Friday, November 22, 2024
Friday, November 22, 2024

Lok Sabha Election 2024 ಮತದಾರರ ಹೆಸರು ಸೇರಿಸಲು ಅವಕಾಶವಿದೆ,ಮಾಹಿತಿ ಓದಿ

Date:

Lok Sabha Election 2024 ಈ ಬಾರಿಯ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ನೀವಿನ್ನು ಮತ ಚಲಾಯಿಸಲು ನೋಂದಾಯಿಸಿಕೊಳ್ಳದಿದ್ದರೆ ಅಥವಾ ಬದಲಾವಣೆಗಳನ್ನು ಮಾಡಲು ಬಯಸಿದರೆ, ಅದನ್ನು ಮಾಡಲು ನಿಮಗಿನ್ನೂ ಸಮಯವಿದೆ.
ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಪ್ರಕಾರ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನದ 10 ದಿನಕ್ಕೂ ಮೊದಲು ನಾಗರಿಕರು ತಮ್ಮ ನೋಂದಣಿ ಅಥವಾ ತಿದ್ದುಪಡಿಯನ್ನು ಮಾಡಬಹುದು. ಏಪ್ರಿಲ್ 26 ರಂದು ಮತದಾನ ನಡೆಯುವ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳ ಮತದಾರರಿಗೆ ಮಾರ್ಚ್ 25 ಕೊನೆಯ ದಿನವಾಗಿದೆ. ಅದೇ ರೀತಿ ಉತ್ತರದ 14 ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಕೊನೆಯ ದಿನಾಂಕ ಏಪ್ರಿಲ್ 9 (ಮತದಾನ ದಿನ ಮೇ 7) ಆಗಿದೆ.

Lok Sabha Election 2024 ವ್ಯಕ್ತಿಯೊಬ್ಬರು ನೋಂದಣಿ ಮಾಡಿಕೊಂಡಿದ್ದರೆ, ಆದರೆ ಅವರ ಬಳಿಯಲ್ಲಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಅಂತವರು ಕೂಡ ಮತ ಚಲಾಯಿಸಬಹುದು. ಇದಕ್ಕಾಗಿ ಮತದಾರರು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ 12 ಸರ್ಕಾರಿ-ದೃಢೀಕೃತ ಗುರುತಿನ ಪುರಾವೆಗಳಲ್ಲಿ ಯಾವುದನ್ನಾದರೂ ಒಂದನ್ನು ಒಯ್ಯಬೇಕಾಗುತ್ತದೆ.
‘ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದು ಖಚಿತಪಡಿಸಿಕೊಂಡರೆ ಸಾಕು. ನೀವು ಆ ಪಟ್ಟಿಯ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಳ್ಳಬಹುದು ಮತ್ತು ಮತದಾನಕ್ಕೂ ಮೊದಲು ಪರಿಶೀಲನೆ ಕೌಂಟರ್‌ನಲ್ಲಿ ಅದನ್ನು ತೋರಿಸಬಹುದು. ಆದರೆ, ಪ್ರಿಂಟೌಟ್ ತೆಗೆದುಕೊಳ್ಳುವುದನ್ನು ಮಾನ್ಯ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ. ಮತದಾರರ ಪಟ್ಟಿಯಲ್ಲಿನ ನಿಮ್ಮ ವಿವರಗಳನ್ನು ವೇಗವಾಗಿ ಹುಡುಕಲು ಸ್ಕ್ರೀನ್‌ಶಾಟ್ ಚುನಾವಣಾ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

‘ವ್ಯಕ್ತಿಯು ವೋಟರ್ ಐಡಿಯನ್ನು ಹೊಂದಿಲ್ಲದಿದ್ದರೆ, ಮಾನ್ಯವಾದ ಗುರುತಿನ ಚೀಟಿ ಪುರಾವೆಯನ್ನು ತೋರಿಸುವುದು ಅಗತ್ಯವಾಗಿರುತ್ತದೆ. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ, ಹೆಚ್ಚುವರಿ ಸರ್ಕಾರಿ ಗುರುತಿನ ಪುರಾವೆಯನ್ನು ಒಯ್ಯುವುದು ಸೂಕ್ತವಾಗಿದೆ. ನಾಗರಿಕರು E-EPIC ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಪರಿಶೀಲನೆಗಾಗಿ ಚುನಾವಣಾ ಅಧಿಕಾರಿಗಳಿಗೆ ತೋರಿಸಬಹುದು. ಆದರೆ, ಅದರ ಪ್ರಿಂಟ್ ತೆಗೆದುಕೊಳ್ಳಬಾರದು’ ಎನ್ನುತ್ತಾರೆ ಅಧಿಕಾರಿ.

ಪ್ರಾತಿನಿಧಿಕ ಚಿತ್ರ
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬಹುದು: ಹೈಕೋರ್ಟ್
ಮತ ಚಲಾಯಿಸಲು ತೆರಳುವ ಮುನ್ನ, ಪ್ರತಿಯೊಬ್ಬ ನಾಗರಿಕರು ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಬೇಕು. ಅದು ವೆಬ್‌ಸೈಟ್ ಅಥವಾ ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಕೇವಲ E-EPIC ಅನ್ನು ಹೊಂದಿರುವುದು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂಬುದನ್ನು ಸೂಚಿಸುವುದಿಲ್ಲ ಎಂದು ಅಧಿಕಾರಿ ಹೇಳುತ್ತಾರೆ.

ಮತ ಚಲಾಯಿಸಲು ಸಿದ್ಧರಾಗಿ

  • ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳಲು ನಾಗರಿಕರು ಫಾರ್ಮ್ 6 ಅನ್ನು ಭರ್ತಿ ಮಾಡಬೇಕು, ತಿದ್ದುಪಡಿಗಳನ್ನು ಮಾಡಲು ಬಯಸುವವರು ಫಾರ್ಮ್ 8 ಅನ್ನು ಭರ್ತಿ ಮಾಡಬೇಕು.
  • ಫಾರ್ಮ್‌ಗಳನ್ನು ಆನ್‌ಲೈನ್‌ನಲ್ಲಿ (www.nvsp.in) ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಬಹುದು ಅಥವಾ ಡೌನ್‌ಲೋಡ್ ಮಾಡಿ ಭೌತಿಕವಾಗಿ ಚುನಾವಣಾ ನೋಂದಣಿ ಅಧಿಕಾರಿ ಅಥವಾ ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸಬಹುದು. ಅವುಗಳನ್ನು ಅಂಚೆ ಮೂಲಕವೂ ಕಳುಹಿಸಬಹುದು.
  • ವಿಳಾಸ ಬದಲಾವಣೆಯ ಸಂದರ್ಭದಲ್ಲಿ, ಅರ್ಜಿದಾರರು ಫಾರ್ಮ್ 8 ಎ ಅನ್ನು ಭರ್ತಿ ಮಾಡಬೇಕಾಗುತ್ತದೆ.
  • ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಲು ಫಾರ್ಮ್ 7 ಅನ್ನು ಭರ್ತಿ ಮಾಡಬೇಕಾಗುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...