G. Janardhana Reddy ಬಿಸಿಲ ಜಿಲ್ಲೆ ಬಳ್ಳಾರಿ. ಬೇರೆ ಜಿಲ್ಲೆಗಳಿಗೆ ಮಳೆಗಾಲ,ಚಳಿಗಾಲ ,ಬೇಸಿಗೆ ಕಾಲ ಅಂತ್ತಿದ್ರೆ ,
ಬಳ್ಳಾರಿಗೆ ವರ್ಷದಲ್ಲಿ ಎರಡೇ ಕಾಲ. ಒಂದು ಬೇಸಿಗೆಗಾಲ ಇನ್ನೊಂದು ಕಡುಬೇಸಿಗೆಕಾಲ. ಇದು ಹಾಸ್ಯಸಾಹಿತಿ ವ್ಯಂಗ್ಯವಾಗಿ ಹೇಳುತ್ತಿದ್ದ ಮಾತು.
ರಾಜಕೀಯವಾಗಿ ಅಲ್ಲಿ ಎರಡೇ ಪ್ರಮುಖ ಎದುರಾಳಿ ಪಕ್ಷಗಳು.ಕಾಂಗ್ರೆಸ್ ಮತ್ತು ಬಿಜೆಪಿ.
ವರ್ತಮಾನದ ರಾಜಕೀಯದಲ್ಲಿ ಮುನ್ನೆಲೆಗೆ ಬಂದವರೆಂದರೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು.
ರಾಜ್ಯದಲ್ಲಿ ಬಿಎಸ್ ವೈ ಅವರಿಗೆ ಬಲಿಷ್ಟ ಬೆಂಬಲ ನೀಡಿದವರಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನ ಮರೆಯುವಂತಿಲ್ಲ.
ರೆಡ್ಡಿ ಅವರು ಬಿಜೆಪಿ ಆಡಳಿತದ ಮೇರು ಸ್ಥಿತಿಯಲ್ಲಿ ಸಚಿವರಾದರು.
ಉಪಚುನಾವಣೆಗಳನ್ಮ ಬಿಜೆಪಿಗೆ ಗೆಲ್ಲಿಸಿ ಕೊಡುವ ಸೂತ್ರಧಾರಿ ಆಗಿದ್ದರು.
ಆಪರೇಷನ್ ಕಮಲ ಆವಾಗಿನ ಟ್ರೆಂಡ್. ಹೀಗಾಗಿ, ಅಂತಹ ಕಾಂಗ್ರೆಸ್ ಕೂಡ ಅಧೀರವಾಗಿ ಬಿಟ್ಟಿತ್ತು.
ಗಣಿ ಹಗರಣದಲ್ಲಿ ರೆಡ್ಡಿ ಅವರ ಇಮೇಜಿಗೆ ಧಕ್ಕೆ ಬಂತು. ಬಿಜೆಪಿಗೆ ಪೋಷಕಸತ್ವವೂ ಕಡಿಮೆಯಾಯಿತು.
ರೆಡ್ಡಿ ಅವರು ಇದ್ದಾಗಿನ ಬಿಜೆಪಿಯ ಗುಟುರು ಕಮ್ಮಿಯಾಯಿತು.
ಕೋರ್ಟ್ ಪ್ರಕರಣಗಳಲ್ಲಿ ಬಿಗಿಯಾದ ಕಾನೂನು ಕ್ರಮಕ್ಕೆ ರೆಡ್ಡಿಯವರು ಬಾಗಿದರು.
ಆದರೆ, ಸಮಯ ಎಲ್ಲವಕ್ಕೂ ಉತ್ತರದಾಯಿಯಾಗಿರುತ್ತದೆ. ಕೇಸಿನಲ್ಲಿ ಬೇಲ್ ಪಡೆದು ಮತ್ತೆ ರೆಡ್ಡಿ ಉಸಿರಾಟ ಆರಂಭಿಸಿದರು. ಹೊಸ ಪಕ್ಷ ಕಟ್ಟಿ ಗಂಗಾವತಿ ಕ್ಷೇತ್ರದಿಂದ ಆರಿಸಿ ಶಾಸಕರಾಗಿದ್ದಾರೆ.
ಬಿಜೆಪಿ ಹೈಕಮಾಂಡ್ ದಾಳ ಉರುಳಿಸಿದೆ. ಅಮಿತ್ ಶಾ ಅವರನ್ನ ಭೇಟಿ ಮಾಡಿ ರೆಡ್ಡಿಗಾರು ತಮ್ಮ ವರ್ಚಸ್ಸನ್ನು ತೋರಿಸಿದ್ದಾರೆ. ಸೇರುವುದೇ ಇಲ್ಲ ಎಂಬ ಹೇಳಿಕೆ ನೀಡಿದ್ದರು. ಇತ್ತೀಚಿನ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿದ್ದರು.
ಈಗ ಏಕಾಏಕಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ದಾಳ ಉರುಳಿಸಿದೆ. ಅಮಿತ್ ಶಾ ಅವರನ್ನ ಭೇಟಿಮಾಡಿ ರೆಡ್ಡಿಗಾರು ತಮ್ಮ ವರ್ಚಸ್ಸನ್ನು ತೋರಿಸಿದ್ದಾರೆ.
ನನ್ನ ತಾಯಿ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈಗ ಕಾಂಗ್ರೆಸ್ ವಲಯದಲ್ಲಿ ಬಂಡೆ ಮನುಷ್ಯರು ನಿದ್ದೆಗೆಡಬಹುದೇನೊ?
ಅಂತೂ ರಾಜ್ಯದ ರಾಜಕೀಯದಲ್ಲಿ ಇನ್ನುಮುಂದೆ ಏನಾದರೂ ಪವಾಡ ನಡೆಯಬಹುದು.
G. Janardhana Reddy ಹೈದ್ರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಮತ ಕ್ರೋಢೀಕರಣಮಾಡಲು ರೆಡ್ಡಿ ಅವರ ಪ್ರವೇಶ ಸಲೀಸು ಕೆಲಸಮಾಡುತ್ತದೆ ಎಂದು ಪರಿಣಿತರ ಲೆಕ್ಕಾಚಾರ.