Sahyadri Science College ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸೈಬರ್ ಅಪರಾಧ ಅರಿವು ಕಾರ್ಯಕ್ರಮವನ್ನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಿರಿಯ ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಶ್ರೀ ಜೇಸುದಾಸ್.ಪಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ, ಆದ್ದರಿಂದ ನಾವು ಸೈಬರ್ ಅಪರಾಧಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ಕೊಳ್ಳುವುದರಿಂದ ಮೋಸ ಹೋಗದ ಹಾಗೆ ಎಚ್ಚರಿಕೆಯಿಂದ ಇರಬಹುದು ಎಂದು ತಿಳಿಸಿದರು. ಕಲಿತ ವಿದ್ಯಾಸಂಸ್ಥೆಯನ್ನು ನಾವು ಜೀವನದಲ್ಲಿ ಎಂದೂ ಮರೆಯಬಾರದು ನಮ್ಮಿಂದ ಸಾಧ್ಯವಾದಷ್ಟು ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆದ ಶ್ರೀ ತಿಪ್ಪೇಸ್ವಾಮಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಹಿಡಿದು ಸಾರ್ವಜನಿಕರೆಲ್ಲರೂ ಸೈಬರ್ ಅಪರಾಧಗಳಿಗೆ ಸಿಲುಕಿ ಮೋಸ ಹೋಗುತ್ತಿದ್ದಾರೆ, ಸಾರ್ವಜನಿಕರು ಸೈಬರ್ ಕ್ರೈಮ್‌ಗೆ ಸಂಬ0ಧಪಟ್ಟ ದೂರುಗಳನ್ನು ಸೈಬರ್ ಠಾಣೆಯನ್ನು ಸಂಪರ್ಕಿಸಿ ಅಥವಾ ಆನ್ಲೈನ್ ಮೂಲಕವೂ ದಾಖಲಿಸಲು ಅವಕಾಶವಿದೆ ಎಂದು ತಿಳಿಸಿದರು. ಶ್ರೀ ವಿರೂಪಾಕ್ಷಪ್ಪ ಅವರು ಮಾತನಾಡಿ ಪ್ರತಿನಿತ್ಯ ವಿದ್ಯಾರ್ಥಿಗಳು ಸಾರ್ವಜನಿಕರು ಹಣವನ್ನು ಕಳೆದುಕೊಳ್ಳುವುದರ ಜೊತೆಗೆ ಮೋಸ ಹೋಗುತ್ತಿರುವುದನ್ನು ಕಂಡು ತುಂಬಾ ನೋವಾಗುತ್ತಿದೆ ಹೀಗಾಗದಂತೆ ಜಾಗೃತರಾಗಿರಬೇಕು ಎಂದು ತಿಳಿಸಿ ವಿದ್ಯಾರ್ಥಿಗಳು ಕೇಳಿದಂತಹ ಪ್ರಶ್ನೆಗಳಿಗೆ ಸಂಪೂರ್ಣವಾಗಿ ಉತ್ತರಿಸಿದರು.
Sahyadri Science College ಡಾ. ನಾಗರಾಜ್ ಪರಿಸರ ಕಾರ್ಯದರ್ಶಿಗಳು, ಹಿರಿಯ ವಿದ್ಯಾರ್ಥಿಗಳ ಸಂಘ ಇವರು ಮಾತನಾಡಿ ತಾಳ್ಮೆಯಿಂದ ಇದ್ದು ದುಡುಕದೆ ಒಳ್ಳೆಯ ಸ್ನೇಹಿತರೊಂದಿಗೆ ಒಳ್ಳೆಯ ಜೀವನ ನಡೆಸಿ ಹಾಗೂ ಸೈಬರ್ ಅಪರಾಧಕ್ಕೆ ಸಂಬAಧಪಟ್ಟ ವಿವರಗಳನ್ನು ತಿಳಿದುಕೊಂಡು ಇತರರಿಗೂ ಮೋಸ ಹೋಗದಿರಲು ತಿಳಿಸಿ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಶ್ವರಿ.ಎನ್ ಮಾತನಾಡಿ ಆಸೆ, ವ್ಯಾಮೋಹ, ನಿರ್ಲಕ್ಷತೆ ಈ ಮೂರು ಸಾರ್ವಜನಿಕರು ಸೈಬರ್ ಅಪರಾಧಗಳಿಗೆ ಸಿಲಿಕಲು ಕಾರಣವಾಗಿವೆ ಎಂದು ತಿಳಿಸಿದರು.
ನಿರ್ದೇಶಕರಾದ ಪ್ರೊಫೆಸರ್ ಲತಾ ಕೆ.ಪಿ ಎಲ್ಲರನ್ನೂ ಸ್ವಾಗತಿಸಿದರು, ಡಾ ವೆಂಕಟೇಶ್ ಪಿ ಸರ್ವರನ್ನು ವಂದಿಸಿದರು. ಹಿರಿಯ ಸಂಶೋಧನಾ ವಿದ್ಯಾರ್ಥಿ ಶ್ರೀ ಜಯಂತ್ ಬಾಬು ಕಾರ್ಯಕ್ರಮವನ್ನು ನಿರೂಪಿಸಿದರು.