Thursday, March 19, 2026
Thursday, March 19, 2026

MLA Nayana Motamma ಶಾಸಕಿ ನಯನ ಮೋಟಮ್ಮನವರ ಪ್ರಯತ್ನದಿಂದ ಅಂಬಳೆಯಲ್ಲಿ ಪಶುಚಿಕಿತ್ಸಾಲಯ ಆರಂಭ

Date:

MLA Nayana Motamma ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಬಳೆ ಗ್ರಾಮದಲ್ಲಿ ನೂತನವಾಗಿ ಪಶು ಚಿಕಿತ್ಸಾಲಯ ಆರಂಭಗೊಳ್ಳುತ್ತಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪ್ರೇಮಾ ಕೆ.ವಿ.ಮಂಜುನಾಥ್ ಹೇಳಿದ್ದಾರೆ.

ಈ ಕುರಿತು ತಿಳಿಸಿರುವ ಅವರು ಗ್ರಾಮಗಳ ಹಸು, ಎಮ್ಮೆ, ಹೋರಿ ಸೇರಿದಂತೆ ಇನ್ನಿ ತರೆ ಜಾನುವಾರುಗಳಿಗೆ ಚಿಕಿತ್ಸಾಲಯ ಸ್ಥಾಪಿಸುವ ಬಗ್ಗೆ ಹಲವಾರು ವರ್ಷಗಳ ಬೇಡಿಕೆಗೆ ಅನುಗುಣವಾಗಿ ಶಾಸ ಕಿ ನಯನ ಮೋಟಮ್ಮನವರು ಸ್ಪಂದಿಸಿ ಗ್ರಾಮದಲ್ಲಿ ಫೆ.11 ರಂದು ನೂತನ ಪಶು ಚಿಕಿತ್ಸಾಲಯ ಆರಂಭಿಸಲು ಮುಂದಾಗಿರುವುದು ಸಂತಸದ ವಿಷಯ ಎಂದಿದ್ದಾರೆ.

MLA Nayana Motamma ಇತ್ತೀಚೆಗೆ ಚಿಕ್ಕಮಗಳೂರಿನ ಅಂಬಳೆ ಗ್ರಾಮದ ಸುತ್ತಮುತ್ತಲಿನ ರಾಸುಗಳಿಗೆ ಹಾಲುಜ್ವರ, ಕೆಚ್ಚಲುಬಾಯಿ ಸೇರಿದಂತೆ ರೋಗ ಲಕ್ಷಣಗಳು ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆಗೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಇದನ್ನರಿತು ಶಾಸಕರ ಗಮನಕ್ಕೆ ತಂದ ಮೇರೆಗೆ ಚಿಕಿತ್ಸಾಲಯ ಸ್ಥಾಪಿಸುತ್ತಿದ್ದು ಅಂಬಳೆ ಸೇರಿದಂತೆ ಸುತ್ತಮುತ್ತಲಿನ ರೈತರು ಅನು ಕೂಲ ವಾಗಲಿದೆ ಎಂದರು.

ಅಂಬಳೆ ಸೇರಿದಂತೆ ಸುತ್ತಮುತ್ತಲು ಸಾವಿರಾರುಗಳು ಜಾನುವಾರುಗಳಿಗೆ ಸಣ್ಣಪುಟ್ಟ ಔಷಧಿ ಪಡೆಯಲಿಕ್ಕೆ ಚಿಕಿತ್ಸಾ ಕೇಂದ್ರಗಳಿರಲಿಲ್ಲ. ಈ ಸಂಬಂಧವಾಗಿ ರೈತರಿಗೆ ಬಹಳಷ್ಟು ಸಮಸ್ಯೆಯಾಗಿತ್ತು. ಆ ನಿಟ್ಟಿನಲ್ಲಿ ಸ್ಥಳೀಯ ಗ್ರಾ. ಪಂ., ತಾ.ಪಂ. ಸದಸ್ಯರುಗಳ ಒತ್ತಾಯದ ಮೇರೆಗೆ ಶಾಸಕರು ಸ್ಪಂದಿಸುವ ಮೂಲಕ ನೂತನ ಚಿಕಿತ್ಸಾಲಯಕ್ಕೆ ಚಾಲನೆ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...