Monday, February 2, 2026
Monday, February 2, 2026

K. S. Eshwarappa ಹಣಬಲ ಮತ್ತು ಧರ್ಮದ ನಡುವೆ ಯುದ್ಧ.ಅಂತಿಮವಾಗಿ ಧರ್ಮಕ್ಕೇ ಜಯ-ಕೆ.ಎಸ್. ಈಶ್ವರಪ್ಪ

Date:

K. S. Eshwarappa ನನ್ನ ಎದೆಯಲ್ಲಿ ಒಂದು ಕಡೆ ರಾಮ, ಮತ್ತೊಂದು ಕಡೆ ಮೋದಿ ಅವರಿದ್ದಾರೆ. ಮೋದಿ ನನಗೆ ಸ್ಫೂರ್ತಿ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತವರ ಮಕ್ಕಳ ರಾಜಕಾರಣ ಅಂತ್ಯ ಆಗಬೇಕು ಎಂಬ ಆಸೆ ಅವರಿಗೂ, ಸಾವಿರಾರು ಹಿಂದೂ ಕಾರ್ಯಕರ್ತರ ಅಭಿಪ್ರಾಯವೂ ಇದೆ ಆಗಿದೆ. ಮೋದಿ ಅಮಿತ್ ಷಾ ಅವರೇ ನನ್ನನ್ನು ನಿಲ್ಲಿಸಿದ್ದಾರೆ ಎಂಬ ಅಭಿಪ್ರಾಯ ನನ್ನ ಬೆಂಬಲಿಸುತ್ತಿರುವವರಿಗೂ ಬಂದಿರಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ಕುಟುಂಬ ರಾಜಕಾರಣ ಮುಗಿಸಲು ಹೋರಾಟಕ್ಕಿಳಿದಿದ್ದೇನೆ. ಯಡಿಯೂರಪ್ಪನವರ ಜಾತಿ ಮತ್ತು º Àಣ ಬಲ ಮತ್ತು ಧರ್ಮದ ನಡುವೆ ಯುದ್ಧ ನಡೆಯುತ್ತಿದೆ. ಅಂತಿಮವಾಗಿ ಧರ್ಮ ಗೆಲ್ಲುತ್ತದೆ ಎಂದು ಈಶ್ವರಪ್ಪ ಹೇಳಿದರು.
ಪಕ್ಷ ಬಿಟ್ಟು ಹೋಗಿದ್ದ ಯಡಿಯೂರಪ್ಪ ಮೋಸ ಮಾಡಿರಲಿಲ್ಲವೇ? ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ನನ್ನ ಜೊತೆ ಮಾತುಕತೆ ಗೆ ಬರುತ್ತಾರೆ? ಇಷ್ಟು ಮೋಸ ಮಾಡಿದ್ದೇನೆ ಎನ್ನುವುದು ಅವರ ಮನಸ್ಸಿನಲ್ಲಿದ್ದರೆ ನನ್ನ ಹತ್ತಿರ ಬರುವುದಿಲ್ಲ. ನಲವತ್ತು ವರ್ಷದಿಂದ ಸಂಘಟನೆಯಲ್ಲಿದ್ದೇನೆ. ಸಾಯುವವರೆಗೂ ಇರುತ್ತೇನೆ ಎಂದ ಅವರು, ಈಶ್ವರಪ್ಪನವರನ್ನು ಬೆಂಬಲಿಸುವ ಯಾವುದೇ ಮಠಾಧೀಶರಿಗೆ, ಬೆಂಬಲಿಗರಿಗೆ ಬೆದರಿಕೆ ಹಾಕಿಲ್ಲ, ಇಂತಹ ಆರೋಪ ಮಾಡುತ್ತಿರುವ ಈಶ್ವರಪ್ಪನವರು ಚಂದ್ರಗುತ್ತಿ ರೇಣುಕಾ ದೇವಿ ದೇವಸ್ಥಾನದಲ್ಲಿ ಬಂದು ಗಂಟೆ ಹೊಡೆದು ಪ್ರಮಾಣ ಮಾಡಲಿ ಎಂಬ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅವರ ಆಹ್ವಾನಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ರಾಘವೇಂದ್ರ ಮತ್ತು ಅವರಪ್ಪನಿಗೆ (ಯಡಿಯೂರಪ್ಪ) ಸುಳ್ಳು ಹೇಳುವುದು ಅಭ್ಯಾಸವಾಗಿದೆ. ಯಡಿಯೂರಪ್ಪ ಹಾವೇರಿಯಲ್ಲಿ ಕಾಂತೇಶ್‌ಗೆ ಟಿಕೆಟ್ ಕೊಡಿಸುತ್ತೇನೆ, ನಾನೇ ಬಂದು ಕ್ಷೇತ್ರದಲ್ಲಿ K. S. Eshwarappa ಓಡಾಡಿ ಗೆಲ್ಲಿಸುತ್ತೇನೆ. ಅಂತ ಹೇಳಿರಲಿಲ್ಲ ಎಂದು ಯಡಿಯೂರಪ್ಪ ಅವರು ಗಂಟೆ ಹೊಡೆದು ಪ್ರಮಾಣ ಮಾಡುತ್ತಾರಾ? ಸಾಧುಸಂತರಿಗೆ ನೋವುಂಟು ಮಾಡಿಲ್ಲ, ಬೆದರಿಕೆ ಹಾಕಿಲ್ಲ ಎಂದು ರಾಘವೇಂದ್ರ ಗಂಟೆ ಹೊಡೆದು ಪ್ರಮಾಣ ಮಾಡುತ್ತಾರಾ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...