Friday, March 20, 2026
Friday, March 20, 2026

Shakhahaari Movie Review ಪ್ರೇಕ್ಷಕರನ್ನ ತುದಿಗಾಲಲ್ಲಿ ಕೂರುವಂತೆ ಮಾಡುವ ಅಪರೂಪದ ಸಿನಿಮಾ “ಶಾಖಾಹಾರಿ”

Date:

ಡಾ.ನಾಗಭೂಷಣ

Shakhahaari Movie Review ಶಾಖಾಹಾರಿ – ಒಂದು ಒಳ್ಳೆಯ ಸಿನಿಮಾ ನೋಡಿದ ಅನುಭವ.
ಇತ್ತೀಚಿನ ದಿನಗಳಂತೂ ಬಿಲ್ಡಪ್ ಹೀರೋಗಳೆ ಜಾಸ್ತಿ ಆಗಿರುವ ಸಂದರ್ಭದಲ್ಲಿ ಯಾವುದೇ ಗಿಮಿಕ್ ಅನ್ನು ಬಳಸದೆ ವಿಚಾರವನ್ನು ಹಾಗೂ ಕಥೆಯನ್ನು ನೇರವಾಗಿ, ಸ್ಪಷ್ಟವಾಗಿ ಪ್ರೇಕ್ಷಕರಿಗೆ ತಲುಪಿಸುವ ಒಂದು ಪ್ರಾಮಾಣಿಕ ಪ್ರಯತ್ನ. ಸಿನಿಮಾದ ಕಡೆಯವರೆಗೂ ಕುತೂಹಲವನ್ನು ಉಳಿಸಿಕೊಳ್ಳುವ ಸಿನಿಮಾಗಳು ತೀರಾ ಅಪರೂಪ ಎಂದೇ ಹೇಳಬಹುದು. ಹೆಚ್ಚಿನ ಸಿನಿಮಾಗಳು ಸಿದ್ಧಸೂತ್ರಕ್ಕೆ ಅಂಟಿಕೊಂಡಿರುವಂತಹ ಈ ಸಂದರ್ಭದಲ್ಲಿ ಪ್ರೇಕ್ಷಕನನ್ನು ಕುರ್ಚಿಯ ತುದಿಯಲ್ಲಿ ಕುಳಿತು ನೋಡುವ ಹಾಗೆ ಮಾಡಿರುವ ಒಂದು ಅಪರೂಪದ ಚಿತ್ರ ಶಾಖಹಾರಿ.


Shakhahaari Movie Review ಸಿನಿಮಾದ ಇಬ್ಬರು ಪ್ರಮುಖ ಪಾತ್ರಧಾರಿಗಳು ಈಗಾಗಲೇ ತಮ್ಮ ಪ್ರತಿಭೆಯಿಂದ ಜನಮಾನಸವನ್ನು ಗೆದ್ದವರು. ಅವರನ್ನು ಹೊರತುಪಡಿಸಿ ಸಿನಿಮಾದಲ್ಲಿ ಬರುವ ಅನೇಕ ಹೊಸ ಮುಖಗಳು ಕನ್ನಡ ಚಲನಚಿತ್ರಗಳಿಗೆ ಒಳ್ಳೆಯ ಭವಿಷ್ಯ ಇದೆ ಎಂಬ ಭರವಸೆಯನ್ನು ಮೂಡಿಸುತ್ತಾರೆ. ಸಿನಿಮಾದ ನಿರ್ದೇಶಕರು ಕೂಡ ಕಥೆಯನ್ನು ಎಲ್ಲೆಲ್ಲೋ ಅಡ್ಡ ದಿಡ್ಡಿ ಓಡಾಡಿಸುವ ಬದಲು ನೇರವಾಗಿ ಪ್ರೇಕ್ಷಕನಿಗೆ ತಲುಪುತ್ತಾರೆ. ಅನೇಕ ಸಿದ್ಧ ಮಾದರಿ ಚಲನಚಿತ್ರಗಳನ್ನು ನೋಡಿ ನೋಡಿ ಬೇಸತ್ತಿರುವ ಪ್ರೇಕ್ಷಕನಿಗೆ ಇದೊಂದು ಖಂಡಿತವಾಗಿಯೂ ಒಂದು ವಿಭಿನ್ನ ಅನುಭವ.
ಎಲ್ಲರಿಗೂ ಅಭಿನಂದನೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...