Election bond ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಸತತ 3ನೇ ಬಾರಿ ಸ್ಟೇಟ್
ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಕಿಡಿಕಾರಿರುವ ಸುಪ್ರೀಂ ಕೋರ್ಟ್,
ಕಣ್ಣಾಮುಚ್ಚಾಲೆ ನಿಲ್ಲಿಸಿ ಸಂಪೂರ್ಣ
ಬಹಿರಂಗಪಡಿಸುವಂತೆ ತಾಕೀತು ಮಾಡಿದೆ.
ಮಾಹಿತಿಯನ್ನು
ಯಾವ ಪಕ್ಷಕ್ಕೆ ಯಾರು ದೇಣಿಗೆ ನೀಡಿದರು, ಎಷ್ಟು ಬಾಂಡ್
ಖರೀದಿಸಿದರು ಎಂಬುದು ಸೇರಿದಂತೆ ಸಮಗ್ರ ವಿವರವನ್ನು
ಚುನಾವಣಾ ಆಯೋಗಕ್ಕೆ ನೀಡಬೇಕು. ಈ ವಿಚಾರದಲ್ಲಿ ಕೇವಲ
ಆಯ್ದ ಮಾಹಿತಿ ನೀಡಲು ಅವಕಾಶವಿಲ್ಲ ಎಂದು ಸಿಜೆಐ ಡಿ.ವೈ.
ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯ ಪೀಠ ಸೋಮವಾರ
ಹೇಳಿತು.
Election bond ವಿಶೇಷವಾಗಿ, ಬಾಂಡ್‌ಗಳನ್ನು ಖರೀದಿಸಿದ ವ್ಯಕ್ತಿ ಮತ್ತು ಆ ಹಣವನ್ನು ಪಡೆಯುವ
ಪಕ್ಷಗಳ ನಂಟನ್ನು ಬಹಿರಂಗಪಡಿಸುವ ಆಲ್ಫಾ ನ್ಯೂಮರಿಕಲ್’ ಸಂಖ್ಯೆಯ ವಿವರವನ್ನು
ಸಲ್ಲಿಸಲು ಎಸ್‌ಬಿಐ ಹಿಂದೇಟು ಹಾಕುತ್ತಿದೆ. ಇದು ಸುಪ್ರೀಂ ಕೋರ್ಟ್ ಅಸಮಾಧಾನಕ್ಕೆ
ಕಾರಣವಾಗಿದೆ.