Lok Sabha Election ನಾನೊಬ್ಬ ರೈತನಾಗಿ, ರೈತ ಹೋರಾಟಗಾರನಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಬಿ.ಮಂಜಪ್ಪ ಹಿರೇನೆಲ್ಲೂರು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡವರು ಎಂದು ಹೇಳಿಕೊಂಡವರಿಂದ ಯಾವುದೇ ಗ್ರಾಮೀಣ ಭಾಗದ ಸಮಸ್ಯೆ ಬಗೆಹರಿಯುವುದಿಲ್ಲ. ಅವರಿಗೆ ಕೇವಲ ಪಟ್ಟಣದ ಸಮಸ್ಯೆ ಮಾತ್ರ ಗೊತ್ತು. ನನಗೆ ಪ್ರತಿ ರೈತನ ಮನೆಯ ಸಮಸ್ಯೆಯ ಅರಿವಿದೆ. ಗ್ರಾಮೀಣ ರೈತರ ದನಿಯಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದರು.
ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಅಲ್ಲ, ಇದೊಂದು ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಧಕ್ಕೆ ಬಾರದ ಹಾಗೆ ನಡೆಯುವ ಜಾಗೃತಿ ಕಾರ್ಯಕ್ರಮ. ಮತದಾರರು ಸಮಾಲೋಚನೆ ಮಾಡಿ ಮತ ಚಲಾಯಿಸಬೇಕು. ಒಂದೇ ಪಕ್ಷಕ್ಕೆ ನಿರಂತರ ಮತ ಕೊಡುವುದು ಅಪಾಯಕಾರಿ ಬೆಳವಣಿಗೆ. ಪಕ್ಷೇತರ ಅಭ್ಯರ್ಥಿಯಾದರೆ ಯಾವುದೇ ತೊಂದರೆಯಿಲ್ಲ ಎಂದರು.
Lok Sabha Election ರೈತರ, ಕೂಲಿ ಕಾರ್ಮಿಕರ ಕಷ್ಟಗಳು ನನಗೆ ಗೊತ್ತಿವೆ. ಪ್ರತಿ ಪ್ರಜೆಯೂ ವಿಶ್ವ ಮಾನವನಾಗಬೇಕು. ಭಾರತದ ೧೪೦ ಕೋಟಿ ಜನರು ಸಮೃದ್ಧವಾಗಿ ಬದುಕಲು ಆರ್ಥಿಕ ಮಟ್ಟ ಹೆಚ್ಚಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಅಗತ್ಯವಿದೆ
ಸಂಘದ ಪ್ರಮುಖರಾದ ಎಂದರು.
ದೇವು, ರಾಜು ತೊರಗೋಡು, ದಿನೇಶ್ ಕಾನುಗೋಡು, ಮಂಜಯ್ಯ ಕರೂರು, ರಮೇಶ್ ಐಗಿನಬೈಲು ಹಾಜರಿದ್ದರು.
Lok Sabha Election ಲೋಕಸಭೆಗೆ ಪಕ್ಷೇತರನಾಗಿ ಮಂಜಪ್ಪ ಹಿರೇನೆಲ್ಲೂರು ಕಣಕ್ಕೆ
Date: