Friday, November 22, 2024
Friday, November 22, 2024

NET Exam ಉದಯೋನ್ಮುಖ ವಿದ್ಯಾರ್ಥಿಗಳಿಗೆ ಅವಕಾಶದ ಹಿನ್ನೆಲೆಯಲ್ಲಿ ಆರ್ಯ ವಿಜ್ಞಾನ ಪಪೂ ಕಾಲೇಜು ಆರಂಭ- ಎನ್.ರಮೇಶ್

Date:

NET Exam ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳೊಂದಿಗೆ ಗುಣಮಟ್ಟದ ಆರ್ಯ ವಿಜ್ಞಾನ ಪದವಿ ಪೂರ್ವ ಕಾಲೇಜು, ಶಿವಮೊಗ್ಗದ ಎಲ್.ಬಿ.ಎಸ್. ನಗರದಲ್ಲಿರುವ 2 ನೇ ತಿರುವಿನಲ್ಲಿ ಪ್ರಸಕ್ತ ಶೈಕ್ಷಣಿಕ 2024-25 ನೇ ಈ
ವರ್ಷದಿಂದಲೇ ಪ್ರಾರಂಭವಾಗಲಿದೆ.


ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ನೀಡಿದ ಕಾಲೇಜಿನ ಕಾರ್ಯದರ್ಶಿ ಎನ್. ರಮೇಶ್, ಕಾಲೇಜು, ವಿದ್ಯಾರ್ಥಿಗಳ ಸರ್ವತೋಮುಖ ಆರ್ಯ ವಿಜ್ಞಾನ ಪದವಿ ಪೂರ್ವ ದೃಷ್ಠಿಯನ್ನು ಇಟ್ಟುಕೊಂಡು, ಉದಯೋನ್ಮುಖ ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ಪ್ರತಿಭೆಗಳನ್ನು ಪ್ರೋತ್ಸಹಿಸುವ ನಿಟ್ಟಿನಲ್ಲಿ ಆರಂಭವಾಗಲಿದೆ. ಎಲ್.ಬಿ.ಎಸ್. ನಗರದ ಪ್ರಧಾನ ಸ್ಥಳದಲ್ಲಿ ಶಿವಮೊಗ್ಗ ನಗರದ ಮಧ್ಯಭಾಗದಲ್ಲಿ ಸ್ವಂತ ಸುಸಜ್ಜಿತ ಕಟ್ಟಡದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಮತ್ತು ಗ್ರಂಥಾಲಯದ ವ್ಯವಸ್ಥೆ ಈ ಕಾಲೇಜಿನಲ್ಲಿದೆ ಎಂದರು.


NET Exam ಬಹು ಮುಖ್ಯವಾಗಿ ನುರಿತ ಅನುಭವಿ ಮತ್ತು ವೃತ್ತಿಪರ ಉಪನ್ಯಾಸಕರು ವಿವಿಧ ರಾಜ್ಯಗಳ ಕಾಲೇಜುಗಳಲ್ಲಿ 25 ಕ್ಕೂ ಹೆಚ್ಚು ವರ್ಷ ಬೋಧನೆ ಮಾಡಿದ ಅನುಭವವಿರುವ ಶಿಕ್ಷಕರು ಇಲ್ಲಿ ಬೋದಕರಾಗಿರುತ್ತಾರೆ. ಪಿಯು ವಿದ್ಯಾರ್ಥಿಗಳಿಗೆ ಕೇವಲ ಪಠ್ಯವಲ್ಲದೇ ತಮ್ಮ ಜೀವನದ ಮುಖ್ಯವಾಗಿ ಎದಿರುಸುವ ಪರೀಕ್ಷೆಗಳಾದ ಕೆ.ಸಿ.ಇ.ಟಿ/ ನೀಟ್ ಮತ್ತು ಜೆ.ಇ.ಇ. ಹಾಗೂ ಐ.ಐ.ಟಿ. ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ ಎಂದರು.
ಹಾಗೂ ಅವುಗಳನ್ನು ಎದುರಿಸಲು ಯಶಸ್ಸು ಪಡೆಯಲು ವೃತ್ತಿ ಪರವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕಾಲ ಕಾಲಕ್ಕೆ ನಡೆಸಲಾಗುವುದು. ಕೆವಲ ಪಿಯು ವಿದ್ಯಾರ್ಥಿಗಳಲ್ಲದೇ ಮೇಲ್ಕಂಡ ಪರೀಕ್ಷೆಗಳನ್ನು ಕಟ್ಟಲು ಬಯಸುವ ವಿದ್ಯಾರ್ಥಿಗಳಿಗೂ ಲಾಂಗ್ ಟರ್ಮ್ ನೀಟ್ ಕೋಚಿಂಗ್ ನೀಡಲಾಗುವುದು. ಆರ್ಯ ವಿಜ್ಞಾನ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯಕ ಹಾಸ್ಟೆಲ್ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...