Assembly Election ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಆಯನೂರು ಮಂಜುನಾಥ್ ಅಭ್ಯರ್ಥಿ ಎಂದು ಘೋಷಿಸಿರುವುದನ್ನು ತಡೆಹಿಡಿಯಬೇಕೆಂದು ಇನ್ನಿಬ್ಬರು ಟಿಕೆಟ್ ಆಕಾಂಕ್ಷಿಗಳಾದ ಎಸ್ ಪಿ ದಿನೇಶ್ ಮತ್ತು ರಂಗಸ್ವಾಮಿ ಗೌಡ ಎಐಸಿಸಿ ಅಧ್ಯಕ್ಷರನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು , ವಿಧಾನ ಪರಿಷತ್ ಚುನಾವಣೆಗೆ
ಪಕ್ಷದ ಫಲಿತಾಂಶದ ದೃಷ್ಠಿಯಿಂದ ಘೋಷಣೆಯಾಗಿರುವ ಆಯನೂರು ಅವರ ಹೆಸರು ತಡೆಹಿಡಿಯಬೇಕು. ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಮತ್ತೊಮ್ಮೆ ಸರ್ವೆ ಮಾಡಿಸಿ, ಪಕ್ಷದ ಮುಖಂಡರುಗಳ, ಬ್ಲಾಕ್ ಅಧ್ಯಕ್ಷರುಗಳ, ಜಿಲ್ಲಾ ಅಧ್ಯಕ್ಷರುಗಳ, ಶಾಸಕರುಗಳ ಅಭಿಪ್ರಾಯ ಪಡೆದು ತನಗೆ ಟಿಕೆಟ್ ಘೋಷಿಸಬೇಕೆಂದು ಕೋರಿದರು.
ಕೆಪಿಸಿಸಿ ಅಧ್ಯಕ್ಷರ ನಿರ್ದೇಶಾನುಸಾರ ನಾನು ಪದವೀಧರರ ನೋಂದಣಿ ಪ್ರಕ್ರಿಯೆ ಕೈಗೊಂಡು ಮತದಾರರನ್ನು ಸಂಭಾವ್ಯ ಅಭ್ಯರ್ಥಿ ಎಂದು ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದೆ. ನನಗೆ ಟಿಕೆಟ್ ನಿರಾಕರಿಸಿದಲ್ಲಿ ನಾನು ಮತದಾರರನ್ನು ಗೊಂದಲಕ್ಕಿಡು ಮಾಡಿದಂತಾಗುವುದು. ಯುವ ಕಾಂಗ್ರಸ್‌ನಿಂದ ಪಕಗಷದ ಕೆಲಸ ಮಾಡಿದ್ದೇನೆ. ಎನ್.ಎಸ್.ಯು.ಐ 33 ವರ್ಷಗಳ ಅವಧಿಯಲ್ಲಿ ನನ್ನ ಪಕ್ಷ ನಿಷ್ಠೆ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಟ್ಟಡ ನಿರ್ಮಾಣ ಜವಾಬ್ದಾರಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ವಿವರಿಸಿದರು.
Assembly Election ಆದ್ದರಿಂದ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಘೋಷಣೆಯಾದ ಟಿಕೆಟ್‌ನ್ನು ಮರು ಪರಿಶೀಲನೆ ಮಾಡಿ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಆಗ್ರಹಿಸಿದರು.
Assembly Election ನೈಋತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಗಾಗಿ ಎಸ್.ಪಿ.ದಿನೇಶ್ ಮನವಿ
Date: