Lok Sabha Elections ಲೋಕಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಬಹುನಿರೀಕ್ಷಿತ ಮತ್ತು ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ, ಕೇಂದ್ರ ಸರ್ಕಾರ ಅಧಿ ಸೂಚನೆ ಹೊರಡಿಸಿದೆ.
ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31 ಮುಂಚೆ ಭಾರತಕ್ಕೆ ಆಗಮಿಸಿದ ಧಾರ್ಮಿಕ ಅಲ್ಪಸಂಖ್ಯಾತರಿಗೆ ದೇಶದ ಪೌರತ್ವ ನೀಡುವ ಈ ಕಾಯ್ದೆಯು ಸಂಸತ್ತಿನ ಅನುಮೋದನೆ ಪಡೆದ ನಾಲ್ಕು ವರ್ಷಗಳ ಬಳಿಕ ಅನುಷ್ಠಾನದ ಹಾದಿ ಹಿಡಿದಿದೆ.
2019 ರಲ್ಲಿ ಸಿಎಎ ವಿರುದ್ಧ ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿತ್ತು. ಕಾಯ್ದೆಯ ಮೂಲಕ ಮುಸ್ಲಿಮರು ಪೌರತ್ವ ಕಸಿದುಕೊಳ್ಳಲಾಗುತ್ತದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಕಾಯ್ದೆ ವಿರೋಧಿಸಿ ಬೃಹತ್ ಹೋರಾಟದಲ್ಲಿ ಅನೇಕ ಮಂದಿಗಳು ಪ್ರಾಣವನ್ನು ಕಳೆದುಕೊಂಡಿದ್ದರು.
ಸಿ ಎ ಎ ಅಂದ್ರೆ, ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗಿ 2014 ಮುಂಚೆ ಭಾರತಕ್ಕೆ ಆಗಮಿಸಿದ್ದ ಹಿಂದೂ, ಕ್ರೈಸ್ತ, ಜೈನ, ಬೌದ್ಧ ನಿರಾಶ್ರಿತರರಿಗೇ ಪೌರತ್ವ ನೀಡಲು ಈ ಕಾಯ್ದೆ ಅವಕಾಶ ಕಲ್ಪಿಸುತ್ತದೆ.
Lok Sabha Elections ಈಗಾಗಲೇ ಹಲವು ರಾಜ್ಯಗಳು ಸಿಎಎ ವಿರೋಧಿಸಿವೆ. ಸಿ ಎ ಎ ಅಧಿಸೂಚನೆಯನ್ನು ರಾಜಕೀಯ ದೃವೀಕರಣದ ನಡೆ ಎಂದಿರುವ ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳು, ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಈ ಕಾಯ್ದೆಯನ್ನು ವಿರೋಧಿಸಿ ಅನೇಕ ಕಡೆಗಳಲ್ಲಿ ಪ್ರತಿಭಟನೆ ಕೂಡ ನಡೆದಿದೆ.