Friday, December 5, 2025
Friday, December 5, 2025

 Summer Camp ಏಪ್ರಿಲ್ 4 ರಿಂದ ಶಿವಮೊಗ್ಗದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ

Date:

 Summer Camp ಸಹ್ಯಾದ್ರಿ ಕಲಾ ತಂಡ, ಶಿವಮೊಗ್ಗ, ಕನ್ನಡ ವಿಭಾಗ ಹಾಗೂ ಸಹ್ಯಾದ್ರಿ ಕಲಾ ಕಾಲೇಜು, ಕಡೇಕೊಪ್ಪಲ ಪ್ರತಿಷ್ಠಾನ ಶಿವಮೊಗ್ಗ ವತಿಯಿಂದ ಎಪ್ರಿಲ್ 4 ರಿಂದ24 ರವರಗೆ ‘ಅಜ್ಜಿ ಅಂಗಳ ಅಜ್ಜನ ಜಗಲಿ’ 10ನೇ ವರ್ಷದ ಮಕ್ಕಳ ಬೇಸಿಗೆ ರಂಗಶಿಬಿರವನ್ನು ಸಹ್ಯಾದ್ರಿ ಕಲಾ ಕಾಲೇಜಿನ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ರಂಗ ನಿರ್ದೇಶಕ ಹಾಗೂ ಕಾಲೇಜಿನ ಅಧ್ಯಾಪಕ ಡಾ.ಲವ ಜಿ.ಆರ್. ನಿರ್ದೇಶನದಲ್ಲಿ ಮತ್ತು ನಾಡಿನ ಪ್ರತಿಭಾವಂತರ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದೆ.


 Summer Camp
ರಂಗ ಚಟುವಟಿಕಗಳ ಮೂಲಕ ಮಕ್ಕಳ ಸಮಯವನ್ನು ಅಮೂಲ್ಯಗೊಳಿಸುವ ಕೆಲಸವನ್ನು ರಂಗ ಶಿಬಿರವು ಮಾಡುತ್ತದೆ. ಮಕ್ಕಳ ವಯಸ್ಸನ್ನು ದೊಡ್ಡವರಾಗುವ ತಯಾರಿಯ ಸಮಯವೆಂದೇ ಗಮನಿಸಲಾಗುತ್ತದೆ ಮತ್ತು ಆ ಬಗೆಯ ಬೆಳವಣಿಗೆಗೆ ಅಗತ್ಯವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ.ಮಕ್ಕಳ ಮನೋಭೂಮಿಕೆಯ ಜೊತೆಗೆ ಸಮಾಜ ಮತ್ತುಪೋಷಕರು ಕೆಲವು ಕಾಳಜಿಯನ್ನು ಮಾಡಬೇಕಾಗುತ್ತದೆ. ಈ ನೆಲೆಯಲ್ಲಿ ಕಥೆ, ಹಾಡು, ಚಿತ್ರಕಲೆ, ಕ್ರಾಫ್ಟ್, ಯೋಗ, ಏರೋಬಿಕ್ಸ್, ಹಳ್ಳಿಯ ಆಟಗಳ ಮೂಲಕ ಮಾನವೀಯ ಮೌಲ್ಯ, ಬುದ್ಧಿ ಪ್ರಧಾನ, ಬೋಧ ಪ್ರಧಾನ ಕಲಿಕೆ, ಅನ್ವಯಿಕ ರಂಗಶಿಕ್ಷಣದ ಮೂಲಕ ನಾಟಕಗಳನ್ನು ಕಲಿಸಿ, ಸಿದ್ಧಪಡಿಸಿದ ನಾಟಕಗಳನ್ನು ಶಿಬಿರದ ಕೊನೆಯ ದಿನ ರಂಗಾಯಣ ಶಿವಮೊಗ್ಗ ಇಲ್ಲಿ ಪ್ರದರ್ಶಿಸಲಾಗುವುದು.
ಆಸಕ್ತರು ದೂರವಾಣಿ ಸಂಖ್ಯೆ.೯೪೪೯೨೦೧೯೧೯, ೮೮೮೪೮೧೮೫೨೯, ೭೬೧೯೪೨೨೬೭೯ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...