Thursday, March 19, 2026
Thursday, March 19, 2026

Geetha Shivarajkumar ಗೀತಾ ಶಿವರಾಜಕುಮಾರ್ ಗೆ ಅದ್ದೂರಿ ಸ್ವಾಗತ

Date:

Geetha Shivarajkumar ಭದ್ರಾವತಿ ತಾಲ್ಲೂಕು ಕಾರೇಹಳ್ಳಿ ಮೂಲಕ ಶಿವಮೊಗ್ಗಕ್ಕೆ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್ ಆಗಮನದ ನಿಮಿತ್ತ ಶಿವಮೊಹ್ಗಕ್ಕೆ ಬೃಹತ್ ಬೈಕ್ ರ್ಯಾಲಿ ನಡೆದಿದ್ದು, ನಟ ಶಿವರಾಜ್ ಕುಮಾರ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಿ ಬರಮಾಡಿಕೊಂಡ ಶಿವಮೊಗ್ಗ ಕಾಂಗ್ರೆಸ್‌ ಬೈಕ್‌ ರ್ಯಾಲಿ ನಡೆಸಿದೆ. ಇನ್ನೂ ಈ ವೇಳೆ ಮಾತನಾಡಿದ ನಟ ಶಿವರಾಜ್‌ ಕುಮಾರ್‌, ಶಿವಮೊಗ್ಗದಲ್ಲಿ ಕಾರ್ಯಕರ್ತರ ಸಭೆ ಇದೆ, ಆ ಸಭೆಯಲ್ಲಿ ಪಾಲ್ಗೊಂಡ ನಂತರ ಬೈಂದೂರಿಗೆ ಹೋಗುತ್ತಿದ್ದೇವೆ. ಇದೇ ಮಾರ್ಚ್‌ 24 ರಿಂದ ಪ್ರತಿದಿನ ಪ್ರಚಾರ ನಡೆಸುತ್ತಿದ್ದೇವೆ . ನನ್ನ ಶೂಟಿಂಗ್‌ ಷೆಡ್ಯೂಲ್‌ ನೋಡಿಕೊಂಡು ಶಿವಮೊಗ್ಗಕ್ಕೆ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದಾರೆ.


Geetha Shivarajkumar ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಕಾರ್ಯಕರ್ತರ ಉತ್ಸಾಹ ನೋಡಿ ತುಂಬಾ ಸಂತೋಷ ಆಗುತ್ತಿದೆ, ಕಾರೇಹಳ್ಳಿಯಿಂದ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ, ಬೇಳೂರು ಗೋಪಾಲಕೃಷ್ಣ, ಬಿ.ಕೆ ಸಂಗಮೇಶ್ ನಮ್ಮ ಜೊತೆಗಿದ್ದಾರೆ. ಗೆಲ್ಲಬೇಕೆಂದು ಚುನಾವಣೆಗೆ ನಿಂತಿದ್ದೇನೆ. ವಾತಾವರಣ ತುಂಬಾ ಚೆನ್ನಾಗಿದೆ. ವಾತಾವರಣ ನೋಡಿದರೆ ನನಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಎನಿಸಿದೆ. ಈ ಕ್ಷೇತ್ರದಲ್ಲಿ ಜನರು ನನ್ನನ್ನ ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ.
ನಾವು ಫೈಟ್- ಗಿಟ್ ನೋಡುವುದಿಲ್ಲ. ಪಕ್ಷ ಏನು ಹೇಳುತ್ತೆ ಅದೇ ರೀತಿಯಲ್ಲಿ ಪ್ರಚಾರ ಆರಂಭಿಸಿದ್ದೇವೆ .ನಮ್ಮ ತಂದೆ ನಡೆದ ದಾರಿಯಲ್ಲೇ ನಾವು ನಡೆಯುತ್ತೇವೆ. ತಂದೆಯವರ ಸೇವೆ ನಮಗೆ ಅನುಕೂಲ ಆಗಲಿದೆ. ಪಂಚಾಯತ್ ಮಟ್ಟದಲ್ಲೂ ಪ್ರಚಾರ ಮಾಡಲು ಪ್ಲಾನ್ ಮಾಡಿದ್ದೇವೆ. ಯಾವ ಸ್ಟಾರ್ ನಟರಿಗೆ ಆಹ್ವಾನ ನೀಡಿಲ್ಲ. ಬಿಸಿಲಿನಲ್ಲಿ ಅವರಿಗೂ ತೊಂದರೆ ಆಗುತ್ತೆ ಎಂದು ಆಹ್ವಾನ ನೀಡಿಲ್ಲ ಎಂದ ಗೀತಾ ಶಿವರಾಜ್‌ ಕುಮಾರ್‌ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಹೋಗಿ ಆಶೀರ್ವಾದ ಪಡೆಯುತ್ತೇನೆ ಎಂದು ಮಾಹಿತಿ ನೀಡಿದರು..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...