Monday, March 23, 2026
Monday, March 23, 2026

K.S. Eshwarappa ನನ್ನ ಗೆಲುವು ನಿಶ್ಚಯ- ಈಶ್ವರಪ್ಪ

Date:

K.S. Eshwarappa ಈಡಿಗರು, ಲಿಂಗಾಯತರು ಎಲ್ಲಾ ಸೇರಿ ಇಡೀ ಹಿಂದೂ ಸಮಾಜ ನನ್ನ ಕಡೆ ಇದೆ.
ನಾನು ರಾಷ್ಟ್ರೀಯವಾದಿ ಎಂದು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ, ಕೆ.ಎಸ್‌.ಈಶ್ವರಪ್ಪ ಹೇಳಿದರು.

ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ರಾಷ್ಟ್ರ ಭಕ್ತರ ಬಳಗ ಸಾಗರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯರ್ತರ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ನವರು ಎಲ್ಲಾ ಈಡಿಗರು ನಮ್ಮ ಜೊತೆ ಇದ್ದಾರೆ ಎನ್ನುತ್ತಾರೆ. ಯಡಿಯೂರಪ್ಪ ಮಗ ಎಲ್ಲಾ ಲಿಂಗಾಯತರು ನಮ್ಮ ಕಡೆ ಇದ್ದಾರೆ ಎನ್ನುತ್ತಾರೆ. ಆದರೆ, ನಾನು ರಾಷ್ಟ್ರೀಯವಾದಿ ಎಂದು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಜಾತಿ ಹೆಸರು ಹೇಳಿಕೊಂಡು ಮೋಸ ಮಾಡಿದವರಿಗೆ ಈಶ್ವರಪ್ಪನ ಗೆಲ್ಲಿಸುವ ಮೂಲಕ ಉತ್ತರ ಕೊಡುತ್ತೇವೆ ಎಂದು ಭದ್ರಾವತಿಯ ಒಕ್ಕಲಿಗ ಸಮಾಜದವರು ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.

ಬೈಂದೂರಿನಲ್ಲಿಯೂ ಸಹ ಹಿಂದೂ ಸಂಘಟನೆಯ ಅನೇಕ ಪ್ರಮುಖರು ನಾವೆಲ್ಲರೂ ನಿಮಗೆ ಬೆಂಬಲವಾಗಿದ್ದೇವೆ. ಚುನಾವಣೆಯಲ್ಲಿ ನೀವು ನೂರಕ್ಕೆ ನೂರು ಗೆಲ್ಲುತ್ತೀರಾ ಎಂದು ಆಶೀರ್ವಾದ ಮಾಡಿದ್ದಾರೆ. ಚುನಾವಣೆ ಎಂದರೆ ಜಾತಿ ಹಣ ತೋಳ್ಬಲದಿಂದ ನಡೆಯುತ್ತೆ ಎಂದು ತಿಳಿದಿದ್ದೆ. ಆದರೆ, ಜಾತಿ ಹಣ ಎಲ್ಲಾ ಪಕ್ಕಕ್ಕೆ ಇಟ್ಟು ಬಡವರು ಧರ್ಮದ ಪರವಾಗಿ ನಿಂತು ಧರ್ಮ ಗೆಲ್ಲಿಸಲು ನೀವೆಲ್ಲ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು ನೋಡಿದರೆ ನನ್ನ ಗೆಲ್ಲುವು ನಿಶ್ಚಯವಾಗಿದೆ ಎಂದರು.

ಸಾಗರ ಶಿವಮೊಗ್ಗ ಜಿಲ್ಲೆಗೆ ಒಳ್ಳೆಯದಾಗಲು ಮೋದಿಯವರನ್ನು ಪ್ರಧಾನಿ ಮಾಡಿದ ಸಂತೃಪ್ತಿಗಾಗಿ ನನ್ನನ್ನು ಗೆಲ್ಲಿಸಲು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನನಗೆ ಆಶೀರ್ವಾದ ಮಾಡಲು ಬಂದಿರುವುದು ನನ್ನ ಭಾಗ್ಯ. ಬಿಜೆಪಿ ಪಕ್ಷವನ್ನು ಕಾರ್ಯಕರ್ತರು ರಕ್ತವನ್ನು ಬೆವರಿನ ಹಾಗೆ ಸುರಿಸಿ ಪಕ್ಷ ಕಟ್ಟಿದ್ದರ ಫಲವಾಗಿ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ. ಪ್ರಪಂಚವೇ ಮೆಚ್ಚಿದ ನರೇಂದ್ರ ಮೋದಿ ಬಿಜೆಪಿ ಎನ್ನುವುದೇ ನಮ್ಮ ಹೆಮ್ಮೆ ಎಂದರು.
ಇಂದು ಬಿಜೆಪಿಯಲ್ಲಿ ಕೆಲ ಕುಟುಂಬಗಳು ಮಾಡುತ್ತಿರುವ ಷಡ್ಯಂತ್ರದಿಂದಾಗಿ ರಾಜ್ಯದಲ್ಲಿ ಪಕ್ಷ ಕಟ್ಟಿದ ಅನೇಕ ಹಿರಿಯರು ಯುವಕರು ನೋವು ಪಡುತ್ತಿದ್ದಾರೆ. ಕೇಂದ್ರದ ನಾಯಕ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಒಬ್ಬ ಮಗನ ಸಂಸದ, ಮತ್ತೊಬ್ಬ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದೆಲ್ಲಾ ಕೇಂದ್ರದವರಿಗೆ ಯಾರು ಹೇಳಬೇಕು. ಕಾರ್ಯಕರ್ತರ ನೋವನ್ನು ಯಾರು ಕೇಳಬೇಕು. ಈಗಿನ ಪರಿಸ್ಥಿತಿಯಲ್ಲಿ ಇಂಥವರ ಹಿಂದೆ ಹೋಗಿ ಅಧಿಕಾರ ಹೊಡಿಯುತ್ತಿದ್ದಾರೆ ಶ್ರಮ ಹಾಕಿದ ಕಾರ್ಯಕರ್ತರು ಹಿಂದೆ ಸರಿದಿದ್ದಾರೆ ಎಂದು ತಿಳಿಸಿದರು.

K.S. Eshwarappa ಸಿ.ಟಿ.ರವಿ, ಪ್ರತಾಪ್ ಸಿಂಹ, ಸದಾನಂದ ಗೌಡರಂತ ಒಕ್ಕಲಿಗ ನಾಯಕರಿಗೆ ಡಿಕೆಟ್ ಕೊಡದೆ ಮೂಲೆಗುಂಪು ಮಾಡಿದ್ದಾರೆ. ಹಿಂದುತ್ವ ಬಗ್ಗೆ ಮಾತನಾಡಿದ ಅನಂತ್ ಕುಮಾರ್ ಹೆಗ್ಗಡೆ, ಬಸವನಗೌಡ ಪಾಟೀಲ್ ಯತ್ನಾಳ್ ರನ್ನೂ ಸಹ ಮೂಲೆ ಗುಂಪು ಮಾಡಿದ್ದಾರೆ. ಹಿಂದುತ್ವ ಬಗ್ಗೆ ಮಾತನಾಡುವುದೇ ತಪ್ಪಾ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಾಗರ ಮಾಜಿ ನಗರ ಸಭಾ ಸದಸ್ಯರಾದ ಮಂಜುನಾಥ್, ಕಸ್ತೂರಿ ಸಾಗರ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಗೌಡ, ಕೆಳದಿ ಗ್ರಾಮ ಪಂಚಾಯತಿ ಸದಸ್ಯ ಗೋಪಾಲ್, ವೀಣಾ ಸತೀಶ್, ರಜನೀಶ್ ಹಕ್ರೆ,ಸುರೇಶ್ ವಾಟ್ಗೋಡು, ಹೇಮ ರವಿ, ಚೇತನ್ ಗೌಡ ಹರತಾಳು, ಆನಂದ ಪುರ ನಾರಾಯಣ ಸೇರಿದಂತೆ ಹಲವರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.

Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ...

Bakkeshwara Swamy Rathotsava ದಾವಣಗೆರೆ ಹೃದಯಭಾಗದ ರಾಜಬೀದಿಯ ಏಕೈಕವಾದ ಶ್ರೀಬಕ್ಕೇಶ್ವರ ಮಹಾರಥೋತ್ಸವ. ...

Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801...

KFD ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷಎರಡನೇ ಬಲಿ.

KFD ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಟ್ಟಿಕೇವಿಯಲ್ಲಿ ಮಂಗನ ಕಾಯಿಲೆಗೆ ಈ...

Cheetah Attack ಮುತ್ತಗಿ ಗ್ರಾಮದ ರೈತನ ಮೇಲೆ ಚಿರತೆ ಹಠಾತ್ ದಾಳಿ. ಮೆಗ್ಗಾನ್ ಆಸ್ಪತ್ರೆಗೆ ರೈತ ದಾಖಲು.

Cheetah Attack ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದ ರೈತರ...