Tuesday, October 1, 2024
Tuesday, October 1, 2024

Department of fisheries Karnataka ಮತ್ಸ್ಯವಾಹಿನಿ ತ್ರಿಚಕ್ರ ವಾಹನ ಪರವಾನಗಿ ಆಧಾರದಲ್ಲಿ ಪಡೆಯಲು ಮೀನುಮಾರಾಟಗಾರರಿಂದ ಅರ್ಜಿ ಆಹ್ವಾನ

Date:

Department of fisheries Karnataka ಮೀನುಗಾರಿಕೆ ಇಲಾಖೆ ಶಿವಮೊಗ್ಗ ವತಿಯಿಂದ ಸ್ಥಳೀಯವಾಗಿ ಮೀನು ಮಾರಾಟ ಸೇವೆಯನ್ನು ಪ್ರೋತ್ಸಾಹಿಸಲು ಹಾಗೂ ತಾಜಾ ಮೀನು ಮತ್ತು ಮೀನು ಉತ್ಪನ್ನಗಳ ಮಾರಾಟಕ್ಕಾಗಿ ಕೇಂದ್ರ ಪುರಸ್ಕoತ ‘ಮತ್ಸ್ಯವಾಹಿನಿ” ಯೋಜನೆಯಡಿ ತ್ರಿಚಕ್ರ ವಾಹನಗಳನ್ನು ಪರವಾನಿಗೆ ಆಧಾರದಲ್ಲಿ ಪಡೆಯಲು ಆಸಕ್ತ ಮೀನು ಮಾರಾಟಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು 30-03-2024 ಕಡೆಯ ದಿನ ಆಗಿದ್ದು, ಶಿವಮೊಗ್ಗ ಜಿಲ್ಲೆಗೆ ಒಟ್ಟು 03 ಭೌತಿಕ ಗುರಿ ಇರುತ್ತದೆ. ವೈಯಕ್ತಿಕ ಪರವಾನಿಗೆದಾರರನ್ನು ಆಯ್ಕೆ ಮಾಡುವಾಗ ಪ.ಜಾ/ಪ.ಪಂಗಡ -01, ಮಹಿಳೆ-01 ಮತ್ತು ಸಾಮಾನ್ಯ-0 ಮೀಸಲಾತಿ ನಿಗದಿಪಡಿಸಲಾಗಿದೆ.

ಈಗಾಗಲೇ ನಿಗಮದ ಫ್ರಾಂಚೈಸಿಗಳು ಈ ಯೋಜನೆಯಡಿ ಅವರ ಮೀನು ಮಾರಾಟ ಜಾಲವನ್ನು ವಿಸ್ತರಿಸಲು ಬಯಸಿದಲ್ಲಿ ಅವರಿಗೆ ಆದ್ಯತೆ ನೀಡಲಾಗುವುದು. ಸರ್ಕಾರದ ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿ ಪಡೆದವರು, ಮೀನುಗಾರಿಕೆ ಇಲಾಖೆಯಿಂದ ಅನುಮೋದಿತ ಮೀನುಗಾರರ ಉತ್ಪಾದಕ ಸಂಸ್ಥೆಗಳು ಮೀನು ಮಾರಾಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮೀನುಗಾರಿಕೆ ಸಹಕಾರ ಸಂಘಗಳು/ಒಕ್ಕೂಟಗಳು, ಮಹಿಳಾ ಸ್ವಸಹಾಯ ಗುಂಪುಗಳು, ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತರಿರುವ ನಿರುದ್ಯೋಗಿ ಯುವಕ/ಯುವತಿಯರು/ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಫಲಾನುಭವಿಗಳನ್ನು ಆದ್ಯತೆಗನುಸಾಋ ಪರಿಗಣಿಸಲಾಗುವುದು.

ಆಯ್ಕೆಯಾಗುವ ಅರ್ಜಿದಾರರು ಇಲಾಖೆಗೆ ಭದ್ರತಾ ಠೇವಣಿ ಮೊತ್ತ ರೂ. 1.00 ಲಕ್ಷ, ಸಾಮಾನ್ಯ ವರ್ಗದವರು ಮತ್ತು ಪ.ಜಾತಿ/ಪ.ಪಂಗಡ/ಮಹಿಳೆ ರೂ. 0.50 ಲಕ್ಷವನ್ನು ನೀಡಬೇಕಿರುತ್ತದೆ. ಹಾಗೂ ಮಾಸಿಕ ರೂ. 3,000/- ಬಾಡಿಗೆ ಮೊತ್ತವನ್ನು ಪಾವತಿಸಬೇಕಿರುತ್ತದೆ.

Department of fisheries Karnataka ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ, ಸೊರಬ ಮತ್ತು ತೀರ್ಥಹಳ್ಳಿ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shakahari Film ಶಾಖಾಹಾರಿ ಚಿತ್ರಕ್ಕೆ ಕಾನೂನು ಜಯ

Shakahari Film ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ಶಾಖಾಹಾರಿ...

Mahatma Gandhi ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ, ಫಲಿತಾಂಶ ಪ್ರಕಟ

Mahatma Gandhi ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ...

Yaduveer Wadiyar ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ- ಸಂಸದ ಯದುವೀರ್

Yaduveer Wadiyar ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಉದ್ಯಮಿಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ...

Shivamogga Cycle Club ಸೈಕಲ್ ಅಭ್ಯಾಸವು ಜನಸಾಮಾನ್ಯರ ವ್ಯಾಯಾಮಶಾಲೆ- ಎನ್.ಗೋಪಿನಾಥ್

Shivamogga Cycle Club ಸೈಕಲ್ ಅಭ್ಯಾಸ ಮಾಡುವುದರಿಂದ ಹೃದಯ ಸಂಬಂಧಿ...