Pulse Polio ಪೊಲಿಯೋ ಮುಕ್ತ ಭಾರತ ಆಗಿದ್ದರೂ ಇತರೆ ದೇಶಗಳಲ್ಲಿ ಇನ್ನೂ ಪೊಲಿಯೋ ಸಮಸ್ಯೆ ಇರುವುದರಿಂದ ಪೊಲಿಯೋ ಲಸಿಕೆ ಹಾಕಿಸುವ ಕಾರ್ಯಕ್ರಮ ದೇಶದಲ್ಲಿ ನಡೆಯುತ್ತಿದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಪಲ್ಸ್ ಪೊಲಿಯೋ ಅಧಿಕಾರಿ ಡಾ. ಅವಿನಾಶ್ ಅನಿಸಿಕೆ ವ್ಯಕ್ತಪಡಿಸಿದರು.
ಶಿವಮೊಗ್ಗ, ರಾಜೇಂದ್ರ ನಗರದ ರೋಟರಿ ಪೂರ್ವ ಶಾಲೆಯ ಸಭಾಂಗಣದಲ್ಲಿ ಮಾರ್ಚ್ 3 ರಿಂದ 6ವರೆಗೆ ನಡೆಯುವ ಪೊಲಿಯೋ ಲಸಿಕೆ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೋಟರಿ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಐಎಂಎ ಮಾಜಿ ಅಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾವ್ ಹಾಗೂ ಡಾ.ಅರುಣ್ ಮಾತನಾಡಿ, ಪೊಲಿಯೋ ಲಸಿಕೆ ಬಗ್ಗೆ ಆತಂಕ ಬೇಡ, ಕಡ್ಡಾಯವಾಗಿ ವೈದ್ಯರ ಮಾರ್ಗದರ್ಶನಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಈ ಬಾರಿ ತಪ್ಪದೇ ಲಸಿಕೆ ಹಾಕಿಸಬೇಕು. ನಗರದ ಎಲ್ಲ ಭಾಗಗಳಲ್ಲಿ ಲಸಿಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಶಿವಮೊಗ್ಗದಲ್ಲಿ ನಡೆಯುವ ಪಲ್ಸ್ ಪೊಲಿಯೋ ಅಭಿಯಾನದ ಎಲ್ಲ ಬೂತ್‌ಗಳಲ್ಲಿ ರೋಟರಿ ಕ್ಲಬ್ ಸದಸ್ಯರು ಸಹಕಾರ ನೀಡುತ್ತಿದ್ದಾರೆ.
ಅಭಿಯಾನ ಯಶಸ್ವಿಗೊಳಿಸಲು ಸಂಪೂರ್ಣ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
Pulse Polio ರೋಟರಿ ಮಾಜಿ ಸಹಾಯಕ ಗವರ್ನರ ಜಿ.ವಿಜಯಕುಮಾರ್, ಗಣೇಶ್, ಜೆಸಿಐ ಸಹ್ಯಾದ್ರಿ ಅಧ್ಯಕ್ಷೆ ಡಾ. ಲಲಿತಾ ಭರತ್, ಕಾರ್ಯದರ್ಶಿ ಗಣೇಶ್, ಮಂಜುನಾಥ್ ಕದಂ, ಹಾಗೂ ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಹಾಜರಿದ್ದರು.