Indian Science Speech Contest ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಅಯೋಧ್ಯೆಯಲ್ಲಿ ಆಯೋಜಿಸಿದ್ದ 61ನೇ ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಮಹಿಷಿ ವಂಶರಾಮ ಭಟ್ಟ ಭಾರತೀಯ ವಿಜ್ಞಾನ ಭಾಷಣ ಸ್ಪರ್ಧೆ ( ಸಾಖ್ಯ ಯೋಗ – ವಿಷಯ)ಯಲ್ಲಿ ಪ್ರಥಮ ಸ್ಥಾನದೊಂದಿಗೆ ಸ್ವರ್ಣ ಪದಕ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗೆ ಪ್ರಶಂಸಾ ಪತ್ರದೊಂದಿಗೆ 12,000 ರೂ.ನಗದು ಬಹುಮಾನವನ್ನೂ ನೀಡಿ ಗೌರವಿಸಲಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರದ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಉತ್ತರಾದಿ ಮಠದ ಸತ್ಯಧರ್ಮ ವಿದ್ಯಾಪೀಠದ ವಿದ್ಯಾರ್ಥಿಯಾಗಿರುವ ಈತ ಅತ್ಯಮೋಘವಾಗಿ ವಿಷಯ ಮಂಡಿಸಿ ಬಂಗಾರದ ಪದಕ ಗಳಿಸುವುದರೊಂದಿಗೆ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾನೆ ಎಂಬುದು ವಿಶೇಷ. ಗುರುಗಳಾದ ಪಂಡಿತ ವಿಜಯ ವಿಠಲಾಚಾರ್ಯರಲ್ಲಿ ನ್ಯಾಯ, ಮೀಮಾಂಸಾ, ವ್ಯಾಕರಣ, Indian Science Speech Contest ವೇದಾಂತಾದಿ ಶಾಸ್ತ್ರ ಪಾಠ ಕಲಿಯುತ್ತಿರುವ ಈತ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಹಿಷಿಯ ಶ್ರೀ ಸತ್ಯಸಂಥ ತೀರ್ಥರ ವೃಂದಾವನ ಕ್ಷೇತ್ರದ ಅರ್ಚಕ ಪಂಡಿತ ಕುಮಾರಾಚಾರ್ಯ ಮತ್ತು ವಿಜಯಲಕ್ಷ್ಮೀ ದಂಪತಿ ಪುತ್ರ.
Indian Science Speech Contest ಭಾರತೀಯ ವಿಜ್ಞಾನ ಭಾಷಣ ಸ್ಪರ್ಧೆಯಲ್ಲಿ ಮಹಿಷಿ ವಂಶರಾಮಭಟ್ಟ ಅವರಿಗೆ ಸುವರ್ಣಪದಕ
Date:
