International Day of Happiness ಇಂದು ಅಂತರರಾಷ್ಟ್ರೀಯ ಸಂತೋಷದ ದಿನ. ವಿಶ್ವಸಂಸ್ಥೆಯು 2013 ರಲ್ಲಿ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲು ಪ್ರಾರಂಭಿಸಿತು. ಇದು ಪ್ರಪಂಚದಾದ್ಯಂತದ ಜನರಿಗೆ ಸಂತೋಷದ ಮಹತ್ವವನ್ನು ಸೂಚಿಸುತ್ತದೆ.
ಜನರ ದೈನಂದಿನ ಜೀವನದಲ್ಲಿ ಸಂತೋಷದ ಮಹತ್ವವನ್ನು ಎತ್ತಿ ಹಿಡಿಯಲು ಪ್ರತಿ ವರ್ಷ ಮಾರ್ಚ್ 20 ರಂದು ಈ ದಿನವನ್ನು ಅಂತಾರಾಷ್ಟ್ರೀಯ ಸಂತೋಷ ದಿನ ಅಥವಾ ಇಂಟರ್‌ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ ಎಂದು ಆಚರಿಸುತ್ತಾರೆ.
ಒತ್ತಡ, ಟೆನ್ಶನ್ , ಕಿರಿಕಿರಿ ಯಾರಿಗೆ ತಾನೇ ಇಲ್ಲ…? ಇದೆಲ್ಲವೂ ಎಲ್ಲರನ್ನೂ ಕಾಡುತ್ತಿರುವ ಅಂಶ . ಹಾಗಂತ ಯಾವಾಗ್ಲೂ ಬೇಸರದಲ್ಲಿ ಅಳ್ತಾ ಕೂರೋಕೆ ಆಗೋದಿಲ್ಲ ಅಲ್ವಾ..! ಬೇಸರದ ಕ್ಷಣಗಳ ಮಧ್ಯೆ ಖುಷಿ ಯನ್ನು ಹುಡುಕಿಕೊಳ್ಳಬೇಕು.
International Day of Happiness ಯಾವಾಗ್ಲೂ ನಗ್ತಾ, ಖುಷಿ ಯಾಗಿದ್ರೆ ಆರೋಗ್ಯ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೆ ಆಯಸ್ಸು ಹೆಚ್ಚಾಗುತ್ತದೆ ಅಂತಾರೆ. ಆದರೆ, ಹಾಗಿರೋಕೆ ಯಾರಿಗೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ, ಪ್ರತಿದಿನ ಏನಾದರೊಂದು ಟೆನ್ಶನ್ ಇದ್ದೇ ಇರುತ್ತೆ. ದಿನದ 24 ಗಂಟೆನೂ ಖುಷಿಯಾಗಿರಿ ಅಂದ್ರೆ ಯಾರಿಗೂ ಸಾಧ್ಯವಾಗುವುದಿಲ್ಲ. ಹೀಗಾಗಿ ಇರೋ ಪ್ರಾಬ್ಲೆಮ್ಸ್‌ಗಳ ಮಧ್ಯೆಯೂ ಪಾಸಿಟಿವ್ ಮೈಂಡ್ ಇಟ್ಕೊಂಡು ಖುಷಿಯಾಗಿರುವುದನ್ನು ಕಲಿತುಕೊಳ್ಳಬೇಕು. ಕೆಟ್ಟ ವಿಚಾರವನ್ನ ಮರೆತು ಒಳ್ಳೆಯದನ್ನು ಮಾಡಿ ಯಾವಾಗ್ಲೂ ನಗ್ತಾ ಇರ್ಬೇಕು. ಯಾಕಂದ್ರೆ ಇಂದು ಅಂತಾರಾಷ್ಟ್ರೀಯ ಸಂತೋಷದ ದಿನ.