Pradhan Mantri Suraksha Bima Yojana ಇ-ಶ್ರಮ ಪೋರ್ಟಲ್ ಮೂಲಕ ನೊಂದಣಿಯಾದ ಅಸಂಘಟಿತ ಕಾರ್ಮಿಕ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿ ರೂ.2 ಲಕ್ಷಗಳ ಅಪಘಾತ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮಾ.31 ಅಂತಿಮ ದಿನವಾಗಿದೆ.
ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ(ಎನ್‍ಡಿಯುಡಬ್ಲ್ಯು) ಕ್ರೋಢೀಕರಿಸುವ ಉದ್ದೇಶದಿಂದ 379 ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್ ಮೂಲಕ ದಿ: 26-08-2021 ರಿಮದ ನೋಂದಾಯಿಸಲಾಗುತ್ತಿದ್ದು ದಿ: 31-03-2022 ರವರೆಗೆ ನೋಂದಣಿಯಾದ ಮತ್ತು ಸದರಿ ದಿನಾಂಕದೊಳಗೆ ಅಪಘಾತಕ್ಕೀಡಾದ ಫಲಾನುಭವಿಗಳಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮಾ.31 ಅಂತಿಮ ದಿನವಾಗಿರುತ್ತದೆ.
Pradhan Mantri Suraksha Bima Yojana ಫಲಾನುಭವಿ ಆಧಾರ್ ಸಂಖ್ಯೆ, ಯುಎಎನ್ ಕಾರ್ಡ್(ಇ-ಶ್ರಮ್) ಸಂಖ್ಯೆ, ಮರಣ ಪ್ರಮಾಣ ಪತ್ರ, ಮರಣಕ್ಕೆ ಕಾರಣದ ವೈದ್ಯಕೀಯ ಪ್ರಮಾಣ ಪತ್ರ, ಎಫ್‍ಐಆರ್, ಪಂಚನಾಮ, ಇತರೆ ಸೂಕ್ತ ದಾಖಲಾತಿಗಳನ್ನು ಕಾರ್ಮಿಕ ಅಧಿಕಾರಿಗಳ ಕಚೇರಿ ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಇಲ್ಲಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹೆಚ್ ಎಸ್ ಸುಮ ತಿಳಿಸಿದ್ದಾರೆ.