Indian National Congress ಕೊಚ್ಚೆ ನೀರಿಗೆ ಹೋಲಿಸಿದ್ದನ್ನು ಯಡಿಯೂರಪ್ಪ ಮರೆಯಲು ಸಾಧ್ಯವೇ.:ವೈ.ಬಿ.ಚಂದ್ರಕಾoತ್
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪವರು ಬಿ.ಜೆ.ಪಿ. ತೊರೆದು ಕೆ.ಜಿ.ಪಿ. ಕಟ್ಟಿದಾಗ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರವರು, ಯಡಿಯೂರಪ್ಪರನ್ನು ತೆಗಳುವ ಭರದಲ್ಲಿ ಗಂಗಾ ನದಿಯ ಕೊಚ್ಚೆ ನೀರಿಗೆ ಹೋಲಿಸಿದ್ದನ್ನು ಮರೆಯಲು ಸಾಧ್ಯವೇ. ಅಂದಿನ ಸೇಡು ಈಶ್ವರಪ್ಪರ ಪುತ್ರ ಕೆ.ಈ.ಕಾಂತೇಶ್‌ರವರಿಗೆ ಟಿಕೆಟ್ ತಪ್ಪುವುದಕ್ಕೆ ಮುಖ್ಯ ಕಾರಣವಾಗಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾoತ್ ಟೀಕಿಸಿದ್ದಾರೆ.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಎರಡು ಬಾರಿ ಶಾಸಕರಾದ ಸಂದರ್ಭಗಳಲ್ಲಿ ಧರ್ಮದ ಪರ ಮತ್ತು ಮುಸ್ಲಿಂ ವಿರೋಧಿ ದೋರಣೆಯನ್ನು ಅಷ್ಠಾಗಿ ಅನುಸರಿಸಿರಲಿಲ್ಲ, ಯಾವಾಗ ತಮಗೆ ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಟಿಕೆಟ್ ನಿರಾಕರಿಸಲಾಯಿತೋ ಅಂದಿನಿoದ ರಾಜಕೀಯ ಅಧಿಕಾರ ಪಡೆಯುವ ಏಕೈಕ ಉದ್ದೇಶದಿಂದ ಬಾಯಿ ಬಿಟ್ಟರೆ ಸಾಕು ಕಾಂಗ್ರೇಸ್ ಪಕ್ಷ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಪಾಕಿಸ್ತಾನ, ಹಿಂದು ಧರ್ಮ ಇವುಗಳನ್ನು ಬಿಟ್ಟು ಬೇರೆ ಮಾತನಾಡಲೇ ಇಲ್ಲ. ಈ ಹಿಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳ ಸಂದರ್ಭಗಳಲ್ಲಿ ಕೆ.ಎಸ್. ಈಶ್ವರಪ್ಪರವರು ಎಷ್ಟು ನಿಷ್ಠೆಯಿಂದ ಎಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆಂದು ಬಿ.ಎಸ್.ಯಡಿಯೂಪ್ಪ ಆದಿಯಾಗಿ ರಾಜ್ಯದ ಜನರಿಗೆ ತಿಳಿದಿರುವ ವಿಷಯವೆ ಆಗಿದೆ ಎಂದು ವಕ್ತಾರರಾದ ವೈ.ಬಿ.ಚಂದ್ರಕಾoತ್ ಲೇವಡಿ ಮಾಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮತ್ತವರ ಮಕ್ಕಳ ರಾಜಕೀಯ ವಿಷಯದಲ್ಲಿ ನೇರವಾಗಿ ಅಲ್ಲದೆ ಇದ್ದರೂ ಹಿಂಬದಿಯ ಚಿತಾವಣೆಯನ್ನು ಕೆ.ಎಸ್.ಈಶ್ವರಪ್ಪ ಮಾಡುತ್ತಲೆ ಬಂದಿದ್ದಾರೆ. ಅದರಲ್ಲೂ ಈ ಹಿಂದೆ ಬಿ.ಎಸ್.ಯಡಿಯೂರಪ್ಪರವರು ಕೆ.ಜೆ.ಪಿ. ಕಟ್ಟಿದಾಗ ಇದೆ ಕೆ.ಎಸ್.ಈಶ್ವರಪ್ಪರವರು ವಾಗ್ದಾಳಿ ನಡೆಸಿ ಬಿ.ಎಸ್.ಯಡಿಯೂರಪ್ಪರವರು ಬಿ.ಜೆ.ಪಿ. ಪಕ್ಷದಿಂದ ಹೊರ ಹೋಗಿದ್ದು ಒಂದು ಪೀಡೆಯೇ ತೊಲಗಿದಂತೆ ಆಗಿದೆ, ಕಲುಶಿತ ಗಂಗಾನದಿ ಶುದ್ದವಾದಂತೆ ಆಗಿದೆ ಎಂದೆಲ್ಲಾ ಟೀಕಿಸುವ ಮೂಲಕ ಜಿಲ್ಲೆಯಲ್ಲಿ ತಮ್ಮ ರಾಜಕೀಯ ನೆಲೆಯನ್ನು ಮತ್ತಷ್ಟು ಭದ್ರ ಮಾಡಿಕೊಳ್ಲುವ ತಂತ್ರಗಾರಿಕೆ ಮಾಡಿದ್ದರು. ಈ ತಂತ್ರದ ಭಾಗವಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವಿನ ವಾತಾವರಣ ಕಂಡು ಬಿ.ಎಸ್.ವೈ. ಕುಟುಂಬಕ್ಕೆ ರಾಜಕೀಯ ಹಿನ್ನಡೆ ಮಾಡುವ ಸಲುವಾಗಿಯೆ ತಮ್ಮ ಮಗನಿಗೆ ಟಿಕೇಟ್ ಕೇಳಿದ್ದರೆಂದು ವೈ.ಬಿ.ಚಂದ್ರಕಾoತ್ ಆರೋಪಿಸಿದ್ದಾರೆ.
Indian National Congress ಈಗ ಕಾಲ ಚಕ್ರ ಉರುಳಿದ ಮೇಲೂ ಈಶ್ವರಪ್ಪರ ಅಂದಿನ ರಾಜಕೀಯ ನಡವಳಿಕೆನ್ನು ಮರೆಯದ ಬಿ.ಎಸ್. ಯಡಿಯೂರಪ್ಪ ಅವರು ತಮ್ಮಲ್ಲಿರುವ ದಾಳಗಳನ್ನು ಬಿ.ಜೆ.ಪಿ ವರಿಷ್ಠರ ಮುಂದೆ ಕೆ.ಎಸ್.ಈಶ್ವರಪ್ಪರ ರಾಜಕೀಯ ಭವಿಷ್ಯಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದರಿಂದ ಈಶ್ವರಪ್ಪರ ಪುತ್ರ ಕೆ.ಈ.ಕಾಂತೇಶ್ ಅವರಿಗೆ ಲೋಕಸಭೆಯ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾoತ್ ಅವರು ಹೇಳಿದ್ದಾರೆ.