Evergreen forest ನಿತ್ಯ ಹರಿದ್ವರ್ಣದ ಕಾಡು, ಹಸಿರು ಹೊದಿಕೆಯನ್ನು ಹೊಂದಿರುವ ಪಶ್ಚಿಮಘಟ್ಟ ಸೇರಿದಂತೆ ರಾಜ್ಯದ ಪರಿಸರವನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಕರ್ತವ್ಯ ಎಂದು ರಾಜ್ಯ ಪರಿಸರ ತಜ್ಞ ಮೌಲ್ಯಮಾಪನ ಸಮಿತಿಯ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ಚಿಕ್ಕಮಗಳೂರಿನ, ಮರ್ಲೆ ಗ್ರಾಮ ಪಂಚಾಯಿತಿ ಹಾಗೂ ಬೀರದೇವರ ಟ್ರಸ್ಟ್ ಹರಿಹರದಳ್ಳಿ ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ಏರ್ಪಡಿ ಸಿದ್ದ ರಾಜ್ಯ ಪರಿಸರ ತಜ್ಞ ಮೌಲ್ಯಮಾಪನ ಸಮಿತಿಯ ಅಧ್ಯಕ್ಷರಾಗಿ ನೇಮಕವಾದ ಹಿನ್ನೆಲೆಯಲ್ಲಿ ಮುಖಂಡರಿoದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮಾನವ ತನ್ನ ಅಗತ್ಯವನ್ನು ಮೀರಿ ಪರಿಸರವನ್ನು ಬಳಕೆ ಮಾಡುತ್ತಿರುವುದರಿಂದ ನಿಸರ್ಗದಲ್ಲಿ ಏರುಪೇರು ರಾಗುತ್ತಿದ್ದು ಸಮತೋಲನ ಕಾಯ್ದುಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಸಮಿತಿಯಿಂದ ನಿರಪೇಕ್ಷಣ ಪತ್ರ ನೀಡುವಾಗ ಅವರು ನಿಗಾ ವಹಿಸಲಿದ್ದು ನಿಯಮ ಮೀರಿದ ಕೂಗಾರಿಕೆ, ಗಣಿಗಾರಿಕೆ ಹಾಗು ಕಟ್ಟಡಗಳ ನಿರ್ಮಾ ಣಕ್ಕೆ ಅವಕಾಶ ನೀಡದೇ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಲಾಗುವುದು ಎಂದರು.
Evergreen forest ಈ ಸಂದರ್ಭದಲ್ಲಿ ಮರ್ಲೆ ಗ್ರಾ.ಪಂ. ಅಧ್ಯಕ್ಷೆ ಸುಧಾ ಮಂಜುನಾಥ್, ಸದಸ್ಯರಾದ ಜಗದೀಶ್, ಬಸವರಾಜು, ಎನ್.ಡಿ.ಮಂಜುನಾಥ್, ಮುಖಂಡರುಗಳಾದ ಹೆಚ್.ಎಲ್.ಬಲರಾಮ್, ಚಂದ್ರಶೇಖರ್, ಬಸವ ರಾಜ್ ಮತ್ತಿತರಿದ್ದರು ಹಾಜರಿದ್ದರು.