Women’s Day ಮಹಿಳೆಯಿಲ್ಲದ ಪ್ರಪಂಚ ಊಹಿಸಲು ಅಸಾಧ್ಯ. ಮಹಿಳೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅನೇಕ ಹೋರಾಟಗಳನ್ನು ನಡೆಸುತ್ತಿದ್ದಾರೆ. ಪುರುಷ ಮಹಿಳೆ ಎಂಬ ಬೇಧವಿಲ್ಲದೆ ಎಲ್ಲರೂ ಸಮಾನರು ಎಂಬ ಸಂವೇದನಾಶೀಲತೆ ಮೂಲಕ ಪ್ರತಿಯೊಬ್ಬರು ಸ್ವಾವಲಂಬಿ ಜೀವನ ನಡೆಸುವತ್ತ ಚಿತ್ತ ಹರಿಸಬೇಕಿದೆ ಎಂದು ಜೆಸಿ ಸಂಸ್ಥೆಯ ಬಿಸಿನೆಸ್ ಉಪಾಧ್ಯಕ್ಷರು ಮತ್ತು ಅಶ್ವಿನಿ ಮೇಕೋವರ್ ಸ್ಟುಡಿಯೋ ಸಂಸ್ಥೆಯ ಮಾಲೀಕರಾದ ಅಶ್ವಿನಿ ಎಸ್.ಎಂ. ಅಭಿಪ್ರಾಯ ವ್ಯಕ್ತಪಡಿದಿದ್ದಾರೆ
ಅವರು ಮಹಿಳಾ ದಿನಾಚರಣೆ ಪ್ರಯುಕ್ತ ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯು ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ಮೇಕಪ್ ಕಲಿಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಯಾರು ಮೇಲಲ್ಲ ಕೀಳಲ್ಲ ಎಲ್ಲರೂ ಸಮಾನರು ಎಂಬ ಸಂವೇದನಾಶೀಲತೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳ ಬೇಕಿದೆ. ಹಿಂದಿನ ಕಾಲದಿಂದಲೂ ದೇಶದ ಅತ್ಯುನ್ನತ ಸ್ಥಾನವನ್ನು ಪಡೆಯುವ ಮಟ್ಟಿಗೆ ಹೆಣ್ಣು ಬದಲಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇವರಿಗೆ “ಶಿವಮೊಗ್ಗದ ಯುವ ಮಹಿಳಾ ಸಾಧಕರು” ಎಂಬ ಅವಾರ್ಡ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜೆಸಿ ಸಂಜಯ್, ಕಾರ್ಯದರ್ಶಿಗಳಾದ ಜೆಸಿ ಮಂಜುನಾಥ್ ಶೆಟ್ಟಿ ಜೆಸಿ ಮಂಜುಳ ಕೇಶವ್, Women’s Day ಪೂರ್ವದ್ಯಕ್ಷರಾದ ಜೆಸಿ ಶ್ರೀಧರ್, ಜೆಸಿ ವಾಣಿ ಜಗದೀಶ್, ಜೆಸಿ ಭಾರತಿ,ಶುಭಂ ಮಾಲೀಕರಾದ ಜೆಸಿ ಚಂದ್ರಹಾಸ್ ಶೆಟ್ಟಿ ಮತ್ತು ಜೆಸಿ ಉದಯ್ ಕದಂಬ ಉಪಸ್ಥಿತರಿದ್ದರು
Women’s Day ಪ್ರತಿಯೊಬ್ಬರೂ ಸ್ವಾವಲಂಬಿ ಜೀವನದತ್ತ ಚಿತ್ತಹರಿಸಬೇಕು-ಎಸ್.ಎಂ.ಅಶ್ವಿನಿ
Date: