ವಿಶೇಷ ಲೇಖನ:
ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ
429th Vardhanti Mahotsava ಶ್ರೀರಾಘವೇಂದ್ರಸ್ವಾಮಿಗಳವರು,ರಾಯರು,ಗುರುರಾಯರು,ಗುರುರಾಜರು ಶ್ರೀರಾಘವೇಂದ್ರಗುರುಸಾರ್ವಭೌಮರನ್ನು ಸಾಮಾನ್ಯವಾಗಿ ಈ ಹೆಸರುಗಳಿಂದ ಕರೆಯುವುದು
ರೂಢಿಯಲ್ಲಿದೆ.
ಶ್ರೀಗುರುರಾಯರ ಹೆಸರನ್ನು ಕೇಳಿದರೇ ಸಾಕು ಮೈಯಲ್ಲಿ ಭಕ್ತಿಯ ರೋಮಾಂಚನವಾಗುತ್ತದೆ.ಒಂದು ರೀತಿಯ ಆತ್ಮಸ್ಥೈರ್ಯವನ್ನು ಪಡೆಯುತ್ತೇವೆ.
ಪವಿತ್ರ ತುಂಗಭದ್ರೆ ತಾಯಿ ಹರಿದಿರುವ ಮಂತ್ರಾಲಯ ಕ್ಷೇತ್ರದಲ್ಲಿ ಸಶರೀರರಾಗಿ ಬೃಂದಾವನದಲ್ಲಿ ಯೋಗೀಶ್ವರರಾಗಿ ಕುಳಿತು ಕಲ್ಪ
ವೃಕ್ಷದಂತೆ ಅವರಿದ್ದಲ್ಲಿಗೆ ದರ್ಶನ ಮಾಡಲು ಬರುವ ಭಕ್ತರಿಗೆ ಅನುಗ್ರಹ ಮಾಡುತ್ತಾ ಇರುವ ಮಹಾನುಭಾವರು.
ಯಾರಿಗೆ ಅವರಿದ್ದಲ್ಲಿಗೆ ಹೋಗಿ ದರ್ಶನ ಮಾಡಲು
ಅನಾನುಕೂಲ ವಿದೆಯೋ ಅಂಥಹ ಭಕ್ತರಿದ್ದಲ್ಲಿಯೇ ಬಂದು ಕಾಮಧೇನುವಿನಂತೆ ಅನುಗ್ರಹಿಸುತ್ತಿರುವ ಕರುಣಾಳುಗಳು ಶ್ರೀರಾಯರು.
ಚತುರ್ಮುಖ ಬ್ರಹ್ಮದೇವರ ಆಸ್ಥಾನದಲ್ಲಿ ನಿತ್ಯ ಬ್ರಹ್ಮದೇವರು ಮಾಡುತ್ತಿದ್ದ ದೇವರ ಅರ್ಚನೆಗೆ ಹೂವು,ತುಳಸಿಯನ್ನು ತಂದು ಒದಗಿಸುವ ಕಾರ್ಯಕ್ಕೆ ನಿಯುಕ್ತರಾಗಿದ್ದ ಶಂಕುಕರ್ಣ ಎನ್ನುವ ಬ್ರಹ್ಮದೇವರ ಆಸ್ಥಾನದ ದೇವತೆಯೇ ಭೂಮಿಯಲ್ಲಿ ಅವತಾರವೆತ್ತಿ ಈ ಕಲಿಯುಗದಲ್ಲಿ ಶ್ರೀರಾಘವೇಂದ್ರಸ್ವಾಮಿಗಳೆಂಬ ಹೆಸರಿನಿಂದ ಶೋಭಿಸುತ್ತಿದ್ದಾರೆ.
429th Vardhanti Mahotsava ರಾಯರು ಕಲಿಯುಗದಲ್ಲಿ ಮನುಕುಲ ಉದ್ಧಾರಮಾಡಲೆಂದೇ ಬ್ರಹ್ಮದೇವರು
ಶಂಕುಕರ್ಣದೇವತೆಯನ್ನು ಕಳಿಸಿದ್ದಾರೆಂದರೆ ತಪ್ಪಾ
ಗುವುದಿಲ್ಲ.
ಇವರ ಮೊದಲನೆಯದಾಗಿ ದಾನವರಾಜ ಹಿರಣ್ಯಕಶಿಪು ಮತ್ತು ಕಯಾದುವಿನ ಪ್ರಹ್ಲಾದರಾಜರಾಗಿ ಅವತರಿಸುತ್ತಾರೆ.
ಎರಡನೆಯ ಅವತಾರದಲ್ಲಿ ಕುರುವಂಶದ ಬಾಹ್ಲೀಕ
ರಾಜರಾಗಿ,ಮೂರನೆಯ ಅವತಾರದಲ್ಲಿ ಶ್ರೀವ್ಯಾಸರಾಯರಾಯರಾಗಿ ಹಾಗೂ ನಾಲ್ಕನೆಯ
ಅವತಾರವೇ ಶ್ರೀರಾಘವೇಂದ್ರಗುರುಸಾರ್ವಭೌಮರಾಗಿ ಮಂತ್ರಾಯ ಕ್ಷೇತ್ರದಲ್ಲಿ ವಿರಾಜಮಾನರಾಗಿದ್ದಾರೆ.
ಶ್ರೀರಾಯರು ಮಂತ್ರಾಲಯ ಕ್ಷೇತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡರು ಎನ್ನುವುದಕ್ಕೆ ಕಾರಣ
ಅವರ ಹಿಂದಿನ ಅವತಾರದಲ್ಲಿ ಪ್ರಹ್ಲಾದ ರಾಜರಾಗಿದ್ದಾಗ ಯಜ್ಞ ಮಾಡಿದ ಜಾಗವಾಗಿರುತ್ತೆ.ಹಿಂದೆ ಈ ಸ್ಥಳವನ್ನು ಮಂಚಾಲಿ
ಎಂದು ಹೆಸರಿತ್ತು.ಅಂದಿನ ಮಂಚಾಲಿಗ್ರಾಮವೇ ಇಂದು “ಮಂತ್ರಾಲಯ” ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.
ಆ ಪ್ರದೇಶದಲ್ಲಿ ಗ್ರಾಮದೇವತೆ ಮಂಚಾಲಮ್ಮನವರು ನೆಲೆಸಿದ್ದಾರೆ.ಮಂಚಾಲಮ್ಮ
ದೇವಿಯವರು ರಾಯರಿಗೆ ಮಾತೃವಾತ್ಸಲ್ಯದಿಂದ
ಅವರ ಬಳಿಯಲ್ಲೇ ಇರಲು ಅನುಗ್ರಹಿಸುತ್ತಾರೆ.
ಮತ್ತು ರಾಯರಿಗೆ ವಿಶ್ವಗುರುಗಳೆಂದು ಅಖಂಡ ಕೀರ್ತಿ ಗಳಿಸಿ ವಿಶ್ವದ ಜನತೆಯ ಹಿತ ಸಾಧಕನಾಗಿ
ಹೆಸರುಗಳಿಸುತ್ತೀಯ,ವತ್ಸ ನಿನಗೆ ಮಂಗಳವಾಗಲಿ
ಎಂದು ಆಶೀರ್ವದಿಸುತ್ತಾರೆ.
ಶ್ರೀರಾಯರು ಆದವಾನಿಯಲ್ಲಿದ್ದಾಗ,ಅಲ್ಲಿ ನವಾಬರ ಆಸ್ಥಾನದಲ್ಲಿ ದಿವಾನನಾಗಿದ್ದ ವೆಂಕಣ್ಣನು ರಾಯರ ಪರಮಶಿಷ್ಯನಾಗಿರುತ್ತಾನೆ.
ವೆಂಕಣ್ಣನು ಶ್ರೀರಾಯರದರ್ಶನ ಮಾಡಿ ತಮ್ಮ
ಆಸ್ಥಾನದ ನವಾಬ ಅಸದುಲ್ಲಾಖಾನನನ್ನೂ ಗುರುಗಳ ಬಳಿಗೆ ಕರೆದುಕೊಂಡು ಬರುತ್ತಾನೆ.ನವಾಬನು ಗುರುಗಳನ್ನು ಪರೀಕ್ಷೆಮಾಡ
ಬೇಕೆಂತಲೇ ಸೇವಕನ ಕೈಯಲ್ಲಿ ಮಾಂಸದ ತುಂಡುಗಳಿದ್ದ ಬಟ್ಟೆಯಿಂದ ಮುಚ್ಚಿದ ತಟ್ಟೆಯನ್ನು
ತರಿಸಿ ಶ್ರೀಗಳವರ ಮುಂದೆ ದೇವರ ನೈವೇದ್ಯಕ್ಕಿಡಿಸುತ್ತಾನೆ.
ರಾಯರು ತಮ್ಮ ಕಮಂಡಲೋದಕದಿಂದ ನೀರನ್ನು ಪ್ರೋಕ್ಷಿಸಿದೊಡನೆಯೇ ತಟ್ಟೆಯಲ್ಲಿದ ವಸ್ತುಗಳೆಲ್ಲವೂ ಹೂವು,ಹಣ್ಣುಗಳಾದವು.
ನವಾಬನು ಪರೀಕ್ಷೆಮಾಡಿದ್ದು ತಪ್ಪಾಯಿತೆಂದು ಶ್ರೀಗಳವರಲ್ಲಿ ಕ್ಷಮೆಯಾಚಿಸುತ್ತಾನೆ.
ಶ್ರೀರಾಯರು ಸಂಚಾರಮಾಡುತ್ತಾ ಗದುಗಿನ ಹತ್ತಿರವಿರುವ ಕಿರೀಟಗಿರಿ ಎನ್ನುವ ಊರಿಗೆ ಬರುತ್ತಾರೆ.ಅಲ್ಲಿ ದೇಸಾಯಿ ಎನ್ನುವವರ ಮನೆಯಲ್ಲಿ ಪೂಜೆ ಏರ್ಪಾಡು ಮಾಡಿರುತ್ತಾರೆ.
ದೇಸಾಯರ ಮಗ ಆಟವಾಡುತ್ತಾ ಬಂದವನು ಮನೆಯಲ್ಲಿ ಅಂದು ತಯಾರಿಸಿದ್ದ ಮಾವಿನಹಣ್ಣಿನ ಸೀಕರಣೆಯ ಕೊಳಗದಲ್ಲಿ ಬಿದ್ದು ಮೃತನಾಗಿರುತ್ತಾನೆ.ಶ್ರೀರಾಯರು ದೇಸಾಯರ ಮಗನನ್ನು ತಮ್ಮ ತಪ:ಶಕ್ತಿಯಿಂದ ಬದುಕಿಸುತ್ತಾರೆ.
ಹೀಗೆ ರಾಯರು ಕಲಿಯುಗದ ಕಾಮಧೇನುಗಳಾಗಿ
ಭಕ್ತಿಯಿಂದ ತಮ್ಮನ್ನು ಸೇವಿಸಿದವರಿಗೆ ಅವರ ಸಾತ್ವಿಕ ಇಷ್ಟಾರ್ಥ ಸಿದ್ಧಿಗಳನ್ನು ನೆರವೇರಿಸುವ ಕರುಣಾಮಯಿಗಳಾಗಿದ್ದಾರೆ.
ತಾವು ಸಂಪಾದಿಸಿದ್ದ ಪುಣ್ಯವನ್ನು ಭಕ್ತ ಕೋಟಿಗೆ ಹಂಚುತ್ತಿರುವ ಕಾರುಣ್ಯಮಯಿಗಳು ರಾಯರು.
ಇಂದು ಶ್ರೀರಾಯರ 429ನೇ ವರ್ಷದ ವರ್ಧಂತಿ ಉತ್ಸವದ ಶುಭ ದಿನವಾಗಿರುತ್ತದೆ.
ಈ ಶುಭದಿನದಲ್ಲಿ ನಾವೂ ಶ್ರೀರಾಯರನ್ನು ಸ್ಮರಣೆಮಾಡಿ ಭಕ್ತಿಯ ನಮನಗಳನ್ನು ಅರ್ಪಿಸಿ ಅವರ ಅನುಗ್ರಹಕ್ಕೆ ಪಾತರಾಗೋಣ.