Vishwaranga Puraskar ಶೃಂಗೇರಿ ಯ ರಂಗಭೂಮಿ, ಕಿರುತೆರೆ, ಯಕ್ಷಗಾನ ಮತ್ತು ಚಲನಚಿತ್ರ ಕ್ಷೇತ್ರದ ಅನನ್ಯ ಸಾಧಕ ರಮೇಶ್ ಬೇಗಾರ್ ಇವರಿಗೆ ” ಮಲಬಾರ್ ವಿಶ್ವರಂಗ ಪುರಸ್ಕಾರ ಒದಗಿದೆ.
ಉಡುಪಿಯ ವಿಶ್ವ ಸಂಸ್ಕೃತಿ ಪ್ರತಿಷ್ಠಾನ , ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ , ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಹಯೋಗದಲ್ಲಿ ಪ್ರತಿವರ್ಷ ರಾಜ್ಯ ಮತ್ತು ಅಂತಾರರಾಜ್ಯ ಕಲಾವಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದ್ದು ಇದೇ ಮೊದಲ ಬಾರಿಗೆ ಮಲೆನಾಡ ಭಾಗದ ರಂಗಕರ್ಮಿ ಯೊಬ್ಬ ರಿಗೆ ಈ ಪ್ರತಿಷ್ಟಿತ ಪ್ರಶಸ್ತಿ ಬೇಗಾರ್ ಮೂಲಕ ಒಲಿದು ಬಂದಿದೆ.
1986 ರಲ್ಲಿ ಪಿಯುಸಿ ವಿದ್ಯಾರ್ಥಿ ಆಗಿದ್ದಾಗಲೇ ಆಗಿನ ಸ್ಟಾರ್ ಯಕ್ಷಗಾನ ಕಲಾವಿದರ ಕೂಡುವಿಕೆ ಯಲ್ಲಿ ತೆಂಕು – ಬಡಗು ಯಕ್ಷಗಾನ ( ಇದು ಮಲೆನಾಡ ಮೊದಲ ಮಳೆಗಾಲ ದ ಸಮ್ಮಿಶ್ರ ಯಕ್ಷಗಾನ ) ಸಂಘಟಿಸುವ ಮೂಲಕ ಕಲಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ರಮೇಶ್ ಬೇಗಾರ್ 38 ವರ್ಷಗಳ ಸುದೀರ್ಘ ಬಿಡುವಿಲ್ಲದ ಸಾಂಸ್ಕೃತಿಕ ಪ್ರಯಾಣ ದಲ್ಲಿ ಮಲೆನಾಡನ್ನು ನಾಡು ಮೆಚ್ಚುವಂತೆ ಸಾಧಕ ದಿಗ್ಗಜರಾಗಿ ಮೂಡಿಬಂದಿದ್ದಾರೆ.
ರಮೇಶ್ ಬೇಗಾರ್ ಯಾವುದೋ ಒಂದು ಕ್ಷೇತ್ರ ಕ್ಕೆ ಸೀಮಿತರಾಗಿ ದುಡಿದವರಲ್ಲ. ಕಡಲ ತೀರದ ಭಾರ್ಗವ ಕಾರಂತ ರಂತೆ ಮಲೆನಾಡ ತೀರ ದ ಕಾರಂತರಾಗಿ ಬೆಳೆದವರು ಇವರು.
ತಾನು ಕೈ ಆಡಿಸಿದ ಎಲ್ಲಾ ಕ್ಷೇತ್ರ ದಲ್ಲೂ ವಿಶಿಷ್ಟ ಸಾಧನೆ ಯ ಛಾಪು ಮತ್ತು ಮೈಲಿಗಲ್ಲು ನೆಟ್ಟಿದ್ದಾರೆ.
ರಂಗಭೂಮಿ ಕ್ಷೇತ್ರ ದಲ್ಲಿ 50 ಕ್ಕೂ ಹೆಚ್ಚು ನಾಟಕ ಗಳನ್ನು ನಿರ್ದೇಶಿಸಿದ್ದಾರೆ.
ಕಿರುತೆರೆಯಲ್ಲಿ 680 ಎಪಿಸೋಡ್ ನಿರ್ದೇಶಸಿದ್ದಾರೆ. ಯಕ್ಷಗಾನ ದ ಆಡಿಯೋ ವಿಡಿಯೋ ದಾಖಲೀಕರಣ ದ ಸಂಖ್ಯೆ 230.
ಚಲನಚಿತ್ರ ದಲ್ಲೂ ಸಧ್ಯ 2 ಅತ್ಯುತ್ತಮ ಸಿನಿಮಾ ಗಳನ್ನು ನಿರ್ದೇಶಿಸಿ 3 ನೇ ಚಿತ್ರ ಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಯಕ್ಷಗಾನ ಅಕಾಡೆಮಿ ಗೆ 2 ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದವರು ರಮೇಶ್.
ಯಕ್ಷಗಾನ ಮತ್ತು ರಂಗಭೂಮಿ ಗೆ ಶೃಂಗೇರಿಯನ್ನು ಪ್ರಮುಖ ಕೇಂದ್ರ ಆಗಿಸುವಲ್ಲಿ ಇವರದು ಪ್ರಧಾನ ಪಾತ್ರ.
ಈಗಾಗಲೇ ಜಿಲ್ಲಾ ರಾಜ್ಯೋತ್ಸವ, ಆರ್ಯಭಟ, ಕಲಾಶ್ರೀ, ಚಾಮುಂಡೇಶ್ವರಿ, ಕಲಸಂಪದ ಮತ್ತು ಕತಾರ್ ದೇಶದ ಕನ್ನಡ ಸಂಘದ ಪ್ರಶಸ್ತಿ ಪಡೆದಿದ್ದಾರೆ.
ರಮೇಶ್ ಬೇಗಾರ್ ತಾವೊಬ್ಬರೇ ಬೆಳೆಯದೆ ಮಲೆನಾಡ ಪರಿಸರದ ನೂರಾರು ಕಲಾವಿದರನ್ನು ತನ್ನ ಜೊತೆಗೆ ಕರೆದೊಯ್ದು ಒಂದು ಸಂಸ್ಕೃತಿಕ ಪಡೆಯನ್ನೇ ಕಟ್ಟಿ ಬೆಳಸಿದ್ದಾರೆ.
Vishwaranga Puraskar ಜೊತೆ ಗೆ ಮಲೆನಾಡ ಹತ್ತಾರು ಪ್ರತಿಭಾವಂತ ರಿಗೆ ಆಯಕಟ್ಟಿನ ಪ್ರಶಸ್ತಿ ಪುರಸ್ಕಾರ ದೊರೆಯುವಲ್ಲಿ ನೇಪತ್ಯ ದ ಪಾತ್ರ ವಹಿಸಿದ್ದಾರೆ.
ಮಾರ್ಚ್ 26 ರಂದು ಮಲಬಾರ್ ವಿಶ್ವ ರಂಗ ಪುರಸ್ಕಾರ ಉಡುಪಿಯಲ್ಲಿ ಪ್ರದಾನವಾಗಲಿದೆ.
Vishwaranga Puraskar ಮಲೆನಾಡ ಪ್ರತಿಭಾವಂತ ನಿರ್ದೇಶಕ ರಮೇಶ್ ಬೇಗಾರ್ ಅವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ
Date: