Payment of property tax 2024-25 ನೇ ಸಾಲಿನ ಆಸ್ತಿ ತೆರಿಗೆ ಪಾವತಿದಾರರು ಮೇ1 ರಿಂದ ಜೂನ್ 30 ರೊಳಗೆ ದಂಡವಿಲ್ಲದೇ ಪಾವತಿಸಬಹುದು. ಹಾಗೂ ಶೇ. 2 ರಂತೆ ದಂಡ ಪಾವತಿಸಬೇಕಾಗುತ್ತದೆ. ಸಾರ್ವಜನಿಕರು ಏಪ್ರಿಲ್ ತಿಂಗಳಲ್ಲೇ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯುವಂತೆ ಹಾಗೂ ಆಸ್ತಿ ತೆರಿಗೆ ಪಾವತಿಸಿ ನಗರದ ಸರ್ತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಮಹಾನಗರ ಪಾಲಿಕೆ ಉಪ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ಮುಗಿದು ಹೋಗಿರುವ ಆರ್ಥಿಕ ವರ್ಷದ ಆಸ್ತಿ ತೆರಿಗೆ ಪಾವತಿ ತಡವಾಗಿದ್ದಕ್ಕೆ ದಂಡ ಪಾವತಿ ಮಾಡಲು ಸೂಚಿಸಬೇಕಿತ್ತು.
ಈಗ 2024-25 ಆರ್ಥಿಕ ವರ್ಷ ಆರಂಭವೇ ಆಗಿಲ್ಲ.
Payment of property tax ಮಾರ್ಚ್ ನಲ್ಲಿ ಪ್ರಕಟಣೆ ನೀಡಿ
ಬರಲಿರುವ ವರ್ಷಕ್ಕೆ ಶೇ,5 ರಿಯಾಯಿತಿ ಸೌಲಭ್ಯ ನೀಡಿರುವುದು ಸ್ವಾಗತಾರ್ಹ. ಆದರೆ, ಜುಲೈ 1 ರಿಂದ ದಂಡ ವಿಧಿಸಿದರೆ ಯಾವ ನ್ಯಾಯ? ಎಂದು ಸಾರ್ವಜನಿಕರ ಪ್ರಶ್ನೆ.
ರಿಯಾಯಿತಿಯನ್ನ ಶೇ,10 ಮಾಡಿದರೆ ತೆರಿಗೆ ಶೀಘ್ರ ಸಲ್ಲಿಕೆಯಾಗಬಹುದು.
ಮಾದರಿ ಎಂದರೆ ಸಂಚಾರಿ ವಾಹನ ದಂಡ ಬಾಕಿ ಪಾವತಿಗೆ ಶೇ50 ಸೌಲಭ್ಯ ನೀಡಿದಾಗ ನಿರೀಕ್ಷೆಗಿಂತ ತೆರಿಗೆ ಹಣ ಪಾವತಿಯಾಗಿರುವುದು ಎಲ್ಲರಿಗೂ ತಿಳಿದಿದೆ.
ಈಗ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲ.
ಸಂಪೂರ್ಣ ಅಧಿಕಾರಿಗಳ ಆಡಳಿತದಲ್ಲಿದೆ.
ಇಂತಹ ಸಮಯದಲ್ಲಾದರೂ ಇನ್ನಷ್ಟು ಜನಸ್ನೇಹಿ ಕಾರ್ಯ ನಿರ್ವಹಿಸಿ ಜನಮೆಚ್ಚುಗೆ ಪಡೆಯಬಹುದು.
ಸದ್ಯ ಶೇ2 ದಂಡ ವಸೂಲಿ ಕ್ರಮ ಕೈಬಿಡಲು ನಾಗರೀಕರು ಪ್ರತಿಭಟನೆ ಆರಂಭಿಸುವ ಮುನ್ನವೇ ಮಹಾನಗರ ಪಾಲಿಕೆ ಜಾಗೃತವಾಗುವುದು ಒಳ್ಳೆಯ ಉಪಕ್ರಮವಾಗುತ್ತದೆ.