Monday, February 2, 2026
Monday, February 2, 2026

Siddaramaiah ಲಡಾಖ್ ನ ಪ್ರದೇಶ ಚೀನಾ ಅತಿಕ್ರಮ:ಪ್ರಧಾನಿ ಆಘಾತಕಾರಿ ಮೌನ- ಸಿದ್ಧರಾಮಯ್ಯ ಟೀಕಾಸ್ತ್ರ

Date:

Siddaramaiah ನೆರೆಯ ರಾಷ್ಟ್ರವಾದ ಚೀನಾ ಭಾರತದ ಗಡಿಭಾಗಗಳನ್ನು ಅತಿಕ್ರಮಿಸಿ ಭಾರತದ ನೆಲದಲ್ಲಿ ಸೇನಾ ನೆಲೆಗಳು, ಬಂಕರ್‌ಗಳು, ಹಳ್ಳಿಗಳನ್ನು ನಿರ್ಮಿಸಿದ್ದರೂ ಸಹ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಕಾರವೆತ್ತಿಲ್ಲ. ತಮ್ಮನ್ನು ವಿಶ್ವಗುರು, ಜಾಗತಿಕ ನೇತಾರ ಎಂದು ಬಿಂಬಿಸಿಕೊಳ್ಳುವ ಮೋದಿಯವರು ಲಡಾಖ್‌ನಲ್ಲಿ ಸುಮಾರು ನಾಲ್ಕು ಸಾವಿರ ಚ.ಕಿಮೀ ಪ್ರದೇಶವನ್ನು ಚೀನಾ ಆತಿಕ್ರಮಿಸಿ ಕೂತಿದ್ದರೂ ಚೀನಾದ ಪಡೆಗಳನ್ನು ಹಿಂದೆ ಕಳುಹಿಸುವ ಧೈರ್ಯ ತೋರಿಲ್ಲ. ಮೋದಿಯವರ ಆಘಾತಕಾರಿ ಮೌನದಿಂದಾಗಿ ನಮ್ಮ ಸೇನಾ ಪಡೆಗಳು ಗಸ್ತು ತಿರುಗುತ್ತಿದ್ದ ಅನೇಕ ಪ್ರದೇಶಗಳನ್ನು, ಗಸ್ತುಠಾಣೆಗಳಿದ್ದ ಆಯಕಟ್ಟಿನ ಜಾಗಗಳನ್ನು ಚೀನಾಗೆ ಬಿಟ್ಟುಕೊಡಲಾಗಿದೆ.

Siddaramaiah ಅರುಣಾಚಲ ಪ್ರದೇಶದಲ್ಲಿಯಂತೂ ಚೀನಾ ಭಾರತದ ನೆಲದಲ್ಲಿ ಹೆದ್ದಾರಿಗಳನ್ನು ಮಾಡಿ, ಹಳ್ಳಿಗಳನ್ನು ನಿರ್ಮಿಸಿದೆ. ಉಪಗ್ರಹ ಚಿತ್ರಗಳು ಈ ಎಲ್ಲದಕ್ಕೂ ದಾಖಲೆ ನೀಡುತ್ತಿವೆ. ಆದರೆ, ಕಾಗದದ ಹುಲಿ ಮೋದಿ ಮಾತ್ರ ಕಣ್ಣುಮುಚ್ಚಿ ಕೂತಿದ್ದಾರೆ. ಮೋದಿ ಆಡಳಿತದಲ್ಲಿ ಭಾರತದ ಸಾರ್ವಭೌಮತೆ, ಅಖಂಡತೆಗೆ ಇನ್ನಿಲ್ಲದ ಧಕ್ಕೆ ಒದಗಿದೆ. ಬಡಾಯಿ ವೀರ ಮೋದಿಯವರ ಹೇಡಿತನದಿಂದಾಗಿ ಭಾರತದ ವೀರ ಸೈನಿಕರು ಇಂದು ಎದುರಾಳಿಗಳ ಮುಂದೆ ತಮ್ಮದೇ ನೆಲದಲ್ಲಿ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಬಂದಿದೆ. ಚೀನಾ ಅತಿಕ್ರಮಣ ವಿಚಾರದಲ್ಲಿ ತಮ್ಮ ವೈಫಲ್ಯತೆ, ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳುವ ಸಲುವಾಗಿ ಹೇಡಿ ಮೋದಿ ದೇಶದ ಜನತೆಯಿಂದ ಸತ್ಯವನ್ನು ಮುಚ್ಚಿಟ್ಟು ದ್ರೋಹ ಎಸಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...