Tuesday, October 1, 2024
Tuesday, October 1, 2024

International Women’s Day ಇಂದಿನ ಅಗತ್ಯ:ಮಹಿಳಾ ಸಾಮರ್ಥ್ಯದ ಮೇಲೆ ಭರವಸೆ

Date:

ಲೇ: ಎನ್.ಎನ್.ಕಬ್ಬೂರ್.
ಸವದತ್ತಿ. ಬೆಳಗಾಂ

ಮಹಿಳೆ ಎಂದರೆ ಒಬ್ಬ “ಅವಿನಾಶಿ” ಮತ್ತು “ವಿಶಿಷ್ಟ ಶಕ್ತಿಯ ಸಂಗಮ”

International Women’s Day ಇಂದು (ಮಾರ್ಚ್ -8) ಜಗತ್ತಿನಾದ್ಯಂತ “ಅಂತರರಾಷ್ಟ್ರೀಯ ಮಹಿಳಾ ದಿನ”ವನ್ನಾಗಿ ಆಚರಣೆ ಮಾಡಲಾಗುತ್ತದೆ. ಮಹಿಳೆ ಎಂದರೆ ಒಬ್ಬ “ಅವಿನಾಶಿ”, ಆಕೆ ಒಬ್ಬ “ಸಂಜೀವಿನಿ”, ಅವಳು ಒಬ್ಬ “ವಿಶಿಷ್ಟ ಶಕ್ತಿಯ ಸಂಗಮ” ಎಂದರೆ ತಪ್ಪಾಗಲಾರದು. ಪ್ರಪಂಚದಾದ್ಯಂತ “ಅಂತರರಾಷ್ಟ್ರೀಯ ಮಹಿಳಾ ದಿನ” ಒಂದು ವಿಶೇಷ ದಿನವಾಗಿದ್ದು, ಜಾಗತಿಕವಾಗಿ ಆಚರಿಸುವ ದಿನವಾಗಿದೆ, ಮಹಿಳೆ “ಒಂದು ಕುಟುಂಬದ ಆಧಾರ ಸ್ತಂಭವಾಗಿ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ವಿಜ್ಞಾನ, ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ” ಯನ್ನು ನೆನೆಯುವ ದಿನವಾಗಿದೆ.

● ಮಹಿಳೆಯರ ದಿನಾಚರಣೆಯನ್ನು ಕಳೆದ 100 ವರ್ಷಗಳಿಂದಲೂ ಆಚರಿಸಲಾಗುತ್ತಿದ್ದು, 1911 ರಲ್ಲಿ ಡೆನ್ಮಾರ್ಕ್‌, ಆಸ್ಟ್ರೀಯ, ಜಮರ್ನಿ, ಸ್ವಜರ್‌ಲ್ಯಾಂಡ್ ದೇಶಗಳಲ್ಲಿ ದಶಲಕ್ಷಗಟ್ಟಲೇ ಜನರು ಒಂದು ಕಡೆ ಸೇರುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಿದರು. ಅಂತರಾಷ್ಟ್ರೀಯ ಮಹಿಳೆಯರ ದಿನ’ವನ್ನು ಮೊದಲ ಬಾರಿಗೆ ಕೂಲಿ ಚಳುವಳಿಯ ಮೂಲಕ ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಹೊರಹೊಮ್ಮಿತು. ಮಹಿಳಾ ದಿನಾಚರಣೆ ಮೂಲಕ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಹೇಳಲು ಈ ದಿನ ಒಂದು ದೊಡ್ಡ ವೇದಿಕೆ ಆಗಿರುತ್ತದೆ. ಅಲ್ಲದೇ ದೇಶಕ್ಕೆ, ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ನೆನೆದು ಸಾರುವ ದಿನವಿದು.

● 1975 ರ ಮಾರ್ಚ್ 8 ರ “ಅಂತರರಾಷ್ಟ್ರೀಯ ಮಹಿಳಾ ದಿನ”ವನ್ನು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನಾಗಿ ಆಚರಿಸಲು ಆರಂಭಿಸಿದವು. ವಿಶ್ವಸಂಸ್ಥೆಯು 1975 ರಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿತು, ಇದನ್ನು ಅಂತರರಾಷ್ಟ್ರೀಯ ಮಹಿಳಾ ವರ್ಷವೆಂದು ಘೋಷಿಸಲಾಯಿತು. 1977 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಮಾರ್ಚ್ 8 ಅನ್ನು ಮಹಿಳಾ ಹಕ್ಕುಗಳು ಮತ್ತು ವಿಶ್ವ ಶಾಂತಿಗಾಗಿ ಅಧಿಕೃತ ಯುಎನ್ ರಜಾದಿನವೆಂದು ಘೋಷಿಸಲು ಸದಸ್ಯ ರಾಷ್ಟ್ರಗಳನ್ನು ಆಹ್ವಾನಿಸಿತು. ಅಂದಿನಿಂದ ಇದನ್ನು ಯುಎನ್ ಮತ್ತು ಪ್ರಪಂಚದ ಹೆಚ್ಚಿನ ಭಾಗಗಳಿಂದ ವಾರ್ಷಿಕವಾಗಿ ಸ್ಮರಿಸಲಾಗುತ್ತದೆ, ಪ್ರತಿ ವರ್ಷದ ಆಚರಣೆಯು ಮಹಿಳಾ ಹಕ್ಕುಗಳೊಳಗಿನ ನಿರ್ದಿಷ್ಟ ವಿಷಯ ಅಥವಾ ಸಮಸ್ಯೆಯ ಮೇಲೆ ಕೇಂದ್ರೀಕೃತವಾಗಿದೆ.

● ಥೀಮ್:- ಪ್ರತಿ ವರ್ಷ ಒಂದೊಂದು ಥೀಮ್ (ವಿಷಯ) ದೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಅದರ ಸುತ್ತ ಎಲ್ಲಾ ಆಚರಣೆಗಳನ್ನು ಯೋಜಿಸಲಾಗುತ್ತದೆ. 2023 ರಲ್ಲಿ “DigitALL:ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ” ಎಂದ ಥೀಮ್ ನೊಂದಿಗೆ ಆಚರಣೆ ಮಾಡಿದರೆ, 2024 ರಲ್ಲಿ “ಮಹಿಳೆಯರಲ್ಲಿ ಹೂಡಿಕೆ: ಪ್ರಗತಿಯನ್ನು ವೇಗಗೊಳಿಸಿ” ಎಂಬ ಥೀಮ್ ನೊಂದಿಗೆ ಆಚರಣೆ ಮಾಡಲಾಗುತ್ತಿದೆ. ಅದೇ ರೀತಿಯಾಗಿ ಮಹಿಳಾ ದಿನದ ಬಣ್ಣದ ಥೀಮ್ ನೇರಳೆ, ಹಸಿರು ಮತ್ತು ಬಿಳಿ, ಇದು ನ್ಯಾಯ, ಭರವಸೆ, ಶುದ್ಧತೆ ಮತ್ತು ಘನತೆಯನ್ನು ಸೂಚಿಸುತ್ತದೆ.
●ನಮಗೆ ತಿಳಿದಿರಬೇಕಾದ ಮಾಹಿತಿ:-
○ 1984 ರಲ್ಲಿ ಆಸ್ಟ್ರೇಲಿಯಾವು ವಿಶ್ವದ ಮೊದಲ ಮಹಿಳಾ ಬಜೆಟ್ ಹೇಳಿಕೆಯನ್ನು ಪರಿಚಯಿಸಿತು, ಇದು ಇತರ ಅನೇಕರಿಗೆ ಅನುಸರಿಸಲು ದಾರಿ ಮಾಡಿಕೊಟ್ಟಿತು.
○ ಕ್ಯೂಬಾ, ವಿಯೆಟ್ನಾಂ, ಅಫ್ಘಾನಿಸ್ತಾನ, ಕಾಂಬೋಡಿಯಾ, ಲಾವೋಸ್, ಮತ್ತು ರಶಿಯಾ ಮುಂತಾದ ಪ್ರಪಂಚದ ಅನೇಕ ಭಾಗಗಳಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವು ಅಧಿಕೃತ ರಜಾದಿನವಾಗಿದೆ.
○ ಮಹಿಳಾ ದಿನವನ್ನು ಮಹಿಳಾ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ಶಾಂತಿಗಾಗಿ ವಿಶ್ವಸಂಸ್ಥೆಯ ದಿನ ಎಂದೂ ಕರೆಯಲಾಗುತ್ತದೆ.
○ ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನವನ್ನು 1911 ರಲ್ಲಿ ಮಾರ್ಚ್ 19 ರಂದು ಆಚರಿಸಲಾಯಿತು. ನಂತರ ದಿನಾಂಕವನ್ನು 1913 ರಲ್ಲಿ ಮಾರ್ಚ್ 8 ಕ್ಕೆ ಬದಲಾಯಿಸಲಾಯಿತು.
○ ಅಂತರಾಷ್ಟ್ರೀಯ ಮಹಿಳಾ ದಿನದ ಲಾಂಛನವು ಸ್ತ್ರೀಲಿಂಗ ಚಿಹ್ನೆಯನ್ನು ಹೊಂದಿದೆ.
○ 2011 ರಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಯುನೈಟೆಡ್ ಸ್ಟೇಟ್ಸ್ನಲ್ಲಿ ಮಾರ್ಚ್ ತಿಂಗಳನ್ನು ಮಹಿಳಾ ಇತಿಹಾಸದ ತಿಂಗಳು ಎಂದು ಘೋಷಿಸಿದರು.
○ 1971 ರಲ್ಲಿ ಮಾರ್ಚ್ 8 ರಂದು ಮೊದಲ ವಿಶ್ವ ಸಮರದ ಸಮಯದಲ್ಲಿ ರಷ್ಯಾದ ಮಹಿಳೆಯರು ಬ್ರೆಡ್ ಮತ್ತು ಶಾಂತಿಗಾಗಿ ಮುಷ್ಕರ ನಡೆಸಿದರು. ಇದಲ್ಲದೆ, ತಾತ್ಕಾಲಿಕ ಸರ್ಕಾರವು ಮಹಿಳಾ ದಿನದ ಸಂದರ್ಭದಲ್ಲಿ ರಷ್ಯಾದ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿತು.
○ ಪ್ರಪಂಚದ ಕೆಲವು ಭಾಗಗಳಲ್ಲಿ, ತಾಯಂದಿರ ದಿನದ ಜೊತೆಗೆ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.
○ ಸೆರ್ಬಿಯಾ, ಅಲ್ಬೇನಿಯಾ, ಉಜ್ಬೇಕಿಸ್ತಾನ್, ಮ್ಯಾಸಿಡೋನಿಯಾದಂತಹ ದೇಶಗಳಲ್ಲಿ ಎರಡು ರಜಾದಿನಗಳನ್ನು ಸಂಯೋಜಿಸಲಾಗಿದೆ.

● ಮಹಿಳೆಯರಿಗೆ ಗೌರವ ಸಲ್ಲಿಸೋಣ:- ತಾಯಿಯಾಗಿ, ನಾನು ಹುಟ್ಟುವ ಮುಂಚೆ ಒಂಭತ್ತು ತಿಂಗಳು ಹೊತ್ತು, ನಾನು ಹುಟ್ಟಿದ ನಂತರ ನನ್ನ ಕೈ ಹಿಡಿದು ನಡೆಸುತ್ತಾಳೆ. ಅಕ್ಕನಾಗಿ, ನಾನು ಮಗುವಾಗಿದ್ದಾಗ ನನ್ನ ಜೊತೆ ಆಟವಾಡುತ್ತಾ ನನ್ನ ಜೋಪಾನ ಮಾಡುತ್ತಾಳೆ. ಗೆಳತಿಯಾಗಿ ಸಹಪಾಠಿಯಾಗಿ ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾಳೆ. ಶಿಕ್ಷಕಿಯಾಗಿ ಶಾಲೆಯಲ್ಲಿ ಪಾಠ ಹೇಳಿ, ನನ್ನ ತಪ್ಪು ತಿದ್ದಿ, ಸರಿಯಾದ ಮಾರ್ಗ ತೋರಿಸುತ್ತಾಳೆ. ಹೆಂಡತಿಯಾಗಿ ನನಗೆ ಸಹಾಯ ಮಾಡುತ್ತಾ, ನನ್ನ ಬೇಕು ಬೇಡಗಳನ್ನು ಪೂರೈಸಿ, ಪ್ರೀತಿ ಮಾಡುತ್ತಾಳೆ. ಮಗಳಾಗಿ, ನನಗೆ ಕಷ್ಟವೆಂದಾಗ ಕಣ್ಣೀರು ಹಾಕುತ್ತಾಳೆ. ಭೂಮಿ ತಾಯಿಯಾಗಿ, ನಾನು ಸತ್ತಾಗ ಮಲಗಲು ಜಾಗ ನೀಡುತ್ತಾಳೆ. ಈ ಭೂಮಿಯ ಮೇಲೆ ಮಹಿಳೆಗೆ ಒಂದು ವಿಶೇಷ ಸ್ಥಾನವಿದೆ. ಕಾರಣವಿಷ್ಟೆ ಅವಳು ಸೃಷ್ಟಿಯ ಅದ್ಭುತ ರೂಪ, ಭಾವನೆಗಳ ಒಡತಿ, ಸಾಧನೆಗೆ ಸ್ಪೂರ್ತಿ, ತಾಳ್ಮೆಯ ಮೂರ್ತಿ, ಪ್ರೀತಿಯ ಅರ್ಥ ಹಾಗೂ ಕರುಣೆಯ ಕಡಲು. ಆದ್ದರಿಂದ ನೀವು ಪುರುಷರಾಗಿದ್ದಲ್ಲಿ ಹೆಣ್ಣನ್ನು ಗೌರವಿಸಿ, ನೀವು ಮಹಿಳೆಯಾಗಿದ್ದಲ್ಲಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಿ. ಮತ್ತೊಮ್ಮೆ ಎಲ್ಲ ಮಹಿಳೆಯರಿಗೂ “ಅಂತರರಾಷ್ಟ್ರೀಯ ಮಹಿಳಾ ದಿನ”ದ ಶುಭಾಶಯಗಳು.

ಎನ್.ಎನ್.ಕಬ್ಬೂರ
ಶಿಕ್ಷಕರು ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...