Agricultural Produce Market Committee ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಿವಮೊಗ್ಗ ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡ ಮತ್ತು ಕೇಸ್ ವರ್ಕರ್ ಯೋಗೇಶ್ ಎಂಬುವವರನ್ನು ಬಂಧಿಸಿದಾರೆ. 50 ಸಾವಿರ ರೂ. ಲಂಚದ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ 14 ಮಳಿಗೆಗಳ ಮರು ಹಂಚಿಕೆಗೆ ಹೈಕೋರ್ಟ್ ಆದೇಶಿಸಿತ್ತು. ಈ ಸಂಬಂಧ ಎಪಿಎಂಸಿಯಿಂದ ಪ್ರಕಟಣೆ ಹೊರಡಿಸಲಾಗಿತ್ತು. ಗೋಪಾಳದ ನಿವಾಸಿ ರವೀಂದ್ರ ವೀರಭದ್ರಪ್ಪ ನೇರಳೆ ಎಂಬುವವರು ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದರು. ಮಾಹಿತಿ ಪಡೆಯಲು ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡ ಅವರನ್ನು ಭೇಟಿಯಾಗಿದ್ದರು. ಆಗ ‘ಹೆಡ್ ಆಫೀಸ್‌ಗೆ ಹೋಗಿ ಸರಿ ಮಾಡಬೇಕು. ಇದಕ್ಕೆ ಖರ್ಚು ಬರಲಿದೆ. ಸ್ವಲ್ಪ ನೋಡಿಕೊಳ್ಳಿʼ ಎಂದು ಕಾರ್ಯದರ್ಶಿ ತಿಳಿಸಿದ್ದರು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಮಿಷನ್ ಏಜೆಂಟ್ ಲೈಸೆನ್ಸ್‌ನ ಕೇಸ್ ವರ್ಕರ್ ಯೋಗೇಶ್ ಎಂಬುವವರನ್ನು ಭೇಟಿಯಾಗುವಂತೆ ತಿಳಿಸಿದ್ದರು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಕೇಸ್ ವರ್ಕರ್ ಯೋಗೇಶ್ 2 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಕೊನೆಗೆ ಒಂದು ಲಕ್ಷ ರೂ.ಗೆ ಒಪ್ಪಿಗೆ ನೀಡಿದ್ದ. ರವೀಂದ್ರ ನೇರಳೆ ಅವರು ಇವತ್ತು ಮುಂಗಡವಾಗಿ 50 ಸಾವಿರ ರೂ. ಹಣ ನೀಡಿದ್ದರು. ಈ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. Agricultural Produce Market Committee ಲಂಚದ ಹಣದೊಂದಿಗೆ ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡ ಮತ್ತು ಕೇಸ್ ವರ್ಕರ್ ಯೋಗೇಶ್‌ನನ್ನು ಅರೆಸ್ಟ್ ಮಾಡಲಾಗಿದೆ.
Agricultural Produce Market Committee ಲೋಕಾಯುಕ್ತ ಬಲೆಗೆ ಬಿದ್ದ ಎಪಿಎಂಸಿ ಈರ್ವರು ಅಧಿಕಾರಿಗಳು
Date:
