Saturday, November 23, 2024
Saturday, November 23, 2024

Tyavarekoppa Tiger and Lion Safari  ತ್ಯಾವರೆಕೊಪ್ಪದ ಪ್ರಾಣಿಗಳಿಗೀಗ ಕೂಲ್ ಕೂಲ್

Date:

Tyavarekoppa Tiger and Lion Safari  ಅಬ್ಬಬ್ಬಾ! ಏನಪ್ಪಾ ಇದು ಬಿಸಿಲು… ಅಂತ ಜನರು ಸೆಕೆಗೆ ನೆರಳು, ಫ್ಯಾನ್, ಎಸಿ ಇಂತದ್ದಕ್ಕೆ ಮೋರೆ ಹೋಗ್ತಾರೆ…
ಜೊತೆಗೆ ಬಿಸಿಲಿನ ದಗೆಯನ್ನು ತಪ್ಪಿಸಿಕೊಳ್ಳಲು ತಂಪು ಪಾನೀಯಗಳು, ಐಸ್ ಕ್ರೀಮ್ ಇಂತಹ ತಣ್ಣನೆಯ ಪದಾರ್ಥಗಳ ಹತ್ತಿರ ಮೊರೆ ಹೋಗ್ತಾರೆ… ಆದ್ರೆ ಕಾಡಿನಲ್ಲಿರುವಂತಹ ಪ್ರಾಣಿಗಳಿಗೆ ಈ ಎಲ್ಲಾ ಸೌಕರ್ಯಗಳು ಬಿಸಿಲಿನಲ್ಲಿ ಕೊಡೋರು ಯಾರು…? ಎಂಬ ಪ್ರಶ್ನೆ ಪ್ರಾಣಿ ಪ್ರಿಯರಲ್ಲಿ ಉಂಟಾಗೋದು ಸಹಜ…

ಈ ಎಲ್ಲಾ ಸೌಕರ್ಯಗಳು ಕಾಡುಪ್ರಾಣಿಗಳಿಗೆ ಸಿಗದೇ ಹೋಗಬಹುದು, ಆದರೆ ಮನುಷ್ಯನ ಸಂಪರ್ಕದಲ್ಲಿರುವ ತ್ಯಾ ವರೆ ಕೊಪ್ಪದ ಪ್ರಾಣಿಗಳಿಗೆ ಬೇಸಿಗೆಯ ಬಿಸಿಲನ್ನ ತಪ್ಪಿಸಲು ಒಂದಿಷ್ಟು ಸೌಕರ್ಯಗಳು ಸಿಗುತ್ತಿವೆ…

ಕಳೆದ ಒಂದು ವರ್ಷದಿಂದ ಈ ಪ್ರಯತ್ನಗಳನ್ನು ಮಾಡಲಾಗುತ್ತಿದೆ… ಈ ಬಾರಿ ಬರಗಾಲದಿಂದ ಎಲ್ಲೆಡೆ ನೀರು ಕಡಿಮೆಯಾಗಿದೆ. ಜೊತೆಗೆ ಹಸಿರು ಕೂಡ ಒಣಗಿ ಹೋಗಿದೆ… ಇಂತಹ ಸಂದರ್ಭದಲ್ಲಿ ನಮ್ಮಂತಹ ಜನರುಗಳೇ ಬಿಸಿಲಿನ ದಗೆಯನ್ನು ತಪ್ಪಿಸಿಕೊಳ್ಳಲು, ನಾನಾ ಬಗೆಯ ಪರಿಹಾರವನ್ನು ಕಂಡುಕೊಳ್ಳುತ್ತೇವೆ… ಅದೇ ರೀತಿ ತ್ಯಾವರೆ ಕೊಪ್ಪದ ಪ್ರಾಣಿಗಳಿಗೆ ದೇಹವನ್ನ ತಂಪು ಇಡಲು ಕೆಲವೊಂದು ವಿಭಿನ್ನ ಸೌಕರ್ಯಗಳನ್ನು ಮಾಡಲಾಗಿದೆ…
ಜೊತೆಗೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ತಣ್ಣನೆಯ ಅನುಭವ ಆಗಲಿ ಎಂಬ ಉದ್ದೇಶದಿಂದ ನಾಲ್ಕು ಕಡೆ ಮಿಸ್ಟ್ ತುಂತುರು ಅಳವಡಿಕೆ ಮಾಡಲಾಗಿದೆ…

ಬಿರು ಬೇಸಿಗೆಯಲ್ಲೂ ಮೃಗಾಲಯ ವನ್ಯಜೀವಿಗಳಿಗೆ ತಂಡಿ ವಾತಾವರಣ ಕಲ್ಪಿಸಲಾಗಿದೆ. ನಿರ್ಜಲೀಕರಣ ತಪ್ಪಿಸಲು ಅಧಿಕ ನೀರಿರುವ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಬಿಸಿಲು ಅತಿಯಾದಾಗ ಪ್ರಾಣಿಗಳಿಗೆ ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಇದೆ. ಅದರಿಂದ ಪ್ರಾಣಿಗಳು ಮೂರ್ಚೆ ಹೋಗುವ ಸಾಧ್ಯತೆಗಳು ಹೆಚ್ಚಾಗಿದೆ. ಇದರಿಂದ ಪ್ರಾಣಿಗಳ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ಅವುಗಳಿಗೆ ತಂಡಿ ವಾತಾವರಣ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೃಗಾಲಯದ ಅಧಿಕಾರಿಗಳಾದ ಮುಕುಂದ ಚಂದ್ರ ಅವರು ನಮ್ಮ ಕೆ ಲೈವ್ ಗೆ ಮಾಹಿತಿ ನೀಡಿದರು.

ಹುಲಿಗಳಿಗೆ ಸಾಮಾನ್ಯವಾಗಿ ನೀರಿನಲ್ಲಿ ಈಜಾಡಲು ಬಲು ಇಷ್ಟ. ಹುಲಿಗಳು ಯಾವಾಗಲೂ ತಣ್ಣನೆಯ ವಾತಾವರಣದಲ್ಲಿ ಹೆಚ್ಚಾಗಿರುತ್ತವೆ. ಆದ್ದರಿಂದ ಕೃತಕ ನೀರಿನ ಹೊಂಡಗಳನ್ನು ಹುಲಿಗಳಿಗೆ ವ್ಯವಸ್ಥೆ ಮಾಡಲಾಗಿದೆ.

ಜಿಂಕೆ, ಕಾಡು ಕುರಿ, ಕಡವೆ, ಇನ್ನಿತರ ಪ್ರಾಣಿಗಳಿಗೆ ಜೆಟ್ ಮಿಸ್ಟ್ ಅಳವಡಿಸಲಾಗಿದೆ. ಜೊತೆಗೆ ಅಲ್ಲಲ್ಲಿ ಹುಲ್ಲಿನ ಕುಠೀರಗಳನ್ನ ನಿರ್ಮಿಸಿ ಅವುಗಳಿಗೆ ಕೃತಕವಾಗಿ ನೆರಳನ್ನು ಕಲ್ಪಿಸಲಾಗಿದೆ.

ಕಾಡಿನ ರಾಜ ಸಿಂಹನಿಗೆ ಹಿತ ನೀಡಲು ಕೃತಕವಾದ ನೀರಿನ ಕೆರೆಯನ್ನ ಕಲ್ಪಿಸಲಾಗಿದೆ.

ವಿಶೇಷವಾಗಿ ಹೀಟ್ ಸ್ಟ್ರೋಕ್ ತಪ್ಪಿಸಲು ವಿಶೇಷ ಖಾದ್ಯಗಳನ್ನು ಪ್ರಾಣಿಗಳಿಗೆ ನೀಡಲಾಗುತ್ತದೆ.

Tyavarekoppa Tiger and Lion Safari  ಸಸ್ಯಹಾರಿ ಅಥವಾ ಮಾಂಸಾಹಾರಿ ಪ್ರಾಣಿಗಳು ಯಾವುದೇ ಆಗಿರಬಹುದು, ಬಿಸಿಲು ವಿಪರೀತವಾದಾಗ ಅವುಗಳ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮನುಷ್ಯರಂತೆಯೇ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗು ವ ಸಾಧ್ಯತೆಗಳು ಇರುತ್ತದೆ. ಇದನ್ನ ತಪ್ಪಿಸಲು ಮೃಗಾಲಯದಲ್ಲಿ ಕರ್ಬುಜ, ಕಲ್ಲಂಗಡಿ ಹಾಗೂ ಅಧಿಕ ನೀರಿನ ಅಂಶವುಳ್ಳ ಹಣ್ಣುಗಳನ್ನು ಪ್ರಾಣಿಗಳಿಗೆ ನೀಡಲಾಗುತ್ತದೆ.
ಜೊತೆಗೆ ಹುಲಿ, ಸಿಂಹ, ಚಿರತೆಗಳಿಗೆ ಮಾಂಸಾಹಾರವನ್ನು ಶೀತಲೀಕರಿಸಿ ನೀಡಲಾಗುತ್ತಿದೆ .ಮಲ್ಟಿ ವಿಟಮಿನ್ ಸಿರಪ್, ಓ ಆರ್ ಎಸ್ ಕೂಡ ಆಹಾರದಲ್ಲಿ ನೀಡಲಾಗುತ್ತೀದೆ.

ಈ ರೀತಿ ಶಿವಮೊಗ್ಗದ ಮೃಗಾಲಯದಲ್ಲಿ ವನ್ಯಜೀವಿಗಳನ್ನ ತಂಪಾಗಿರಿಸಲು ಬೇಸಿಗೆ ಮೆನುವನ್ನು ತಯಾರಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...