Monday, November 25, 2024
Monday, November 25, 2024

SN Channabasappa ತೆರಿಗೆ ಕಟ್ಟಿದ ನಾಗರಿಕರಿಗೆ ಮೂಲಭೂತ ಸೌಕರ್ಯ ನೀಡಬೇಕು- ಶಾಸಕ ಎಸ್.ಎನ್.ಚನ್ನಬಸಪ್ಪ

Date:

SN Channabasappa ಶಿವಮೊಗ್ಗ ಮಹಾನಗರಪಾಲಿಕೆ 5 ನೇ ವಾರ್ಡ್ ಗೆ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಭೇಟಿ ನೀಡಿದ್ದರು.
ಹೊಸದಾಗಿ ಮನೆಗಳು ನಿರ್ಮಾಣವಾಗಿರುವ ಬಡಾವಣೆಗಳ ನಾಗರೀಕರ ಕುಂದುಕೊರತೆಗಳನ್ನ ಆಲಿಸಿದರು.
ಮಲ್ಲಿಗೆ ನಗರ ಸಂಯುಕ್ತ ನಾಗರಿಕರ ವೇದಿಕೆಯ ಎಲ್ಲ ಪ್ರಮುಖರೂ ಜನಸ್ನೇಹೀ ಶಾಸಕರಬಳಿ ಸಮಸ್ಯೆಗಳ ಬಗ್ಗೆ ಮುಖತಃ ನಿವೇದಿಸಿದರು.
ಕುಡಿಯುವ ನೀರಿನ ಸಂಪರ್ಕವನ್ನ ಈಗ್ಯೆ ಒಂದು ವರ್ಷವಾದರೂ ನೀಡಿಲ್ಲ. ಜಲಜೀವನ್ ಮಿಷನ್ ಯೋಜನೆಯಲ್ಲಿ
ಕೇವಲ ಪೈಪ್ ಲೈನ್ ಗಳನ್ನ ಮಾತ್ರ ಎಳೆದಿದ್ದಾರೆ. ಒಂದು ವರ್ಷದ ಮೇಲೆ ಎರಡು ತಿಂಗಳಾದರೂ ನೀರು ಬಂದಿಲ್ಲ. ಸ್ವಂತ ಕೊಳವೆಬಾವಿಗಳು ಬತ್ತುತ್ತಿವೆ. ಈ ಗoಭೀರ ಪರಿಸ್ಥಿತಿ ಬಗ್ಗೆ ತಕ್ಷಣ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಹಾಜರಿದ್ದ ಕಾರ್ಯಪಾಲಕ ಇಂಜಿನಿಯರ್ ಸಿದ್ದಪ್ಪ ನವರು ಇನ್ನೊಂದು ತಿಂಗಳೊಳಗೆ ಕುಡಿಯುವ ನೀರಿನ ಸಂಪರ್ಕ ನೀಡಲು ಕ್ರಮ ಕೈಗೊಳ್ಳುವುದಾಗಿ ಇಲ್ಲಿಯವರೆಗೆ ನಡೆದ ಕ್ರಮಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಲೇಔಟ್ ಗಳಲ್ಲಿ ಕನಿಷ್ಠ ಸಂಖ್ಯೆಯ ಮನೆಗಳ ನಿರ್ಮಾಣವಾಗದೇ ಇದ್ದರೆ ಮೂಲಭೂತ ಸೌಕರ್ಯ ನೀಡಲು ಕಾನೂನು ಅಡ್ಡಿಯಿದೆ ಎಂದು ತಿಳಿಸಿದ ಅಧಿಕಾರಿಗಳ ಮಾತಿಗೆ
ಶಾಸಕರು” ತೆರಿಗೆ ಕಟ್ಟಿದ ಮೇಲೆ ಮೂಲಭೂತ ಸೌಕರ್ಯ ಕೊಡಬೇಕಾದದ್ದು ಕರ್ತವ್ಯ ,ಈ ಬಗ್ಗೆ ಕಮೀಷನರ್ ಬಳಿ ಮಾತಾಡಿದ್ದೇವೆ ಎಂದು ಹೇಳಿದರು.

ವಿದ್ಯುದ್ದೀಪಗಳಿಲ್ಲದೇ ಸಂಜೆಯಾಗುತ್ತಲೇ ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತದೆ. ಸರಗಳ್ಳರು, ಮೊಬೈಲ್ ದರೋಡೆ
ಹಾಗೂ ರಸ್ತೆ ಬದಿ ಕುಳಿತು ಮದ್ಯಸೇವಿಸುವವರ
ಹಾವಳಿ,ಅವರು ಬಿಸಾಕುವ ಬಾಟಲಿಗಳು,ಒಡೆದ ಗಾಜಿನ ಚೂರುಗಳು
ಹೀಗೆ ಅದೊಂದು ಮಹಿಳೆಯರು,ಮಕ್ಕಳಿಗೆ ಆತಂಕ,ಅಪಾಯಗಳ ಸನ್ನಿವೇಶ ನಿರ್ಮಾಣವಾಗಿವೆ ಎಂದು ಮಹಿಳೆಯರು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.

ಮನೆಗಳ ಕಿಟಕಿ ಸರಳು ಕತ್ತರಿಸಿ ಮನೆಯಲ್ಲಿ ಒಡವೆ,ವಸ್ತುಗಳು ಕಳ್ಳತನವಾಗಿವೆ.

SN Channabasappa ಗೌಳಿಗರ ಬಡಾವಣೆ ಬಳಿ ಎಮ್ ಸ್ಯಾಂಡ್ ತಯಾರಿಯಿಂದ ಬರುವ ಧೂಳು ಹತ್ತಿರದ ಮನೆಗಳಿಗೆ ನುಗ್ಗಿ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತಿವೆ.
ಕೃಷಿ ಲೇಔಟ್ ಸುತ್ತಮುತ್ತ ಸಮರ್ಪಕವಾಗಿ ವಿದ್ಯುತ್ ಸಂಪರ್ಕವಿಲ್ಲ. ಜಯಕಮಲ್ ಎನ್ ಕ್ಲೇವ್ ನಲ್ಲಿ ಮಾಲೀಕರು ಸರ್ಕಾರದವರು ಜಲಜೀವನ್ ಯೋಜನೆಯಲ್ಲಿ ನೀರು‌ಕೊಡುತ್ತಾರೆ ಎಂದು ಲೇ ಔಟಿನಲ್ಲಿನ ಕುಡಿಯುವ ನೀರಿನ ಸಂಪರ್ಕವನ್ನು ಧ್ವಂಸ ಮಾಡಿದ್ದಾರೆ. ಕೃಷಿ ಲೇಔಟಿನಲ್ಲಿ ತಿರುವುಗಳ ರಸ್ತೆಗಳು ಉತ್ತಮಸ್ಥಿತಿಯಲ್ಲಿಲ್ಲ. ಹೀಗಾಗಿ ಇಲ್ಲಿನ ಎಲ್ಲಾ ಲೇಔಟ್ ಮಾಲೀಕರು
ನಿವಾಸಿಗಳಿಗೆ ಸ್ಪಂದಿಸುತ್ತಿಲ್ಲ ಎಂದು
ನಿವಾಸಿಗಳು ತಮ್ಮ ಅಹವಾಲು ಹೇಳಿಕೊಂಡರು.

ಬೀದಿದೀಪಗಳ ಬಗ್ಗೆ ಮಹಾನಗರಪಾಲಿಕೆಯ ಜೆಇ ಗಣೇಶ್ ಅವರು ಶಾಸಕರು ನೀಡಿದ ಸೂಚನೆಗಳನ್ನ ಗುರುತು ಮಾಡಿಕೊಂಡರು‌.
ವ್ಯಾಪಕವಾಗಿ ಬೆಳಕು ನೀಡುವ ಎಲ್ ಇಡಿ ಬಲ್ಬ್ ಗಳನ್ನ ಜೋಡಿಸಲು ಶಾಸಕರು ಒತ್ತಿ ಹೇಳಿದರು.

ಪೈಪ್ ಲೈನ್ ಎಳೆಯುವಲ್ಲಿ, ಚರಂಡಿ ನಿರ್ಮಿಸುವಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆಯೂ ಶಾಸಕರು ಅಧಿಕಾರಿಗಳಿಗೆ ನಿವಾಸಿಗಳ ಹಿತ ರಕ್ಷಿಸಲು ಕಿವಿಮಾತು ಹೇಳಿದರು.

ಎಲ್ಲರೂ ಕೂಡ ತಮಗೆ ಎದುರಾಗುವ ದೈನಿಕ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.

ನಾಗರಿಕರ ಅಹವಾಲು ಆಲಿಸಲು ಆಗಮಿಸಿದ ಜನಸ್ನೇಹಿ ಶಾಸಕ “ಚೆನ್ನಿ” ಅವರು ಸಾರ್ವಜನಿಕರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿದರು. ಮೊದಲಲ್ಲಿ ಶಾಸಕರಿಗೆ ಮಲ್ಲಿಗೆ ನಗರ ಸಂಯುಕ್ತ ವೇದಿಕೆಯಿಂದ ಪುಷ್ಪಮಾಲೆ,ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು.
ಪ್ರಮುಖರಾದ ಶ್ರೀಧರ್ ಮಾಸ್ಟರ್, ದೇವರಾಜ್, ಪ್ರಶಾಂತ್ ಅವರು ಇಡೀ ಚಟುವಟಿಕೆಯ ಹಿನ್ನೆಲೆಯಲ್ಲಿ ಶ್ರಮಿಸಿದ ಬಗ್ಗೆ ವಂದನೆ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಕೆ ಲೈವ್ ಪ್ರಧಾನ ಸಂಪಾದಕ ಡಾ.ಸುಧೀಂದ್ರ, ಮೆಸ್ಕಾಂ ನಿವೃತ್ತ ಜೆಇ ಶ್ರೀಧರರಾವ್ ನಾಡಿಗ್. ದಂತವೈದ್ಯ ಡಾ.ಶಿವಾಜಿರಾವ್, ಸಿದ್ಧೇಶ್ವರ ಲೇಔಟ್ ಮಾಲೀಕ ಸತೀಷ್, ಪೊಲೀಸ್ ಸಿಬ್ಬಂದಿ ಸತೀಷ್, ಸಮಾಜ ಸೇವಕಿ ಶ್ರೀಮತಿ ಮಮತಾ ಹೆಗ್ಡೆ, ಜ್ಯೋತಿ ಶ್ರೀಧರರಾವ್,
ಕಲಾ ಶಾಂತಿ ಕುಮಾರ್, ಮಮತಾ ಶಿವಾಜಿರಾವ್,ಮಲ್ಲಿಕಾ ಭಟ್ ಮುಂತಾದವರು ಹಾಜರಿದ್ದು ಅಹವಾಲುಗಳನ್ನ ನಿವೇದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...