Tuesday, March 24, 2026
Tuesday, March 24, 2026

Congress Shivamogga ಸೋಷಿಯಲ್ ಮೀಡಿಯಾ ಜಿಲ್ಲಾಧ್ಯಕ್ಷರಾಗಿ ಪ್ರವೀಣ್ ನೇಮಕ

Date:

Congress Shivamogga ಶಿವಮೊಗ್ಗ ಸೋಷಿಯಲ್ ಮೀಡಿಯಾ ಜಿಲ್ಲಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ರನ್ನು ನೇಮಕ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಸೋಷಿಯಲ್ ಮೀಡಿಯಾಗೆ ಸಮಿತಿ ರಚಿಸುವ ಮೂಲಕ ಆಕ್ಟೀವ್ ಮಾಡಿದ್ದಾರೆ. ಸಮಿತಿಯಲ್ಲಿ ಒಟ್ಟು 10 ಸ್ಥಾನ ರಚಿಸಿಲಾಗಿದೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸಮಿತಿಗೆ ಜಿಲ್ಲಾಧ್ಯಕ್ಷರಾಗಿ ಎನ್.ಡಿ.ಪ್ರವೀಣ್ ಕುಮಾರ್ ನೇಮಕವಾಗಿದ್ದು, ಉಪಾಧ್ಯಕ್ಷರಾಗಿ ಆಕಾಶ್ ಕೆ.ಜಿ ಹಾಗು ಧನುಷ್ ಎಂ ರವರನ್ನು ನೇಮಿಸಲಾಗಿದೆ. ಉಳಿದ ಏಳು ಸ್ಥಾನಗಳಿಗೆ ಪ್ರಧಾನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿಲಾಗಿದೆ.
Congress Shivamogga ಸೂಡಾ ಹಾಗೂ ಹಾಲಿ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರ ಸೋಷಿಯಲ್ ಪೇಜ್ ಗಳನ್ನು ನೋಡಿಕೊಳ್ಳುತ್ತಿರುವ ಪ್ರವೀಣ್ ಕಳೆದ ಮೂರು ದಶಕಗಳಿಂದ ಪಕ್ಷದಲ್ಲಿ ಯೂಥ್ ಕಾಂಗ್ರೆಸ್ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ಪಕ್ಷದ ಒಟ್ಟಾರೆ ಚಟುವಟಿಕೆಗಳನ್ನು ಸಾಮಾಜಿಕ ತಾಣಗಳಲ್ಲಿ ಬಿತ್ತರಿಸುವ ಜವಾಬ್ದಾರಿ ಪ್ರವೀಣ್ ಹೆಗಲೇರಿದೆ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಪ್ರವೀಣ್ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ...

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ...

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು...