Kateel Ashok pai college ವಿಶ್ವ ಸ್ವಲೀನತೆಯ ಜಾಗೃತಿ ದಿನದ ನಿಮಿತ್ತ ಈಶಾನ್ಯ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಢೆಯ ಪೂರಕ ಆರೋಗ್ಯ ವಿಜ್ಞಾನ ವಿಭಾಗವು ಇತ್ತೀಚೆಗೆ “ಸ್ವಲೀನತೆ ಮತ್ತು ಅದರ ನಿರ್ವಹಣೆ” ಶೀರ್ಷಿಕೆ ಅಡಿಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು, ಈ ಕಾರ್ಯಗಾರವು ಸ್ವಲೀನತೆಯ ಬಗ್ಗೆ ತಿಳುವಳಿಕೆ ಮತ್ತು ನಿರ್ವಹಣೆಯ ಬಗ್ಗೆ ಕೇಂದ್ರಿಕೃತವಾಗಿತ್ತು. ಕಾರ್ಯಗಾರವನ್ನು ಶಿವಮೊಗ್ಗದ ಮಾನಸ ಟ್ರಸ್ಟ್ ನ ಶೈಕ್ಷಣಿಕ ನಿರ್ದೇಶಕರಾದ ಡಾ.ಪ್ರೀತಿ.ವಿ.ಶಾನ್‌ಭಾಗ್ ಉದ್ಘಾಟಿಸಿದರು. ಅವರು ಸ್ವಲೀನತೆ ಹೊಂದಿರುವ ಮಕ್ಕಳ ಪೋಷಕರು ಅನುಭವಿಸುವ ಯಾತನೆ ಮತ್ತು ಅಸಹಾಯಕತೆಯ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಢೆಯ ಪೂರಕ ಆರೋಗ್ಯ ವಿಜ್ಞಾನ ವಿಭಾಗದ ಪ್ರಾಂಶುಪಾಲರಾದ ಡಾ.ಪುಷ್ಪಲತಾ. ಜಿ ರವರು ಸ್ವಲೀನತೆ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನಿಸಿ ಇಂತಹ ತರಬೇತಿ ಹಾಗೂ ಕಾರ್ಯಗಾರಗಳ ಪ್ರಾಮುಖ್ಯತೆಯನ್ನು ತಿಳಿಸಿದರು. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡಲು ಆರೋಗ್ಯ ಮತ್ತು ಶೈಕ್ಷಣಿಕ ವೃತ್ತಿಪರರನ್ನು ಸಿದ್ಧಪಡಿಸುವ ತುರ್ತು ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದರು. ಈಶಾನ್ಯ ಇಂಡಿಯಾ ಫೌಂಡೇಶನ್ ನ ಸಂಸ್ಥಾಪಕಿ ಮತ್ತು ನಿರ್ದೇಶಕರಾದ ಶ್ರೀಮತಿ ಸ್ವಾತಿ. ವಿ ಮತ್ತು ಪ್ರತಿಷ್ಠಾನದ ವಾಕ್ ಮತ್ತು ಭಾಷಾ ಚಿಕಿತ್ಸಕಿ ಶ್ರೀಮತಿ ವೈಷ್ಣವಿ ನಾಗರಾಜನ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
Kateel Ashok pai college ಸಮಾರೋಪ ಸಮಾರಂಭದಲ್ಲಿ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರು ಮತ್ತು ಶೈಕ್ಷಣಿಕ ಸಲಹೆಗಾರರಾದ ಪ್ರೊ.ರಾಜೇಂದ್ರ ಚೆನ್ನಿರವರು ಮಾತನಾಡಿ ಸ್ವಲೀನತೆಯ ನಿರ್ವಹಣೆಗೆ ನಿರಂತರ ಶಿಕ್ಷಣ ಮತ್ತು ತರಬೇತಿ ನಿರ್ಣಾಯಕ ಎಂದು ಹೇಳಿದರು. ಈ ಕಾರ್ಯಗಾರದಲ್ಲಿ ಶಿವಮೊಗ್ಗದ ಕ್ಲಿನಿಕಲ್ ಸೈಕಾಲಜಿ ಮತ್ತು ಮನಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.