Indian National Congress ವ್ಯಾಪಾರ, ಶಿಕ್ಷಣ ಸೇರಿದಂತೆ ನಾನಾ ಕಾರಣಕ್ಕೆ ಹೊರ ದೇಶಗಳಿಗೆ ತೆರಳುವ ಮತ್ತು ಅಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ಅನಿವಾಸಿ ಕನ್ನಡಿಗರ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಲು ಮುಂದಾಗಿದೆ ಎಂದು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದರು.
Indian National Congress ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರೋದ್ಯಮ ಸೇರಿದಂತೆ ನಾನಾ ಕಾರಣಕ್ಕೆ ಇವತ್ತು ಸಾಕಷ್ಟು ಮಂದಿ ಕನ್ನಡಿಗರು ಹೊರ ದೇಶಗಳಿಗೆ ಹೋಗುತ್ತಿದ್ದಾರೆ. ವಿಶೇಷವಾಗಿ ಹಕ್ಕಿಪಕ್ಕಿ ಜನಾಂಗದವರು ಕೂಡ ಕಾಂಬೋಡಿಯಾ, ವಿಯೆಟ್ನಾಂ ದೇಶಗಳಿಗೆ ಹೋಗಿ , ಅಲ್ಲಿ ತಮ್ಮ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಸಾಕಷ್ಟು ಜನರು ನಕಲಿ ಏಜೆನ್ಸಿ ಮೂಲಕ ಅಲ್ಲಿಗೆ ಹೋಗಿ ತೊಂದರೆ ಅನುಭವಿಸುವಂತಹ ಘಟನೆಗಳು ಕೂಡ ನಡೆದಿವೆ. ಹಾಗಾಗಿ ಯಾರೇ ಹೊರ ದೇಶಗಳಿಗೆ ಹೋಗುವುದಾದರೆ ಅವರ ವಿವರ ಸರ್ಕಾರದ ಬಳಿಯೂ ಇರಲಿ ಎನ್ನುವ ಕಾರಣಕ್ಕೆ ಒಂದು ಪ್ರತ್ಯೇಕ ಸಚಿವಾಲಯ ಇರಲಿ ಎನ್ನುವುದು ನಮ್ಮ ಬಯಕೆ ಎಂದು ಆರತಿ ಕೃಷ್ಣ ಹೇಳಿದರು.
ಕೇರಳ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಅನಿವಾಸಿ ಗಳ ಭದ್ರತೆ ದೃಷ್ಟಿಯಿಂದ ಪ್ರತ್ಯೇಕ ಸಚಿವಾಲಗಳನ್ನು ಆರಂಭಿಸಿವೆ. ಆಯಾ ರಾಜ್ಯಗಳ ಜನರು ಯಾವುದೇ ಉದ್ದೇಶಕ್ಕಾದರೂ ಹೊರ ದೇಶಗಳಿಗೆ ಹೊರಟರೆ, ಸಚಿವಾಲಯಕ್ಕೆ ಅವರ ಮಾಹಿತಿ ನೀಡಬೇಕು. ಅಂತಹದ್ದೇ ವ್ಯವಸ್ಥೆ ರಾಜ್ಯದಲ್ಲೂ ಶುರುವಾದರೆ, ಯಾರು ಎಲ್ಲಿಗೆ ಹೋದರೂ ಸಂಪೂರ್ಣ ಮಾಹಿತಿ ಸರ್ಕಾರದ ಮಟ್ಟದಲ್ಲಿಯೇ ಲಭ್ಯವಾಗಿರುತ್ತದೆ. ಅದರಿಂದ ಯಾರೇ ಹೊರದೇಶಕ್ಕೆ ಹೋಗಿ, ಇನ್ನಾವುದದೋ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದಾಗ ಅವರ ನೆರವಿಗೆ ತತಕ್ಷಣವೇ ಸ್ಪಂದನೆ ಮಾಡಲಾಗುವುದು ಎಂದರು.