Department of Horticulture ತೀರ್ಥಹಳ್ಳಿ ತೋಟಗಾರಿಕೆ ಇಲಾಖೆಯು 2023-24ನೇ ಸಾಲಿಗೆ ಕೃಷಿ ಯಂತ್ರೀಕರಣ ಉಪ ಅಭಿಯಾನ ಯೋಜನೆಯ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ವಿವಿಧ ಯಂತ್ರೋಪಕರಣಗಳಿಗೆ ರೈತರಿಂದ ಅರ್ಜಿಯನ್ನು ಕರೆಯಲಾಗಿತ್ತು.
Department of Horticulture ಅರ್ಜಿಗಳನ್ನು ಪರಿಶೀಲಿಸಿ ಯಂತ್ರೋಪಕರಣಗಳನ್ನು ಖರೀದಿಸಲು ಕಾರ್ಯಾದೇಶವನ್ನು ಪಡೆದ ಎಲ್ಲಾ ರೈತರು ಕಡ್ಡಾಯವಾಗಿ ಮಾ. 31 ರೊಳಗಾಗಿ ಯಂತ್ರೋಪಕರಣಗಳನ್ನು ಖರೀದಿಸಿ ನೊಂದಾಯಿತ ಬಿಲ್‍ಗಳನ್ನು ಪಡೆದುಕೊಳ್ಳುವಂತೆ ಹಾಗೂ ಈಗಾಗಲೇ ನೀಡಲಾಗಿರುವ ಕಾರ್ಯಾದೇಶದ ಅವಧಿಯು ಏಪ್ರಿಲ್-01 ರಿಂದ ರದ್ದಾಗುವುದರಿಂದ ಏ.01 ರ ನಂತರ ಖರೀದಿಸಿದ ಯಂತ್ರೋಪಕರಣಗಳನ್ನು ಸಹಾಯಧನಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ತೀರ್ಥಹಳ್ಳಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
