Shakhahaari ಮಾರ್ಚ್ 24ರಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸಾಹಿತ್ಯ ಹುಣ್ಣಿಮೆ ಶಾಖ ಹರಿ ಚಿತ್ರತಂಡದೊಂದಿಗೆ ಮಾತುಕತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ ಮಂಜುನಾಥ್ ಅವರು ವಹಿಸಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಶಾಖಾಹಾರಿ ಚಿತ್ರದ ನಿರ್ಮಾಪಕರಾದ ರಾಜೇಶ್ ಕೀಳಂಬಿ ಅವರು ಮಾತನಾಡಿ,ಶಾಖಾಹಾರಿ ಸಿನಿಮಾವನ್ನು ಶಿವಮೊಗ್ಗದವರೇ ಒಗ್ಗೂಡಿ ಮಾಡಿರುವ ಸಿನಿಮಾವಾಗಿದೆ. ವಿಶೇಷವಾಗಿ ಸಿನಿಮಾದಲ್ಲಿ ಮಲೆನಾಡಿನ ಸೊಬಗನ್ನ ಚಿತ್ರೀಕರಣ ಮಾಡಲಾಗಿದೆ. ಸಾಹಿತ್ಯದಲ್ಲಿರುವ ಹಾಗೆ ಹಾಸ್ಯ, ಚುಟುಕು, ಕವಿತೆ, ಗೀತೆ, ವಿಚಾರ -ಈ ಎಲ್ಲಾ ಅಂಶಗಳು ಸಿನಿಮಾವೂ ಒಳಗೊಂಡಿರುತ್ತದೆ ಎಂದು ಹೇಳಿದರು.
ಶಿವಮೊಗ್ಗದ ಜನರು ಶಾಖಾಹಾರಿ ಸಿನಿಮಾವನ್ನ ವೀಕ್ಷಿಸಿ, ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಶಾಖಾಹಾರಿ ಚಿತ್ರವು ಶಿವಮೊಗ್ಗದ ಭಾರತ್ ಸಿನಿಮಾದಲ್ಲಿ ಪ್ರದರ್ಶನ ಗೊಳ್ಳುತ್ತಿದೆ. ಇದುವರೆಗೂ ಚಿತ್ರವನ್ನ ನೋಡದೆ ಇರುವವರು ಶಾಖಾಹಾರಿಯನ್ನ ನೋಡಿ ಎಂದು ಮನವಿ ಮಾಡಿದರು.
Shakhahaari ಕಾರ್ಯಕ್ರಮದಲ್ಲಿ ಶಾಖಾಹಾರಿ ಚಿತ್ರದ ಇನ್ನೋರ್ವ ನಿರ್ಮಾಪಕರಾದ ಶ್ರೀಮತಿ ರಂಜನಿ ಪ್ರಸನ್ನ, ಚಿತ್ರದ ನಿರ್ದೇಶಕರಾದ ಸಂದೀಪ್ ಸುಂಕದ್, ಚಿತ್ರದ ಸಂಕಲನಕಾರರಾದ ಶಶಾಂಕ್ ನಾರಾಯಣ, ಶ್ರೀ ಹರ್ಷ ಗೋಭಟ್, ಶ್ರೀಮತಿ ಶೃತಿ ಮಡಿವಾಳೆ ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.