Vehicular traffic ಮಾರ್ಚ್ 18ರಂದು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿರುವ ಬೃಹತ್ ಬಹಿರಂಗ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅಗಮಿಸಲಿದ್ದು ಸದರಿ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನ ಭಾಗವಹಿಸುವ ಬಗ್ಗೆ ಮಾಹಿತಿ ಇರುತ್ತದೆ.
ಈ ಸಮಯದಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂದರೆಯಾಗದಂತ ಸುಗಮ ಸಂಚಾರದ ಸಲುವಾಗಿ ದಿನಾಂಕ:18.3.2024ರಂದು ತಾತ್ಕಾಲಿಕವಾಗಿ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗಗಳಲ್ಲಿ ಚಲಿಸಲು ಅಧಿಸೂಚನ ಹೊರಡಿಸಲು ಹಾಗೂ ಸದರಿ ಆದೇಶವನ್ನು ಹೋರಾಡಿಸಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ತೆ ಸುಗಮಗೊಳಿಸುವ ನಿಟ್ಟಿನಲ್ಲಿ ಗುರುದತ್ತ ಹೆಗಡೆ, ಭಾ.ಆ.ಸೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಶಿವಮೊಗ್ಗ ಜಿಲ್ಲೆ ಆದ ನಾನು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೋಟಾರು ವಾಹನ ಕಾಯ್ದೆ 1988 ಕಲಂ 115 ಮತ್ತು 117ರ ಅನ್ವಯ ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವಂತೆ ತಾತ್ಕಾಲಿಕವಾಗಿ ಶೂನ್ಯ ಸಂಚಾರ ಮತ್ತು ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗಗಳಲ್ಲಿ ಚಲಿಸಲು ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
Vehicular traffic ದಿನಾಂಕ:18.3.2024 ರಿಂದ ಬೆಳಗ್ಗೆ 06-00 ರಿಂದ ಸಂಜೆ 06-00 ವರೆಗೆ ಶೂನ್ಯ ಸಂಚಾರ
ಸೋಗಾನೆ ವಿಮಾನ ನಿಲ್ದಾಣದಿಂದ ಎಂಆರ್ ಎಸ್ ಸರ್ಕಲ್ -ಶಂಕರಮಠ ಸರ್ಕಲ್ -ಕರ್ನಾಟಕ ಸಂಘ-ಶಿವಪ್ಪ ನಾಯಕ ಸರ್ಕಲ್ -ಎಎ ಸರ್ಕಲ್-ಅಶೋಕ ಸರ್ಕಲ್-ಹೆಲಿಪ್ಯಾಡ ಸರ್ಕಲ್ ವರೆಗೆ ಹೆಲಿಪ್ಯಾಡ್ ಸರ್ಕಲ್ ನಿಂದ ಕುವೆಂಪು ರಸ್ತೆ ಮಾರ್ಗವಾಗಿ ನಂದಿ ಪೆಟ್ರೋಲ್ ಬಂಕ್ ಕ್ರಾಸ್, ವಿನೋಬನಗರ 60 ಅಡಿ ರಸ್ತೆ, ಸೈಕಲೋತ್ಸವ ಸರ್ಕಲ್, ರಾಜ್ ಕುಮಾರ್ ಸರ್ಕಲ್ ವರೆಗೆ.