SP Mithun Kumar ಅಡಿಕೆ ಮತ್ತು ಇತರೆ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವಾಗ ಮುಂಚಿತವಾಗಿ ಸಾರಿಗೆ ಏಜೆನ್ಸಿಗಳು, ವಾಹನದ ಮಾಲೀಕರು, ವಾಹನದ ಚಾಲಕರು ಮತ್ತು ಸಹಾಯಕರ ಪೂರ್ವಾಪರಗಳನ್ನು ಪರಿಶೀಲಿಸಿ, ಅವರ ಮಾಹಿತಿಯನ್ನು ಪಡೆದು ಖಚಿತಪಡಿಸಿಕೊಂಡ ನಂತರವೇ ಸಾಗಾಟ ಮಾಡುವುದು ಸೂಕ್ತ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಮಿಥುನ್‌ಕುಮಾರ್ ಹೇಳಿದರು.
ಕರ್ನಾಟಕ ಹಸಿ ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ ವತಿಯಿಂದ ಶಿರಾಳಕೊಪ್ಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಶುಂಠಿ ಕಳ್ಳತನ ಪ್ರಕರಣದ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಿದ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಡಿಕೆ ಮತ್ತು ಕೃಷಿ ಉತ್ಪನ್ನಗಳ ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಿಕೊಳ್ಳುವುದು ಅಥವಾ ಇದನÀÄ್ನ ಅಳವಡಿಸಿದ ವಾಹನಗಳಲ್ಲಿಯೇ ಸಾಗಾಟ ಮಾಡುವುದು ಉತ್ತಮ. ಎಲ್ಲಾ ರೈತರು ವರ್ತಕರು ಕಡ್ಡಾಯವಾಗಿ ಬೆಳೆ ಮತ್ತು ದಾಸ್ತಾನಿಗೆ ವಿಮೆ ಮಾಡಿಸಿಕೊಂಡಲ್ಲಿ ಇದರಿಂದ ಬೆಳೆಹಾನಿ ಮತ್ತು ಕಳ್ಳತನದಂತಹ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನ ಒಳಗೆ ಶೀಘ್ರವಾಗಿ SP Mithun Kumar ಆರ್ಥಿಕವಾಗಿ ಪರಿಹಾರ ಸಿಗಲಿದೆ. ವರ್ತಕರು ಹೊರ ರಾಜ್ಯಗಳಿಗೆ ಮತ್ತು ದೂರದ ಪ್ರದೇಶಕ್ಕೆ ತಮ್ಮ ದಾಸ್ತಾನು ಸಾಗಾಟ ಮಾಡುವಾಗ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಿ ಎಂದ ಸಲಹೆ ನೀಡಿದರು.
SP Mithun Kumar ಅಡಿಕೆ& ಇತರೆ ಕೃಷಿ ಉತ್ಪನ್ನ ಸಾಗಣೆಗೆ ಮೊದಲು ವಾಹನದ ಪೂರ್ವಾಪರ ಮಾಹಿತಿಯನ್ನ ವರ್ತಕರು ಅರಿತಿರಬೇಕು- ಮಿಥುನ್ ಕುಮಾರ್
Date: