Diabetes ಡಯಾಬಿಟಿಸ್ ಅನ್ನು ವೈದ್ಯರ ಸಲಹೆಯ ಅನುಸಾರ ರೋಗಿಗಳೇ ನಿಯಂತ್ರಣ ಮಾಡಿಕೊಳ್ಳಬೇಕು. ಕೇವಲ ಮಾತ್ರೆ-ಇನ್ಸುಲಿನ್‌ಗಳು ಡಯಾಬಿಟೀಸ್ ನಿಯಂತ್ರಣದ ಒಂದು ಮಾಧ್ಯಮ ಅಷ್ಟೆ. ಆದರೆ, ಇದನ್ನು ಸಂಪೂರ್ಣ ಹತೋಟಿಗೆ ತರುವಲ್ಲಿ ರೋಗಿಯ ಮಾನಸಿಕತೆ ಬಹಳ ಮುಖ್ಯ ಎಂದು ದುರ್ಗಿಗುಡಿ ಡಯಾಬಿಟಿಸ್ ಸೆಂಟರ್ ನ ಡಾ.ಪ್ರೀತಮ್ ಹೇಳಿದರು.
ಕಮಲಾ ನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಹುಮುಖಿ ಶಿವಮೊಗ್ಗ ದ 34ನೇ ಕಾರ್ಯಕ್ರಮ ಡಯಾಬಿಟಿಸ್ ರಿವರ್ಸಲ್ ಡಯಾಬಿಟಿಸ್ ಸತ್ಯ ಮಿಥ್ಯ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಹಂತ ಹಂತವಾಗಿ ಕೇವಲ ಮಾತ್ರೆಗಳಿಂದ ಆರಂಭಗೊಳ್ಳುವ ಚಿಕಿತ್ಸಾ ಕ್ರಮ ಅಂತಿಮ ವಾಗಿ ಇನ್ಸುಲಿನ್ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗುತ್ತದೆ. ಇದರಿಂದ ಇತರೆ ಬೇರೆ ಕಾಯಿಲೆಗಳಿಗೆ ಆಸ್ಪದ ಕೊಟ್ಟಂತಾಗುತ್ತದೆ ಇಷ್ಟೆಲ್ಲಾ ಆದಾಗ್ಯೂ, ಭಾರತದಲ್ಲಿ ಡಯಾಬಿಟಿಸ್ ರೋಗಿ ಗಳ ಸಂಖ್ಯೆ ಕಡಿಮೆಯಾಗದೆ ದಿನ ದಿನಕ್ಕೂ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಾಸ್ತವವಾಗಿ ಕೈಗಾರಿಕಾಕರಣದಿಂದ ನಮ್ಮ ಜೀವನ ಶೈಲಿ, ಆಹಾರ ಕ್ರಮಗಳು ಬದಲಾದವು ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಜನರು ಪಾಲಿಷ್ ಅಕ್ಕಿ ಬಳಸಲು ಪ್ರಾರಂಭಿಸಿದ ದಿನದಿಂದ ಈ ರೀತಿಯ ಕಾಯಿಲೆಗಳಿಗೆ ಆಸ್ಪದಕೊಟ್ಟಂತಾಗಿದೆ ಎಂದ ಅವರು, ಇದಕ್ಕೆ ಔಷಧಿ ತೆಗೆದುಕೊಂಡರೆ ಶೇ. 33 ಜನರಿಗೆ ಮಾತ್ರ ನಿಯಂತ್ರಣಕ್ಕೆ ಬರುತ್ತದೆ. ಉಳಿದ 67 ಜನರಿಗೆ ಔಷದಿ ಕೆಲಸ ಮಾಡುವುದಿಲ್ಲ ಎಂದರು.
ಆಹಾರ ಕ್ರಮ, ಅಽಕ ಒತ್ತಡಗಳಿಂದಾಗಿ ಸಕ್ಕರೆ ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಇದರಿಂದಾಗಿ ಶೇ.40ರಷ್ಟು ಕಣ್ಣು ಶೇ. 50 ರಷ್ಟು ಮೂತ್ರಪಿಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೃದಯಾಘಾತ, ಲೈಂಗಿಕ ನಿರಾಸಕ್ತಿಗೂ ಕಾರಣವಾಗಬಹುದು ಎಂದು ಎಚ್ಚರಿಸಿದ ಅವರು, ಚಿಕಿತ್ಸೆ ಔಷಧಿಗಳಿಗಿಂತ ರೋಗದ ಮೂಲಕ್ಕೆ ಚಿಕಿತ್ಸೆ ನೀಡುವುದು ಅಗತ್ಯ ಮತ್ತು ಅನಿವಾರ್ಯ. ಈ ಕ್ರಮವೇ ಡಯಾಬಿಟೀಸ್ ರಿವರ್ಸಲ್ ಎಂದು ಪ್ರತಿಪಾದಿಸಿದರು.
ಯಾವುದೇ ಕ್ರಮಗಳನ್ನು 21ದಿನಗಳ ಕಾಲ ಅನುಸರಿಸಿದರೆ ಅದು ಹ್ಯಾಬಿಟ್ ಆಗುತ್ತದೆ. ಅದು 90 ದಿನ ಮುಂದುವರಿದರೆ ಲೈಫ್ ಸ್ಟೈಲ್ ಆಗುತ್ತದೆ. ಇದಕ್ಕಾಗಿಯೇ ವ್ಯಾಯಾಮ, ಬೆಳಗಿನ ನಡಿಗೆಯಂತ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗುತ್ತದೆ ಎಂ ದ ಅವರು, ನಮ್ಮ ಊಟದ ಕ್ರಮದಲ್ಲಿಯೂ ಸುಧಾರಣೆ ಮಾಡಿಕೊಳ್ಳಬೇಕಾಗಿರುವುದು ಅಗತ್ಯ ಎಂದರು.
Diabetes 2019ರಲ್ಲಿ ಸಂಶೋಧನೆ ಮಾಡಿದಾಗ ಇದರಿಂದ ಶೇ. ೮೦ಜನರಿಗೆ ಕಿಡ್ನಿ ಕಣ್ಣು ತೊಂದರೆ ಕಾಣಿಸುತ್ತದೆ. ಆಹಾರದಿಂದ ಶುಗರ್ ಮತ್ತು ಟೆನ್ಷನ್ ಬರುತ್ತದೆ. ಆದರೆ, ವೈದ್ಯರು ಇದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಇದು ರೋಗಿಗಳು ಮಾತ್ರ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯ. ಯಾವುದೇ ವ್ಯಕ್ತಿ ಒಂದು ತಿಂಗಳಿಗೆ ಎರಡು ಕೆ.ಜಿ.ಗಿಂತ ಜಾಸ್ತಿ ತೂಕ ಇಳಿಸಬಾರದು ಎಂದ ಅವರು, ಹಾಗೇ ಇಳಿಸಿದರೆ, ಅಂದಿನಿಂದ ಆರು ತಿಂಗಳಲ್ಲಿ ತೂಕ ಮೊದಲಿಗಿಂತಲೂ ಹೆಚ್ಚಾಗುತ್ತದೆ ಎಂದರು.