BK Sangamesh ಕರ್ನಾಟಕ ರಾಜ್ಯ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ಗೆಲುವಿಗೆ ಮತದಾರ ಪ್ರಭುಗಳ ಶ್ರೀರಕ್ಷೆ ಕಾರಣ. ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರ ಆಶೀರ್ವಾದದಿಂದ ಉನ್ನತ ಸ್ಥಾನ ಲಭಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆ ಸಲ್ಲಿಸುವೆ ಎಂದು ತಿಳಿಸಿದರು.
ಸಾರ್ವಜನಿಕರ ಸಲಹೆ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ಜರಗುತ್ತಿವೆ. ಮುಂದಿನ ದಿನಗಳಲ್ಲಿ ನಿಗಮ ಮಂಡಳಿಯಿಂದ ಸಾಮಾಜಿಕವಾಗಿ, ಪ್ರಾಮಾಣಿಕವಾಗಿ, ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತೇನೆ. ಯಾವುದೇ ಕ್ಷೇತ್ರಗಳು ಅಭಿವೃದ್ಧಿಯಾಗಲು ಸಾರ್ವಜನಿಕರ ಸಹಕಾರ ಅತ್ಯಮೂಲ್ಯ ಎಂದು ಅನಿಸಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸೂಡಾ ಮಾಜಿ ಅಧ್ಯಕ್ಷ ಎಸ್ ಎಸ್ ಜ್ಯೋತಿ ಪ್ರಕಾಶ್ ಮಾತನಾಡಿ, ಬಿ ಕೆ ಸಂಗಮೇಶ್ವರ ಅವರು ನಮ್ಮ ಜಿಲ್ಲೆಯ ಒಂದು ಶಕ್ತಿ, ಅವರಿಗೆ ಇನ್ನೂ ಉನ್ನತ ಸ್ಥಾನ ಮಂತ್ರಿ ಸ್ಥಾನ ಸಿಗಬೇಕಾಗಿತ್ತು. ಬರುವ ದಿನಗಳಲ್ಲಿ ಬೇಗನೆ ಮಂತ್ರಿಯಾಗಿ ಇನ್ನು ಹೆಚ್ಚಿನ ಸೇವೆ ಸಲ್ಲಿಸಲು ನಮ್ಮ ಸಮಾಜದವರು ಅವರ ಅಭಿವೃದ್ಧಿಯಲ್ಲಿ ಸದಾ ನಾವು ಕೈಜೋಡಿಸುತ್ತೇವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ ವಿಜಯಕುಮಾರ್ ಮಾತನಾಡಿ, ಸಂಗಮೇಶ್ವರ ಅವರು ಕ್ಷೇತ್ರ ಅಭಿವೃದ್ಧಿ, ಜನರ ಪ್ರೀತಿ ವಿಶ್ವಾಸ ಹಾಗೂ ಸಾಧನೆಯಿಂದ ಉನ್ನತ ಸ್ಥಾನ ಲಭಿಸಿದೆ ಎಂದರು.
BK Sangamesh ಇದೇ ಸಂದರ್ಭದಲ್ಲಿ ಸಮಾಜದ ವತಿಯಿಂದ ಹೂಗುಚ್ಚ ನೀಡಿ ಆತ್ಮೀಯವಾಗಿ ಗೌರವಿಸಿ ಅಭಿನಯಿಸಲಾಯಿತು.
ಶಾಸಕರ ಸಹೋದರರಾದ ಸಮಾಜ ಸೇವಕ ಬಿ.ಕೆ.ಜಗನ್ನಾಥ್, ಶಾಸಕರ ಮಗ ಬಿ.ಕೆ.ಗಣೇಶ್, ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಕಿರಣ್ ಕುಮಾರ್, ಪದಾಧಿಕಾರಿಗಳಾದ ರವಿಕುಮಾರ್, ಮಲ್ಲಿಕಾರ್ಜುನ ಕಾನೂರ್, ಎಂ ವಿ ಸಜ್ಜನ್ ಶೆಟ್ಟರ್, ಪ್ರೊ. ನೀಲಗುಂದ್, ಚಂದ್ರಶೇಖರ, ರುದ್ರಪ್ಪ, ಭದ್ರಾವತಿ ತಾಲ್ಲೂಕು ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆನಂದಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
