Friday, March 20, 2026
Friday, March 20, 2026

Kuvempu University ಆಹಾರ ತಂತ್ರಜ್ಞತೆಯಿಂದ ಕಲಬೆರಕೆ ತಡೆದು ಆಹಾರದಲ್ಲಿ ಸುರಕ್ಷತರ ಸಾಧಿಸಬಹುದು- ಡಾ..ಎಸ್.ಇ.ನೀಲಗುಂದ

Date:

Kuvempu University ಆಹಾರ ತಂತ್ರಜ್ಞಾನ ಸರಿಯಾಗಿ ತಿಳಿದು ಉಪಯೋಗಿಸಿದರೆ ಕಲಬೆರೆಕೆ ತಡೆದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟತೆಯನ್ನು ಸಾಧಿಸಬಹುದು ಎಂದು ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಆಹಾರ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಇ.ನೀಲಗುಂದ ಹೇಳಿದರು.

ರಾಜೇಂದ್ರ ನಗರದ ರೋಟರಿ ಶಾಲೆ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹಾರ ತಂತ್ರಜ್ಞಾನ ಮತ್ತು ಪೌಷ್ಠಿಕಾಂಶ ಕುರಿತು ಮಾತನಾಡಿ, ಇಂದಿನ ಮಕ್ಕಳ ಮತ್ತು ಯುವಜನತೆಯ ಆರೋಗ್ಯದ ಭವಿಷ್ಯ ನಾವು ಉಪಯೋಗಿಸುವ ಆಹಾರದ ಮೇಲೆ ನಿಂತಿದೆ ಎಂದು ತಿಳಿಸಿದರು.

ಇಂದಿನ ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿರುವ ಆಹಾರವಲಯ, ಬೀದಿ ಬದಿಯ ಗೂಡು ಅಂಗಡಿಯಿಂದ ಸ್ಟಾರ್ ಹೋಟೇಲ್‌ಗಳಲ್ಲಿ ತಯಾರುಗುವ ಆಹಾರವು ಒಂದಲ್ಲಾ ಒಂದು ಕೃತಕ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಇದು ಮಾರುಕಟ್ಟೆಯ ತಂತ್ರಗಾರಿಕರಿಕೆ, ಗ್ರಾಹಕರು ಕೂಡ ಮಾನಸಿಕವಾಗಿ ಇಚಿಥ ಆಹಾರ ಪದಾರ್ಥಗಳಿಗೆ ಮಾರುಹೋಗುತ್ತಿದ್ದಾರೆ ಎಂದರು.

Kuvempu University ಮಾಹಿತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಕಡಿಮೆ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾದ ಆಹಾರ ಯಥೇಚ್ಚಾವಾಗಿ ಮನುಷ್ಯನ ದೇಹ ಸೇರುತ್ತದೆ ಮತ್ತು ಅಪಾಯಾಕಾರಿ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈಗ ಕೆಲವು ಪ್ರಸಿದ್ಧ ಕಂಪನಿಗಳು ಆಹಾರ ತಂತ್ರಜ್ಞಾನ ಸಹಾಯದಿಂದ ಕಲಬೆರೆಕೆಯಿರದ ಮತ್ತು ಉತ್ತಮ ಗುಣಮಟ್ಟದ ಆಹಾರ ತಯಾರಿಕೆ ಮಾಡುತ್ತಿದ್ದರೆ ಎಂದು ತಿಳಿಸಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್‌ಕುಮಾರ್, ಡಾಕ್ಟರ್ ಪರಮೇಶ್ವರ್ ಶಿಗ್ಗಾವ್, ಶೇಷಗಿರಿ, ಡಾ. ಅರುಣ್, ಡಾ. ರವಿಕಿರಣ್, ಕೇಶವಪ್ಪ, ಕೃಷ್ಣಮೂರ್ತಿ, ಅರುಣ್ ದೀಕ್ಷಿತ್, ಡಾ. ಧನಂಜಯ, ನಾಗರಾಜ್, ಎಸ್.ಗಣೇಶ್, ದೀಪಾ, ರವಿಕಿರಣ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...