Shivamogga Police Station ಚಿನ್ನದ ಮೇಲೆ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಿ ಎಂದು ಆಸೆ ಹುಟ್ಟಿಸಿ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ. ವಂಚಿಸಲಾಗಿದೆ. ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಆಗಿದ್ದು ಹೇಗೆ?
ಶಿವಮೊಗ್ಗದ ವ್ಯಾಪಾರಿಯೊಬ್ಬರ ಮೊಬೈಲ್‌ಗೆ ಚಿನ್ನಾಭರಣ ಸಂಸ್ಥೆಯೊಂದರ ಹೆಸರಿನಲ್ಲಿ ಟೆಲಿಗ್ರಾಂ ಆಪ್ಲಿಕೇಷನ್‌ಗೆ ಮೆಸೇಜ್ ಬಂದಿತ್ತು. ಅದರಲ್ಲಿರುವ ಲಿಂಕ್ ಕ್ಲಿಕ್ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಸೂಚಿಸಲಾಗಿತ್ತು.
ಟೆಲಿಗ್ರಾಂನಲ್ಲಿ ಅಲೀನಾ ಎಂಬ ಹೆಸರಿನಲ್ಲಿ ಶಿವಮೊಗ್ಗದ ವ್ಯಾಪಾರಿಗೆ ಮೆಸೇಜ್ ಮಾಡಿ ಹೂಡಿಕೆ ಕುರಿತು ಮಾಹಿತಿ ನೀಡಲಾಗಿತ್ತು. ಹಣ ಹೂಡಿಕೆ ಮಾಡಿ ಪ್ರತಿದಿನ 8 ಸಾವಿರ ರೂ. ಕಮಿಷನ್ ಪಡೆಯಬಹುದು ಎಂದು ನಂಬಿಸಲಾಗಿತ್ತು ಎಂದು ಆರೋಪಿಸಲಾಗಿದೆ.
Shivamogga Police Station ಹಣ ವಿತ್ ಡ್ರಾ ಮಾಡಲಾಗಲಿಲ್ಲ.
ಅಲೀನಾ ಮೆಸೇಜ್ ನಂಬಿದ ಶಿವಮೊಗ್ಗದ ವ್ಯಾಪಾರಿ 2 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು. ಆದರೆ ಹಣವನ್ನು ವಿತ್ ಡ್ರಾ ಮಾಡಲು ಸಾಧ್ಯವಾಗಲಿಲ್ಲ. ಈ ಕುರಿತು ಅಲೀನಾಗೆ ಟೆಲಿಗ್ರಾಂ ಮಾಡಿದಾಗ ವಿತ್ ಡ್ರಾ ಮಾಡಲು 5 ಸಾವಿರ ರೂ. ಪಾವತಿಸಬೇಕು ಎಂದು ತಿಳಿಸಲಾಗಿತ್ತು. ಅನುಮಾನಗೊಂಡ ಶಿವಮೊಗ್ಗದ ವ್ಯಾಪಾರಿ ಕೊನೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.