದರ್ಶಿ ಜಿ.ಗಣೇಶ್, ಕಿಶೋರ್, ಪ್ರದೀಪ್, ಮಮತಾ ರಾಮಸ್ವಾಮಿ, ಸಂತೋಷ್, ಸ್ವಪ್ನಾ ಬದ್ರೀನಾಥ್, ಸಿಂಚನಾ ಉಪಸ್ಥಿತರಿದ್ದರು.