Property tax ಶಿಕಾರಿಪುರ ಪುರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು ಮತ್ತು ಸಾರ್ವಜನಿಕರು ಪರಿಷ್ಕoತ ದರದಂತೆ ಆಸ್ತಿ ತೆರಿಗೆಯನ್ನು ಪಾವತಿಸಿ ಪಟ್ಟಣದ ಅಭಿವೃದ್ದಿಗೆ ಸಹಕರಿಸಬೇಕೆಂದು ಪುರಸಭೆ ಆಡಳಿತಾಧಿಕಾರಿಗಳು ಮತ್ತು ಮುಖ್ಯಾಧಿಕಾರಿಗಳು ಕೋರಿದ್ದಾರೆ.
Property tax ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾರುಕಟ್ಟೆ ಮೌಲ್ಯದ ಪರಿಷ್ಕoತ ಬೆಲೆಗಳ ಅಧಿಸೂಚನೆಯನ್ವಯ ಸ್ಥಿರಾಸ್ತಿಗಳ ಪರಿಷ್ಕoತ ಮಾರುಕಟ್ಟೆ ಬೆಲೆಗಳನ್ನು ದಿ: 01-10-2023 ರಿಂದ ಜಾರಿಗೊಳಿಸಿದ್ದು, 2023-24 ನೇ ಸಾಲಿನ ಪರಿಷ್ಕøತ ಮಾರುಕಟ್ಟೆ ಬೆಲೆಗಳನ್ನು 2024-25 ನೇ ಸಾಲಿಗೆ ಆಸ್ತಿ ತೆರಿಗೆ ಲೆಕ್ಕಾಚಾರಕ್ಕೆ ಅನುವಾಗುವಂತೆ ಪ್ರಾಪರ್ಟಿ ಟ್ಯಾಕ್ಸ್ ಕ್ಯಾಲಿಕ್ಯುಲೇಟರ್ ತಂತ್ರಾಂಶದಲ್ಲಿ ಅಳವಡಿಸಿಕೊಂಡು ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗಿರುತ್ತದೆ.
