Thirthahalli Maarikamba Jathre ತೀರ್ಥಹಳ್ಳಿ ಮಾರಿಕಾಂಬ ಜಾತ್ರೆಯ ಅಂಗವಾಗಿ ಪಟ್ಟಣದ ಹೆಸರಾಂತ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಮಾರಿಕಾಂಬ ದೇವಾಲಯದ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಖೋ ಖೋ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿನ ಪುರುಷರ ವಿಭಾಗದಲ್ಲಿ ಪುಣೆಯ ಎನ್ ಎಂ ಎಸ್ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಪ್ರೆಸಿಡೆಂಟ್ ಇಲೆವನ್ ತಂಡ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ.
ಭಾನುವಾರ ರಾತ್ರಿ ಪಟ್ಟಣದ ಎಪಿಎಂಸಿ ಹಿಂಭಾಗದ ಮೈದಾನದಲ್ಲಿ ನೆಡೆದ ಫೈನಲ್ ಪಂದ್ಯದ ಪುರುಷರ ವಿಭಾಗದಲ್ಲಿ ಪುಣೆಯ ಎನ್ ಎಂ ಎಸ್ ತಂಡವು ಖೇಲೋ ಇಂಡಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.
ಕೇರಳ ಪುರುಷರ ತಂಡ ಮೂರನೇ ಸ್ಥಾನವನ್ನು, ವಿಹಾಂಗ್ ಮುಂಬೈ ತಂಡ ನಾಲ್ಕನೇ ಸ್ಥಾನವನ್ನು ಪಡೆಕೊಂಡಿದೆ.
ಮಹಿಳೆಯರ ವಿಭಾಗ:
ಕರ್ನಾಟಕ ಪ್ರೆಸಿಡೆಂಟ್ ಮಹಿಳಾ ತಂಡ ಫೈನಲ್‌ನಲ್ಲಿ ಒಸ್ಮಾನಾಬಾದ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿತು.
ಮೂರನೇ ಸ್ಥಾನವನ್ನು ಕೊಲ್ಲಾಪುರ ತಂಡ ಹಾಗೂ ನಾಲ್ಕನೇ ಸ್ಥಾನವನ್ನು ಡೆಲ್ಲಿ ತಂಡ ಪಡೆದುಕೊಂಡಿದೆ.
ವೈಯಕ್ತಿಕ ಪ್ರಶಸ್ತಿಗಳು;
Thirthahalli Maarikamba Jathre ಮಹಿಳೆಯರ ವಿಭಾಗ:
ಬೆಸ್ಟ್ ಅಟಕರ್: ರತುಜಾ ವಿ.ಕೆ.ಒಸ್ಮಾನಿಯ ತಂಡ.
ಬೆಸ್ಟ್ ಡಿಫೆಂಡರ್: ವೈಷ್ಣವಿ ಪವಾರ್ ರಾಜ್ ಮಾತಾ ಕೊಲ್ಲಾಪುರ.
ಬೆಸ್ಟ್ ಆಲ್ ರೌಂಡರ್: ಮೋನಿಕಾ ಕರ್ನಾಟಕ.
ಪುರುಷರ ವಿಭಾಗ;
ಬೆಸ್ಟ್ ಅಟಕರ್; ಲಕ್ಷ್ಮಣ್,ವಿಹಂಗಮ,ಮುಂಬೈ.
ಬೆಸ್ಟ್ ಡಿಫೆಂಡರ್: ಶುಭಂ ಖೇಲೋ ಇಂಡಿಯಾ.
ಬೆಸ್ಟ್ ಆಲ್ ರೌಂಡರ್: ಗನ್ ಪುಲೆ,ಪುಣೆ.