Prashant Kishore ಚುನಾವಣೆಯ ಫಲಿತಾಂಶ ಮುಂಚೆಯೇ ಹೇಳಿದರೆ ಜನ ನಗುತ್ತಾರೆ. ಆದರೆ ಈಗೀಗ ದೃಶ್ಯಮಾಧ್ಯಮಗಳಲ್ಲಿ
ಖಾಸಗಿ ಏಜೆನ್ಸಿ,
ಟೀವಿ ಗಳು ನಡೆಸಿರುವ ಸಮೀಕ್ಷೆಗಳು ಪ್ರಸಾರವಾಗುತ್ತಿವೆ.
ಜನ ನಂಬುವುದೋ ಬಿಡುವುದೋ ಎಂಬ ಇಬ್ಬಂದಿತನಕ್ಕೆ ಒಂದು ಸೆಕೆಂಡ್ ಸಿಲುಕುತ್ತಾರೆ.
ನಂತರ ಯಾರು ಬಂದ್ರೆ ಏನು ?ಎಲ್ಲರ ಹಣೇಬರಹ ಒಂದೇನೆ! ಎಂಬ ಫಿಲಾಸಫಿಗೆ ಒರಗಿ ಬಿಡುತ್ತಾರೆ.
ನಿಜ, ಆದರೆ ರಾಜಕೀಯ ಪಕ್ಷಗಳು ಹಾಗಿಲ್ಲ. ತಮ್ಮದೇ ಹಿಡಿತ,ಪೋಷಣೆಯಲ್ಲಿರುವ ಏಜೆನ್ಸಿ ಗಳಿಗೆ
ಪ್ರಯೋಜಕತ್ವ ನೀಡಿ ಸಮೀಕ್ಷೆ ಮಾಡಿಸುವುದೂ ಇದೆ
ಅಷ್ಟೇ ಅಲ್ಲ ಗೆಲ್ಲುವ ತಂತ್ರಗಾರಿಕೆ ಪರಿಣಿತರನ್ನ ನೇಮಿಸಿಕೊಳ್ಳುವುದೂ ನಡೆದಿದೆ.
ಕರ್ನಾಟಕದ ಗ್ಯಾರಂಟಿ ಸಫಲತೆಗೆ
ಹಿನ್ನಲೆಯಲ್ಲಿ ಸುನೀಲ್ ಕನುಗೋಳ್ ಎಂಬ ಪರಿಣಿತ ಇದ್ದದ್ದೂ ಈಗ ರಹಸ್ಯವಾಗುಳಿದಿಲ್ಲ.
ಈ ಪರಿಣಿತರ ಪಟ್ಟಿಯಲ್ಲಿ ಮೊದಲ ಹೆಸರು ಪ್ರಶಾಂತ್ ಕಿಶೋರ್.
ಪಶ್ಚಿಮ ಬಂಗಾಳದಲ್ಲಿ ಲೋಕಸಭೆಗೆ ಬಿಜೆಪಿ ಸೀಟುಗಳಿಕೆ ಹೆಚ್ಚುತ್ತದೆ ಎಂದಿದ್ದಾರೆ.
Prashant Kishore ಮೋದಿ ಅವರ ಚಾರ್ ಸೌ ಪಾರ್ ಎನ್ನುವ ಹೇಳಿಕೆಗೂ ಪ್ರತಿಕ್ರಯಿಸಿದ್ದಾರೆ.
ಬಿಜೆಪಿ ಒಂದೇ ಪಕ್ಷವು ಮೂನ್ನೂರಕ್ಕು ಅಧಿಕ ಸೀಟು ಗೆಲ್ಲಲಿದೆ ಎಂದಿದ್ದಾರೆ.
ತಮಿಳಿನಾಡಿನಲ್ಲಿ ಮತಹಂಚಿಕೆಯ ಪ್ರಮಾಷದಲ್ಲಿ ಬಿಜೆಪಿಗೆ ಏರಿಕೆ ಕಾಣಲಿದೆ.ಒಡಿಶಾದಲ್ಲಿ ಹೆಚ್ಚುಸ್ಥಾನ ಗೆಲ್ಲಲಿದೆ.
ಗೆಲ್ಲಬೇಕಾದ ಕಡೆ ಪ್ರವಾಸ ಬಿಟ್ಟು ಸುಮ್ಮನೆ ಮಣಿಪುರ ,ಮೇಘಾಲಯ ಪ್ತವಾಸ ಮಾಡಿದರೆ ಏನು ಲಾಭ ?ಎಂದು ಕಾಂಗ್ರೆಸ್ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.
ಪ್ರಬಲ ವಿರೋಧಪಕ್ಷವಾಗಿ ಸಂವರ್ಧಿಸುವ ಅವಕಾಶಗಳನ್ನ ವಿಪಕ್ಷಗಳು ಕೈಚೆಲ್ಲಿವೆ. ಒಂದು ರೀತಿ ಸೋಮಾರಿತನ
ಮತ್ತು ತಪ್ಪು ತಂತ್ರಗಾರಿಕೆಯಿಂದ ಅತ್ಯುತ್ತಮ ಅವಕಾಶಗಳನ್ನ ಹಾಳುಮಾಡಿಕೊಂಡಿವೆ ಎಂದು ಪಿಟಿಐ ಸಂಪಾದಕರ ಜೊತೆ ನಡೆಸಿದ ಸಂವಾದದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ
ರಾಹುಲ್ ಗಾಂಧಿ ಪಕ್ಷದ ಮಹತ್ವದ ನಿರ್ಧಾರಗಳಿಂದ ದೂರ ಉಳಿಯುವುದು ಉತ್ತಮ ಎಂದೂ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ.
ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ
ರಾಹುಲ್ ಗಾಂಧಿ ಪಕ್ಷದ ಮಹತ್ವದ ನಿರ್ಧಾರಗಳಿಂದ ದೂರ ಉಳಿಯುವುದು ಉತ್ತಮ ಎಂದೂ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ.