Dr. K. Sundar Gowda ಚಿಕ್ಕಮಗಳೂರು,ನಗರ ವ್ಯಾಪ್ತಿಯಲ್ಲಿ ಮೂಲಸೌಕರ್ಯದ ಕೊರತೆ ಪರಿಹರಿಸುವುದು ಹಾಗೂ ನಿವಾಸಿಗಳಿಗೆ ಆರೋಗ್ಯ ಪೂರ್ಣ ವಾತಾವರಣ ನಿರ್ಮಿಸಲು ನಗರಸಭಾ ಆಡಳಿತವು ತ್ವರಿತವಾಗಿ ಕಾರ್ಯ ಚಟುವಟಿಕೆ ರೂಪಿಸಬೇಕು ಎಂದು ಜಿಲ್ಲಾ ಆಮ್‌ಆದ್ಮಿ ಮಾಧ್ಯಮ ಪ್ರತಿನಿಧಿ ಡಾ. ಕೆ.ಸುಂದರಗೌಡ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ನಗರದ ಎಬಿಸಿ ಕಾಫಿ ಕ್ಯೂರಿಂಗ್‌ನಿoದ ರಾಂಪುರ ಮಾರ್ಗದವರೆಗೂ ಬೀದಿ ದೀಪಗಳಿಲ್ಲದ ಕಾರಣ, ನಿವಾಸಿಗಳು ರಸ್ತೆ ದಾಟುವ ವೇಳೆಯಲ್ಲಿ ವಾಹನಗ ಳನ್ನು ತಡೆವೊಡ್ಡಿ ತೆರಳುವ ಪರಿಸ್ಥಿತಿ ಪ್ರತಿದಿನವು ಎದುರಿಸಲಾಗುತ್ತಿದೆ ಎಂದಿದ್ದಾರೆ.
ಟಿಪ್ಪುನಗರ, ಶಂಕರಪುರ ಸೇರಿದಂತೆ ನಗರದ ಕೆಲವು ಭಾಗಗಳು ಕೊಳಚೆ ಪ್ರದೇಶವಾಗಿವೆ. ಹಗಲಿನಲ್ಲೇ ಸೊಳ್ಳೆಗಳ ಹಾವಳಿಯಿಂದ ಡೆಂಗ್ಯೂ, ಜ್ವರ ಯಥೆಚ್ಚವಾಗಿ ಎಲ್ಲೆಡೆ ಹರಡಿಕೊಂಡು ನಿವಾಸಿಗಳು ಕಾಯಿಲೆಗೆ ತುತ್ತಾ ಗಿದ್ದಾರೆ. ಆ ನಿಟ್ಟಿನಲ್ಲಿ ಸಂಬoಧಿಸಿದ ಅಧಿಕಾರಿಗಳು ನಗರ ಪ್ರದೇಶವನ್ನು ಸ್ವಚ್ಚವಾಗಿಡಲು ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದು ತಿಳಿಸಿದ್ದಾರೆ.
ನಗರದ ಚರಂಡಿ, ಯುಜಿಡಿ ನೀರು ಉಪ್ಪಳ್ಳಿ ಚಾನಲ್‌ನ ಮೂಲಕ ನೇರವಾಗಿ ಯಗಚಿ ಡ್ಯಾಂಗೆ ಹರಿದು ಮಲೀನಗೊಳ್ಳುತ್ತಿದೆ. ಇದರಿಂದ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ನಿರ್ಮಾಣವಾ ಗಿದೆ ಎಂದ ಅವರು ಅನಾವಶ್ಯಕವಾಗಿ ನಗರದ ಜನತೆ ಆಸ್ಪತ್ರೆಗಳಿಗೆ ವೆಚ್ಚ ಭರಿಸುವಂತಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ನಗರಸಭೆಗೆ ನೂತನ ಆಯುಕ್ತರು ನೇಮಕಗೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಸುವ್ಯವಸ್ಥಿತವಾದ ಬೀದಿದೀಪ ಅಳವಡಿಸುವುದು. ಸ್ವಚ್ಚ ಮತ್ತು ಸುಂದರ ನಗರವಾಗಿಸುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ಪ್ರವೃತ್ತರಾಗಿ ಸಾರ್ವಜನಿಕರ ಸೇವೆಗೆ ಇಚ್ಚಾಶಕ್ತಿಯನ್ನು ತೋರಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡ ಬೇಕು ಎಂದು ತಿಳಿಸಿದ್ದಾರೆ.
ಬಿಸಿಲಿನ ತಾಪಮಾನದಿಂದ ನಗರದ ಕೆಲವು ವಾರ್ಡ್ಗಳಲ್ಲಿ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾ ಗಿದೆ. ಇಡೀ ನಗರದ ಕಸದ ರಾಶಿಯನ್ನು ಸುಡುತ್ತಿರುವುದರಿಂದ ತಾಪಮಾನ ಏರಿಕೆಗೊಂಡು ಹವಾಮಾನ ವೈಪರೀ ತ್ಯಕ್ಕೆ ದಾರಿ ಮಾಡುವ ಸಂಕೇತವಾಗಿದೆ. ಹೀಗಾಗಿ ಪೌರಕಾರ್ಮಿಕರಿಗೆ ಮತ್ತು ನಿವಾಸಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
Dr. K. Sundar Gowda ನಗರವನ್ನು ಸ್ವಚ್ಚ ಹಾಗೂ ಸುಭೀಕ್ಷವಾಗಿಡುವ ನಿಟ್ಟಿನಲ್ಲಿ ನಗರಸಭಾ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿ ವೃಂದದವರು ಮುತುವರ್ಜಿಸಬೇಕು. ನಮ್ಮ ರಕ್ಷಣೆ, ನಮ್ಮ ನಗರಕ್ಕೆ ಎಂಬ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ಮುಂದಿನ ಪೀಳಿಗೆಗೆ ಭೂಮಿ ಉಳಿದರೆ ನಾವು ಉಳಿದೇವು ಎಂಬ ನಾಲ್ನುಡಿಯಂತೆ ಕಾರ್ಯಚಟುವಟಿಕೆ ರೂಪಿಸ ಬೇಕು ಎಂದು ಒತ್ತಾಯಿಸಿದ್ದಾರೆ.