Saturday, December 6, 2025
Saturday, December 6, 2025

Shri Krishna Mutt ಸಂಸ್ಕೃತದಲ್ಲಿ ವಿಜ್ಞಾನ & ಸಂಸ್ಕೃತಿ ಮಿಳಿತ-ಡಾ.ಸದಾನಂದ ದೀಕ್ಷಿತ್

Date:

Shri Krishna Mutt ಸಂಸ್ಕೃತ ಇದೊಂದು ಕೇವಲ ಭಾಷೆಯಲ್ಲ ಇದರಲ್ಲಿ ವೈಜ್ಞಾನಿಕ, ವಿಜ್ಞಾನ ಮತ್ತು ಸಂಸ್ಕೃತಿ ಅಡಕವಾಗಿದೆ ಎಂದು ಲೋಕ ಭಾರತಿ ರಾಷ್ಟ್ರೀಯ ಅಧ್ಯಕ್ಷ ಡಾ.ಸದಾನಂದ ದೀಕ್ಷಿತ್
ರವರು ತಿಳಿಸಿದರು.

ಅವರು ಉಡುಪಿಯ ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಪರಮಾನುಗ್ರಹದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಭಗವದ್ಗೀತಾ ಸಮ್ಮೇಳನದಲ್ಲಿ ಭಾಗವಹಿಸಿ ನಂತರ ಶಿವಮೊಗ್ಗದ ಸಂಸ್ಕೃತ ಭವನಕ್ಕೆ ಬೇಟಿ ನೀಡಿ ಕಾರ್ಯಕರ್ತರ ಜೊತೆ ಮಾತನಾಡುತ್ತ ಪ್ರಸ್ತುತ ಬಾರತದಲ್ಲಿ
ಸಂಸ್ಕೃತ ಭಾಷೆಯ ಅವಶ್ಯಕತೆ ಎಂಬ ವಿಷಯದ ಬಗ್ಗೆ ಸಂಸ್ಕೃತ ಭವನದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಭಾರತೀಯ ಸಂಸ್ಕೃತಿ
ಪರಿಚಯವಾಗಬೇಕಾದರೆ ಸಂಸ್ಕೃತ ಕಲಿಕೆ ಅನಿವಾರ್ಯ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಶಿವಮೊಗ್ಗ ನಗರದ ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.ದೇಶದ ಎಲ್ಲಾ ಜನರನ್ನು ಒಗ್ಗೂಡಿಸುವ ಮತ್ತು ಭಾವೈಕ್ಯತೆಯನ್ನು ಮೂಡಿಸುವ ಶಕ್ತಿ ಸಂಸ್ಕೃತಕ್ಕೆ ಇದೆ ಎಂದು ಹೇಳಿದರು.

Shri Krishna Mutt ಲೋಕ ಭಾರತಿಯ ಉಪಾಧ್ಯಕ್ಷ ಎಮ್.ವಿ.ರಮೇಶ್ ಜೊಯ್ಸ್ ಮಾತನಾಡುತ್ತ ಸಂಸ್ಕೃತ ಕಲಿಕೆಯ ಮಹತ್ವವನ್ನು ಇಡೀ ಜಗತ್ತಿಗೆ ಹೇಳುವ ಕಾಲಘಟ್ಟದಲ್ಲಿ ಈಗ ನಾವಿದ್ದೇವೆ ತಂತ್ರಜ್ಞಾನ, ವಿಜ್ಞಾನ, ಆಯುರ್ವೇದ, ಯೋಗ ಮುಂತಾದ ಅನೇಕ ವಿಷಯಗಳ ಮೂಲ ಸಂಸ್ಕೃತ ಸಾಹಿತ್ಯದಲ್ಲಿ ಇದೆ.

ಇಂದು ಪ್ರಪಂಚದಲ್ಲಿ ಯಾವುದೇ ರಾಷ್ಟ್ರದಲ್ಲೂ ಕೂಡ ಸಾಮರಸ್ಯ ಕುಂದುತ್ತಿದೆ ಕಾರಣ ನೈತಿಕ ಶಿಕ್ಷಣದ ಕೊರತೆ ಇದೆ, ಇದನ್ನು ಹೋಗಲಾಡಿಸಲು ಸಂಸ್ಕೃತ ಸಾಹಿತ್ಯ, ಸುಭಾಷಿತ, ನಾಟಕ, ಕಾವ್ಯ ಇತ್ಯಾದಿಗಳ ಅಧ್ಯಯನ ಅವಶ್ಯವಾಗಿ ಮಾಡುವಂತಾಗಬೇಕು ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯೋನ್ಮುಖವಾಗಿ ಕೆಲಸ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಒರಿಸ್ಸಾ, ರಾಜಸ್ಥಾನ, ತಮಿಳುನಾಡು, ಆಂದ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ 21 ಜನ ವಿದ್ವಾಂಸರುಗಳು ಆಗಮಿಸಿದ್ದರು. ಅವರೆಲ್ಲರಿಗೂ ಶಿವಮೊಗ್ಗ ನಗರದ ಸಂಸ್ಕೃತ ಭವನದ ವತಿಯಿಂದ ಕೋಶಾಧ್ಯಕ್ಷರಾದ ಸಚ್ಚಿದಾನಂದ ಅವರು ಪ್ರಭು ಶ್ರೀರಾಮನ ಶಾಲನ್ನು ಹಾಕುವುದರ ಮೂಲಕ ಗೌರವ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಕೃತ ಭವನದ ಅ.ನಾ.ವಿಜಯೆಂದ್ರ ರಾವ್, ಜಗದೀಶ್ ಮತ್ತು ಮನು ಚವ್ಹಾಣ್, ಧ್ವಜ ನಾಗರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...